Breaking News

ಅನ್ ಲಾಕ್ 4.O ಮಾರ್ಗಸೂಚಿ ಬಿಡುಗಡೆ :ಮೆಟ್ರೋ, ಶಾಲಾ-ಕಾಲೇಜಿಗೆ ಗ್ರೀನ್ ಸಿಗ್ನಲ್..!ಷರತ್ತು ಅನ್ವಯ

Spread the love

ಬೆಂಗಳೂರು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ರಾಜ್ಯ ಸರ್ಕಾರ ಅನ್​ಲಾಕ್ 4.Oರ ಮಾರ್ಗಸೂಚಿ ಹೊರಡಿಸಿದೆ. ಕಂಟೇನ್ಮೆಂಟ್ ವಲಯ ಹೊರತುಪಡಿಸಿ ಎಲ್ಲಾ ಪ್ರದೇಶಗಳಲ್ಲಿ ಇನ್ನಷ್ಟು ಹೆಚ್ಚಿನ ಕಾರ್ಯಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕಂಟೇನ್ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ತೆರವು 4 ರ ಅವಧಿಯಲ್ಲಿ ಶಾಲೆಗಳು, ಕಾಲೇಜುಗಳು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಮುಚ್ಚಿರಲಿವೆ. ಸೆ.20 ರಿಂದ ಜಾರಿಗೆ ಬರುವಂತೆ ಕಂಟೇನ್ಮೆಂಟ್ ವಲಯಗಳ ಹೊರಗಿನ ಪುದೇಶಗಳಲ್ಲಿ ಮಾತ್ರ ಆನ್‌ಲೈನ್ ಬೋಧನೆ/ಟೆಲಿ ಸಮಾಲೋಚನೆ ಹಾಗೂ ತತ್ಸಂಬಂಧಿತ ಕಾರ್ಯಕ್ಕೆ ಶಾಲೆಗಳಿಗೆ ಶೇ.50 ರ ವರೆಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಕರೆಯಲು ಅನುಮತಿಸಬಹುದಾಗಿದೆ.

ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಮಾದರಿ ಕಾರ್ಯವಿಧಾನವನ್ನು (ಎಸ್‌ಓಪಿ) ಹೊರಡಿಸಲಿದೆ.

9 ರಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯುವುದಕ್ಕಾಗಿ ಕಂಟೇನ್ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಮಾತ್ರ ಸ್ವಇಚ್ಛೆಯ ಆಧಾರದ ಮೇಲೆ ತಮ್ಮ ಶಾಲೆಗಳಿಗೆ ಭೇಟಿ ನೀಡಲು ಅನುಮತಿಸಬಹುದಾಗಿದೆ. ಇದು ಅವರ ತಂದೆ-ತಾಯಿಗಳ ಮತ್ತು ಪೋಷಕರ ಲಿಖಿತ ಅನುಮತಿಗೆ ಒಳಪಟ್ಟಿರುತ್ತದೆ ಮತ್ತು ಇದಕ್ಕೆ ಸೆ.21, 2020 ರಿಂದ ಜಾರಿಗೆ ಬರುವಂತೆ ಅನುಮತಿ ನೀಡಲಾಗುವುದು. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಮಾದರಿ ಕಾರ್ಯವಿಧಾನವನ್ನು (ಎಸ್‌ಓಪಿ) ಹೊರಡಿಸಲಿದೆ.

ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು, ಕೈಗಾರಿಕಾ ತರಬೇತಿ ಸಂಖ್ಯೆಗಳು (ಐಟಿಐಗಳು), ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಅಥವಾ ರಾಜ್ಯ ಕೌಶಲ್ಯ ಅಭಿವೃದ್ಧಿ ಮಿಷನ್‌, ಅಲ್ಪಾವಧಿ ತರಬೇತಿ ಕೇಂದ್ರಗಳಲ್ಲಿ ಕೌಶಲ್ಯ ಅಥವಾ ಉದ್ಯಮಶೀಲತೆ ತರಬೇತಿಯನ್ನು ಪಡೆಯುವುದಕ್ಕೆ ಅನುಮತಿ ನೀಡಲಾಗುವುದು. ಅದೇ ರೀತಿ ಪ್ರಯೋಗಾಲಯ ಮತ್ತು ಪ್ರಾಯೋಗಿಕ ಚಟುವಟಿಕೆಗಳ ಅಗತ್ಯವಿರುವ ತಾಂತ್ರಿಕ ಮತ್ತು ವೃತ್ತಿಪರ ಕಾರ್ಯಕ್ರಮಗಳ ಸಂಶೋಧನಾ ವಿದ್ಯಾರ್ಥಿಗಳು (ಪಿ.ಹೆಚ್.ಡಿ) ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ.

ಸೆ.7 ರಿಂದ ಜಾರಿಗೆ ಬರುವಂತೆ ಹಂತಹಂತವಾಗಿ ಮೆಟ್ರೋ ರೈಲಿಗೆ ಅನುಮತಿ ನೀಡಲಾಗುತ್ತದೆ. ಈ ಸಂಬಂಧ ಎಸ್‌ಒಪಿ ಹೊರಡಿಸಲಾಗುತ್ತದೆ. ಇನ್ನು ಸೆ.21ರಿಂದ ಜಾರಿಗೆ ಬರುವಂತೆ ಗರಿಷ್ಠ 100 ಜನರ ಪರಿಮಿತಿಗೆ ಒಳಪಟ್ಟು ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳು ಮತ್ತು ಇತರ ಬೃಹತ್ ಸಭೆಗಳಿಗೆ ಅನುಮತಿ ನೀಡಲು ನಿರ್ಧರಿಸಿದೆ.

ವಿವಾಹ ಸಂಬಂಧಿತ ಸಮಾರಂಭಗಳಿಗೆ ಅತಿಥಿಗಳ ಸಂಖ್ಯೆ 50 ಜನ ಮೀರದಂತೆ ಮತ್ತು ಅಂತ್ಯ ಸಂಸ್ಕಾರ ಸಂಬಂಧಿತ ಕಾರ್ಯಗಳಿಗೆ 20 ಜನರು ಮೀರದಂತೆ ಸೆ.20 ರ ವರೆಗೆ ಅನುಮತಿ ನೀಡಿರುವುದನ್ನು ಮುಂದುವರೆಸಲಾಗಿದೆ. ಬಳಿಕ 100 ಜನರ ಗರಿಷ್ಠ ಮಿತಿ ಅನ್ವಯವಾಗಲಿದೆ. ಸಿನಿಮಾ ಹಾಲ್, ಈಜುಕೊಳ, ಮನರಂಜನಾ ಚಟುವಟಿಕೆಗಳು, ಉದ್ಯಾನವನ, ರಂಗಮಂದಿರಗಳು ಮುಚ್ಚಿರಲಿವೆ. ಸೆ.21ರಿಂದ ಜಾರಿಗೆ ಬರುವಂತೆ ಬಯಲು ಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗುವುದು.


Spread the love

About Laxminews 24x7

Check Also

ಸಾನ್ನಿಹಳ್ಳಿ ಶ್ರೀಗಳು ಜನಗಣತಿ ವಿಷಯ ಆರಂಭವಾದಾಗಿನಿಂದ ವೀರಶೈವ ಲಿಂಗಾಯತರಲ್ಲಿ ಗೊಂದಲ

Spread the love ಸಾನ್ನಿಹಳ್ಳಿ ಶ್ರೀಗಳು ಜನಗಣತಿ ವಿಷಯ ಆರಂಭವಾದಾಗಿನಿಂದ ವೀರಶೈವ ಲಿಂಗಾಯತರಲ್ಲಿ ಗೊಂದಲ ಉಂಟಾಗಿದ್ದು, ಎಲ್ಲ ಸ್ವಾಮೀಜಿಗಳು ಸಮೂದಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ