Breaking News

ಬೆಳಗಾವಿ ಉಪಚುನಾವಣೆ ಬಿಜೆಪಿ ಆಕಾಂಕ್ಷಿ ಪಟ್ಟಿಯಲ್ಲಿ ಮತ್ತೊಂದು ಹೆಸರು !

Spread the love

ಬೆಂಗಳೂರು : ಸುರೇಶ್ ಅಂಗಡಿ ನಿಧನ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಲೇ ಇದೆ. ಈಗ ಬಿಜೆಪಿಯಿಂದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೆ ಟಿಕೆಟ್ ನೀಡುವಂತೆ ಆಗ್ರಹ ಕೇಳಿ ಬಂದಿದೆ.

ವಿವಿಧ ಹಿಂದೂಪರ ಸಂಘಟನೆಯ ಮುಖಂಡರು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮುತಾಲಿಕ್ ಕೊಡುಗೆ ಬಹಳಷ್ಟಿದೆ. ಬೆಳಗಾವಿ ಜಿಲ್ಲೆಯಲ್ಲೇ ಮುತಾಲಿಕ್ ಹುಟ್ಟಿ ಬೆಳೆದಿದ್ದಾರೆ.

ಹೀಗಾಗಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಪ್ರಮೋದ್ ಮುತಾಲಿಕ್​ಗೆ ಟಿಕೆಟ್ ನೀಡುವಂತೆ ಹಿಂದೂಪರ ಸಂಘಟನೆಗಳು ಆಗ್ರಹ ಮಾಡಿವೆ.

 

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??

*ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ*: 8123967576
*Laxmi News*

 


Spread the love

About Laxminews 24x7

Check Also

ಕಣ್ಣಿನ ಚಿಕಿತ್ಸೆಗೆ ಮಾಧುರಿ ಜಾಧವ್ ಫೌಂಡೇಶನ್ ಮೂಲಕ ಚೆಕ್ ಹಸ್ತಾಂತರ

Spread the loveಬೆಳಗಾವಿ: ಪಟಾಕಿ ಸ್ಫೋಟದಲ್ಲಿ ಕಣ್ಣು ಕಳೆದುಕೊಂಡ ಶಹಾಪುರದ ಶಿವ ಲೋಹರ್ ಅವರ ಚಿಕಿತ್ಸೆಗೆ ಸಹಾಯದ ಮಹಾಪೂರ ಹರಿದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ