ಬೆಳಗಾವಿ: ಜಿತೋ (ಜೈನ ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆ) ಬೆಳಗಾವಿ ವಿಭಾಗದಿಂದ ಜೈನ ಸಮಾಜದ ಪ್ರತಿಭಾವಂತ ಬಡ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಭಾನುವಾರ ಆರ್ಥಿಕ ನೆರವು ನೀಡಲಾಯಿತು.
‘7 ವರ್ಷಗಳಿಂದಲೂ, ಎಸ್ಸೆಸ್ಸೆಲ್ಸಿ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ನೀಡುತ್ತಿದ್ದೇವೆ. ಪ್ರಸಕ್ತ ಸಾಲಿನಲ್ಲಿ 385 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ತಲಾ ₹ 5ಸಾವಿರ ವಿತರಿಸಲಾಗಿದೆ’ ಎಂದು ಆಯೋಜಕರು ತಿಳಿಸಿದ್ದಾರೆ.
ಮುಖಂಡರಾದ ಶಾಂತಿಲಾಲ ಪೋರವಾಲ, ಶಾಂತಪ್ಪಣ್ಣ ಮಿರ್ಜಿ, ಅಶೋಕ ದನವಾಡೆ, ಜಿತೋ ಬೆಳಗಾವಿ ವಿಭಾಗದ ಅಧ್ಯಕ್ಷ ಮನೋಜ ಸಂಚೇತಿ, ಕಾರ್ಯದರ್ಶಿ ವಿಕ್ರಮ ಜೈನ, ಸಂಜೀವ ದೊಡ್ಡಣ್ಣವರ, ಸುನಿಲ ಕಟಾರಿಯಾ, ಅಭಿಜಿತ ಭೋಜನ್ನವರ, ಅಂಕಿತ ಖೋಡಾ, ನೀತಿನ ಚಿಪ್ರೆ, ಸುನಿಲ ಬಸ್ತವಾಡ, ನರೇಂದ್ರ ಗಾದಿಯಾ, ಮುಖೇಶ ಪೋರವಾಲ, ಬ್ರಹ್ಮನಾಥ ಭೊಜಕರ ಇದ್ದರು.
ವಿನಯಕುಮಾರ ಬಾಳಿಕಾಯಿ ಸ್ವಾಗತಿಸಿದರು. ಸಹ ಅಧ್ಯಕ್ಷ ಅಭಯ ಆದಿಮನಿ ವಂದಿಸಿದರು.