Breaking News

ಯಮಕನಮರಡಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ ಕೇಸ್: ಆರೋಪಿ ಬಂಧನ ಪ್ರೀತಿಯ ವಿಚಾರಕ್ಕೆ ಗುಂಡಿನ ದಾಳಿ ಮಾಡಿದ ಆರೋಪಿ!

Spread the love

ಬೆಳಗಾವಿ: ಯಮಕನಮರಡಿಯಲ್ಲಿ ಡಿ. 16 ರಂದು ಕಾಂಗ್ರೆಸ ಕಾರ್ಯಕರ್ತರನ ಗುಂಡು ಹಾರಿಸಿದ ಪ್ರಕರಣ ಆರೋಪಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಗಣಪತಿ ಗಲ್ಲಿಯ ವಿನಾಯಕ ಹೊರಕೇರಿ ಬಂಧಿತ ಆರೋಪಿ. ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರ ಮಾಡಿ ಗ್ರಾಮದ ಬಸದಿ ಕಟ್ಟೆ ಮೇಲೆ ಕುಳಿತುಕೊಂಡಿದ್ದ ವೇಳೆ ಭರಮಾ ದೂಪದಾಳಿ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ವಿನಾಯಕ ಗುಂಡಿನ ದಾಳಿ ನಡೆಸಿದ್ದ.

 

ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಗುಂಡು ಹಾರಿಸಿದ ಆರೋಪಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನಂತೆ, ಯುವತಿಯ ಸಂಬಂಧಿಕನಾಗಿರು ಭರಮಾ ಆಕೆಗೆ ಬೇರೆ ಯುವಕನೊಂದಿಗೆ ಎಂಗೇಜ್ ಮೆಂಟ್ ಮಾಡಿಸಿದ್ದ. ಪ್ರೀತಿಗೆ ಅಡ್ಡ ಬಂದನೆಂಬ ಕಾರಣಕ್ಕೆ ಗುಂಡಿನ ದಾಳಿ ಮಾಡಿರುವುದಾಗಿ ಆರೋಪಿ ವಿನಾಯಕ ಬಾಯ್ಬಿಟ್ಟಿದ್ದಾನೆ.

 


Spread the love

About Laxminews 24x7

Check Also

ದರ್ಶನ್‌ಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯ ನಿರಾಕರಣೆ ಆರೋಪ: ಕಾರಾಗೃಹಕ್ಕೆ ಭೇಟಿ ನೀಡುವಂತೆ ಕಾರ್ಯದರ್ಶಿಗೆ ಕೋರ್ಟ್ ಸೂಚನೆ

Spread the love ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಅವರು ಜೈಲಿನಲ್ಲಿ ತಮಗೆ ಕನಿಷ್ಠ ಸೌಲಭ್ಯ ನೀಡುತ್ತಿಲ್ಲವೆಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ