ನದಿಗೆ ಉರುಳಿ ಬಿದ್ದ ಬಸ್: 23 ಪ್ರಯಾಣಿಕರ ಸಾವು

Spread the love

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಪದ್ಮಾನದಿಗೆ ಉರುಳಿ ಬಿದ್ದಿದ್ದು, 23 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ನಾಪತ್ತೆಯಾಗಿರುವ ದುರ್ಘಟನೆ ಸಂಭವಿಸಿದೆ.

ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ರಾಜ್‌ಬರಿ ಜಿಲ್ಲೆಯ ನೈಋತ್ಯ ಭಾಗದಲ್ಲಿರುವ ದೌಲಾಡಿಯಾ ಟರ್ಮಿನಲ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಬುಧವಾರ ಸ್ಥಳೀಯ ಸಮಯ ಸಂಜೆ 5:51 ಕ್ಕೆ ಅಪಘಾತ ಸಂಭವಿಸಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಅಧಿಕಾರಿಗಳು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ರಂಜಾನ್ ಹಬ್ಬ ಮುಗಿದ ನಂತರ ಪ್ರಯಾಣಿಕರು ಢಾಕಾಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಬಸ್‌ನೊಳಗೆ ಸಿಲುಕಿ ಬಿದ್ದಿದ್ದ 14 ಶವಗಳು ದೊರೆತಿವೆ ಎಂದು ಅಧಿಕಾರಿಗಳಿ ತಿಳಿಸಿದ್ದಾರೆ

ಅಗ್ನಿಶಾಮಕ ಮತ್ತು ಕರಾವಳಿ ಕಾವಲು ಸಿಬ್ಬಂದಿ, ಮಿಲಿಟರಿ ಮತ್ತು ಪೊಲೀಸರ್ ಸಹಾಯದಿಂದ ಕಾಣೆಯಾದವರನ್ನು ಹುಡುಕಲಾಗುತ್ತಿದೆ. ಅಪಘಾತದ ಸಮಯದಲ್ಲಿ ಬಸ್‌ನಲ್ಲಿ 40 ಪ್ರಯಾಣಿಕರು ಇದ್ದರು ಎಂದು ಎನ್ನಲಾಗಿದೆ. ಅವರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದರು ಎಂದು ತಿಳಿದು ಬಂದಿದೆ.

ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರು ಹೇಗೋ ಬಸ್‌ನಿಂದ ಹೊರ ಬಂದು, ಈಜಿಕೊಂಡು ಮೇಲೆ ಬಂದಿದ್ದಾರೆ. ಅವರನ್ನು ಸ್ಥಳದಲ್ಲಿ ನೆರೆದಿದ್ದ ಜನರು ಮೇಲೆತ್ತಲು ಸಹಾಯ ಮಾಡಿದ್ದಾರೆ. ಆದರೆ ಈಜು ಬಾರದ ಇನ್ನೂ ಹಲವರು ಬಸ್ ಒಳಗಡೆಯೇ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.


Spread the love

About Laxminews 24x7

Check Also

ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ಆಯ್ಕೆ

Spread the loveಟೆಹ್ರಾನ್: ಇರಾನ್‌ನ ಇತಿಹಾಸದಲ್ಲೇ ಅತ್ಯಂತ ಭೀಕರ ಕ್ರಾಂತಿ ಮತ್ತು ಬದಲಾವಣೆಯ ಗಾಳಿ ಬೀಸುತ್ತಿದೆ. ಅಮೇರಿಕಾ-ಇಸ್ರೇಲ್ ಜಂಟಿ ವೈಮಾನಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ