ಬೆಳಗಾವಿ – ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರು ಮತ್ತೆ ಬೀದಿಗೆ ಇಳಿದು ಧರಣಿ ನಡೆಸಿದ್ದಾರೆ. ಮಲಪ್ರಭಾ ಸಕ್ಕರೆ ಕಾರ್ಖಾನೆಯಿಂದ ಎರಡು ವರ್ಷದಿಂದ ಬಾಕಿ ಹಣ ಉಳಿಸಿಕೊಂಡಿದ್ದು, ರೈತರಿಗೆ ಪಾವತಿ ಮಾಡಿಲ್ಲ. ಲಾಕ್ಡೌನ್ನಂತಹ ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ ಹಣ ನೀಡದೆ ಸತಾಯಿಸುತ್ತಿದೆ. ಹೀಗಾಗಿ ಸೋಮವಾರ ರೈತ ಸಂಘದ ನೇತೃತ್ವದಲ್ಲಿ ಬೃತಹ್ ಧರಣಿ ನಡೆಸಿ, ತಕ್ಷಣ ಬಾಕಿ ಹಣ ಪಾವತಿ ಮಾಡಬೇಕು ಎಂದು ಆಗ್ರಹಿಸಿಲಾಗಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ಎಂ ಕೆ ಹುಬ್ಬಳ್ಳಿ ಬಳಿ ಇರೋ ಮಲಪ್ರಭಾ ಸಕ್ಕರೆ ಕಾರ್ಖಾನೆ ಕಳೆದ ಎರಡು ವರ್ಷಗಳಿಂದ ರೈತರಿಗೆ ಬಾಕಿ ಹಣ ನೀಡಿಲ್ಲ. ಸಹಕಾರ ಸಕ್ಕರೆ ಕಾರ್ಖಾನೆಯಾಗಿದ್ದು, ಇಷ್ಟು ದಿನ ಇಂದು, ನಾಳೆ ಅಂತಲೇ ರೈತರು ಹಣಕ್ಕಾಗಿ ಕಾಯುತ್ತಿದ್ದರು. ಆದರೇ ಇದಕ್ಕೆ ಕಾರ್ಖಾನೆ ಜಗ್ಗಲೇ ಇಲ್ಲ.
ಹೀಗಾಗಿ ಕಾರ್ಖಾನೆ ಮುಂದೆ ಬೃಹತ್ ಧರಣಿ ನಡೆಸಿದ್ದರು.
ಬೆಳಗಾವಿ-ಧಾರವಾಡ ರೈಲು ಮಾರ್ಗದ ಯೋಜನಾ ವರದಿಗೆ ಕೇಂದ್ರ ಸರ್ಕಾರ ಒಪ್ಪಿಗೆ; ಸಚಿವ ಸುರೇಶ ಅಂಗಡಿ ಕಾರ್ಖಾನೆಯಿಂದ ರೈತರಿಗೆ 20 ಕೋಟಿಗೂ ಅಧಿಕ ಬಾಕಿ ಹಣ ಬರಬೇಕಿದೆ. ಕಳೆದ ಎರಡು ವರ್ಷಗಳಿಂದ ಈ ಹಣ ಉಳಿದುಕೊಂಡಿದ್ದು, ರೈತರ ಆಕ್ರೋಶಕಕ್ಕೆ ಕಾರಣವಾಗಿದೆ. ಸೋಮವಾರ ರೈತ ಸಂಘದ ನೇತೃತ್ವದಲ್ಲಿ ಕಾರ್ಖಾನೆಯ ಕಚೇರಿ ಬಂದ್ ಮಾಡಿ ಪ್ರತಿಭಟನೆಯನ್ನ ನಡೆಸಿದರು. ರೈತ ಸಂಘದ ಮುಖಂಡರಾದ ಚುನ್ನಪ್ಪ ಪೂಜಾರಿ, ಅಶೋಕ ಯಮಕನಮರಡಿ ನೇತೃತ್ವದಲ್ಲಿ ಬೃಹತ್ ಧರಣಿ ನಡೆಯಿತು.
ಕಿತ್ತೂರು ಕಲ್ಮಠದ ರಾಜಯೋಗೇಂದ್ರ ಸ್ವಾಮೀಜಿ, ಹಬೀಬ್ ಶಿಲೇದಾರ್ ಪ್ರತಿಭಟನೆಯನ್ನು ಬೆಂಬಲಿಸಿದರು. ರೈತರ ಬಾಕಿ ಹಣವನ್ನು ಕಾರ್ಖಾನೆ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದರು. ಸಂಜೆ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಒಂದು ತಿಂಗಳ ಅವಕಾಶ ನೀಡುವಂತೆ ರೈತರಿಗೆ ಮನವಿ ಮಾಡಿದ್ದರು. ಒಂದು ತಿಂಗಳಲ್ಲಿ ಬಾಕಿ ಹಣವನ್ನು ಕಾರ್ಖಾನೆಯಿಂದ ನೀಡುವ ಖಚಿತ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ರೈತರು ಧರಣಿ ವಾಪಸ್ ಪಡೆದುಕೊಂಡಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ರೈತರು ಆರ್ಥಿಕ ಸಮಸ್ಯೆಯನ್ನು ಎದುರಿಸಿದ್ದಾರೆ. ಇಷ್ಟೆಲ್ಲಾ ಗೊತ್ತಿದ್ದರೂ ಕಾರ್ಖಾನೆ ಮಾತ್ರ ಬಾಕಿ ಹಣವನ್ನು ನೀಡಿಲ್ಲ. ಮಲಪ್ರಭಾ ಸಕ್ಕರೆ ಕಾರ್ಖಾನೆ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿದ್ದು, ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ಇದಕ್ಕೆ ಜನಪ್ರತಿನಿಧಿಗಳು ಮಾತ್ರ ಕಾರ್ಖಾನೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಮಸ್ಯೆ ಇತ್ಯರ್ಥಕ್ಕೆ ಪ್ರಮಾಣಿಕ ಪ್ರಯತ್ನ ಮಾಡಿಲ್ಲ ಎನ್ನುವ ಆರೋಪವಿದೆ. ಅನೇಕ ಸಂದರ್ಭದಲ್ಲಿ ಕಾರ್ಖಾನೆಯ ಸಕ್ಕರೆ ಹರಾಜಿಗೆ ಸರ್ಕಾರ ಮುಂದಾಗಿತ್ತು. ಆದರೆ ಅದ್ಯಾವುದು ಸರಿಯಾದ ರೀತಿಯಲ್ಲಿ ಫಲ ನೀಡಿಲ್ಲ.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??