Breaking News

ಜಮೀರ್ ಅವಾಚ್ಯ ಪದ ಬಳಕೆಯಿಂದ ಕಾಂಗ್ರೆಸ್​​ಗೆ ಆಪತ್ತು.. ಶಿಷ್ಯನಿಗೆ ಸಿದ್ದರಾಮಯ್ಯ ಕಿವಿ ಮಾತು

Spread the love

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಪ್ರಚಾರ ತಾರಕ್ಕಕೇರಿದ್ದು, ನಾಯಕರ ನಡುವಿನ ವಾಕ್​ ಸಮರ ವೈಯುಕ್ತಿಕ ಹಂತದವರೆಗೂ ನಡೆದಿದೆ. ಈ ನಡುವೆ ಚಾಮರಾಜಪೇಟೆ ಶಾಸಕ, ಸಿದ್ದರಾಮಯ್ಯ ಅವರ ಆಪ್ತ ಜಮೀರ್ ಅಹ್ಮದ್ ಅವರು ದಳಪತಿಗಳ ವಿರುದ್ಧ ವೈಯುಕ್ತಿಕ ನಿಂದನೆಯನ್ನು ಮಾಡಿದ್ದಾರೆ. ಆದರೆ ಜಮೀರ್ ಅವರ ನಡೆ ಸ್ವಪಕ್ಷೀಯ ನಾಯಕರಿಗೂ ಕೂಡ ಮುಜುಗರ ಮೂಡಿಸಿದ್ದು, ಈ ಬಗ್ಗೆ ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಎರಡು ಕ್ಷೇತ್ರಗಲ್ಲಿ ಶತಾಯಗತಾಯ ಗೆಲ್ಲಬೇಕು.. ಆ ಮೂಲಕ ರಾಜ್ಯ ಆಡಳಿತ ರೂಢ ಬಿಜೆಪಿಗೆ ಮುಖಭಂಗವನ್ನು ಉಂಟುಮಾಡಬೇಕು ಎಂಬುವುದು ಎಂಬ ಗುರಿಯೊಂದಿಗೆ ಕಾಂಗ್ರೆಸ್​ ನಾಯಕರು ಭರ್ಜರಿ ಪ್ರಚಾರ ಕಾರ್ಯವನ್ನು ನಡೆಸುತ್ತಿದ್ದಾರೆ. ಈ ನಡುವೆ ಜಮೀರ್ ಅವರ ಹೇಳಿಕೆಗಳು ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಹಿನ್ನಡೆಯನ್ನು ಉಂಟು ಮಾಡಲಿದೆಯೇ ಎಂಬ ಮಾತುಗಳು ಕೂಡ ಕೇಳಿ ಕೈ ಪಳಯದಲ್ಲಿ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ತಮ್ಮ ಆಪ್ತ ಜಮೀರ್ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಿವಿಮಾತು ಹೇಳಿದ್ದರಂತೆ.

ಶಿಷ್ಯನಿಗೆ ಸಿದ್ದರಾಮಯ್ಯ ಹೇಳಿದ ಕಿವಿಮಾತೇನು!?
ಉಪ ಚುನಾವಣೆ ಪ್ರಚಾರದ ಭರಾಟೆ ರಂಗೇರಿದ್ದು, ಕೈ ನಾಯಕರ ಅಬ್ಬರದ ಪ್ರಚಾರದ ನಡುವೆ ಜಮೀರ್ ಅವರ ಪ್ರಚಾರದ ಭರಾಟೆ ಎಲ್ಲೆ ಮೀರಿದಂತಿದೆ. ಈ ಹಿನ್ನೆಲೆಯಲ್ಲಿ ಜಮೀರ್ ಅವರಿಗೆ ಸಿದ್ದರಾಮಯ್ಯ ಅವರು ಕಿವಿ ಮಾತು ಹೇಳಿದ್ದಾರೆ.

 


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ