Breaking News

ಗ್ರಾಪಂ. ಚುನಾವಣೆ : ಅಧಿಕಾರಕ್ಕಾಗಿ ಸವದಿ-ಕುಮಠಳ್ಳಿ ಬೆಂಬಲಿಗರ ಫೈಟ್ !

Spread the love

ಬೆಳಗಾವಿ : ರಾಜ್ಯದ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಕೋನಟ್ಟಿ ಗ್ರಾಪಂ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಮಹೇಶ ಕುಮಠಳ್ಳಿ ಹಾಗೂ ಲಕ್ಷ್ಮಣ ಸವದಿ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಿದೆ.

ಅಥಣಿ ತಾಲ್ಲೂಕಿನ 149 ಅಭ್ಯರ್ಥಿಗಳು ಕಣದಲ್ಲಿದ್ದು, ಡಿಸೆಂಬರ್ 27 ಕ್ಕೆ ಚುನಾವಣೆ ನಿಗದಿಯಾಗಿದೆ. 56 ಸದಸ್ಯರನ್ನು ಹೊಂದಿರುವ ಸಂಕೋನಟ್ಟಿ ಪಂಚಾಯಿತಿಯಲ್ಲಿ ಬಹುಮತ ಸಾಧಿಸಲು ಬಿಜೆಪಿ ಎರಡೂ ಬಣಗಳು ತಂತ್ರ ಪ್ರತಿತಂತ್ರ ರೂಪಿಸುತ್ತಿವೆ. ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಶಾಸಕ ಮಹೇಶ ಕುಮಠಳ್ಳಿ ಒಂದೇ ಪಕ್ಷದವರಾದರೂ ತಮ್ಮ ಬೆಂಬಲಿಗರ ಗೆಲುವಿಗೆ ತಂತ್ರಗಳು ರೂಪಿಸಿದ್ದಾರೆ ಎನ್ನಲಾಗುತ್ತಿದೆ.

ಸರ್ಕಾರವು ಬಜೆಟ್ ನಲ್ಲಿ ದೊಡ್ಡ ಮಟ್ಟದ ಅನುದಾನ ನಿಗದಿ ಪಡಿಸಿರುವುದು ಅಭ್ಯರ್ಥಿಗಳಿಗೆ ಪ್ರಮುಖ ಆಕರ್ಷಣೆಯಾಗಿದೆ. ಮತದಾರರನ್ನು ಸೆಳೆಯಲು ಈಗಾಗಲೇ ಅಭ್ಯರ್ಥಿಗಳು ಪಾರ್ಟಿ ಮತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

ಪ್ರತಿದಿನ ರಹಸ್ಯವಾಗಿ ರುಚಿಕರವಾದ ಊಟ ಮತ್ತು ಮಧ್ಯ ಮತ್ತು ಹಣ ನೀಡಲಾಗುತ್ತಿದೆ. ಅಥಣಿ ಉಪನಗರಗಳ ಹಲವಾರು ಗ್ರಾಮಸ್ಥರು, ರಾಜಕೀಯ ನಾಯಕರು ತಮ್ಮ ಗುಂಪುಗಳನ್ನು ಗೆಲ್ಲಿಸಿಕೊಳ್ಳಲು ಉತ್ಸುಕರಾಗಿದ್ದಾರೆ.

ಬಿಜೆಪಿ ನಾಲ್ಕು ಗುಂಪುಗಳಾಗಿ ವಿಭಜನೆಯಾಗಿದ್ದು, ಸವದಿ ಮತ್ತು ಕುಮಟಳ್ಳಿ ಗುಂಪು ಅಧಿಕಾರ ಹಿಡಿಯಲು ಹೆಣಗಾಡುತ್ತಿವೆ. ಕಳೆದ ಮೂರು ಅವಧಿಯಲ್ಲಿ ಸವದಿ ಗುಂಪು ಮೇಲುಗೈ ಸಾಧಿಸುತ್ತು, ಇದಕ್ಕೂ ಮುನ್ನ ಕುಮಟಳ್ಳಿ ಗುಂಪು ಸತತ ಮೂರು ಬಾರಿ ಅಧಿಕಾರ ಹಿಡಿದಿತ್ತು.


Spread the love

About Laxminews 24x7

Check Also

ಬೋಟ ಮೂಲಕ ಪ್ರವಾಹ ಪರಿಸ್ಥಿತಿ ಅವಲೋಕಿಸಿದ ‌ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

Spread the love ಬೋಟ ಮೂಲಕ ಪ್ರವಾಹ ಪರಿಸ್ಥಿತಿ ಅವಲೋಕಿಸಿದ ‌ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ