ತುಮಕೂರು: ಬಸ್ ಹತ್ತಲು ಹೋದ ವೇಳೆ ವಿದ್ಯಾರ್ಥಿನಿ ಕಾಲಿನ ಮೇಲೆ ಬಸ್ ಟೈರ್ ಹರಿದು ಕಾಲು ಮುರಿದಿರುವ ಘಟನೆ ತುಮಕೂರು ಬಸ್ ನಿಲ್ದಾಣದಲ್ಲಿ ನಡೆದಿದೆ.
ಹರ್ಷಿತ (17) ಕಾಲು ಮುರಿತಕ್ಕೊಳಗಾದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ. ಬಸ್ ತುಮಕೂರಿನಿಂದ ಮಧುಗಿರಿಗೆ ಹೊರಟಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ ನೂಕಾಟ ತಳ್ಳಾಟ ಉಂಟಾಗಿ ಅವಘಡ ಸಂಭವಿಸಿದೆ.
ವಿದ್ಯಾರ್ಥಿನಿ ಕಾಲಿನ ಮೇಲೆ ಹತ್ತಿದ ಬಸ್ ಟೈರ್ ಹತ್ತಿದ ಪರಿಣಾಮ ಕಾಲು ಮುರಿದಿದೆ. ಸದು ಅಂಬುಲೆನ್ಸ್ ಮೂಲಕ ಹರ್ಷಿತಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹರ್ಷಿತ ತುಮಕೂರಿನ ಸಿದ್ದರಾಮಯ್ಯ ಆಸ್ಪತ್ರೆಯಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದಾಳೆ.
Laxmi News 24×7