Breaking News

ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿಯೊಬ್ಬರು ಮೃತ ಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Spread the love

ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿಯೊಬ್ಬರು ಮೃತ ಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೇ ಇದ್ದಿದ್ದಕ್ಕೆ ರೋಗಿ ಕೊನೆಯುಸಿರೆಳೆದಿದ್ದಾರೆ ಎಂದು ಶಾಂತಿನಗರದ ನ್ಯೂ ಮೆಡ್ ಡಯಾಗ್ನೊಸ್ಟಿಕ್ ಸೆಂಟರ್ ವಿರುದ್ಧ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

47 ವರ್ಷದ ರವೀಂದ್ರನಾಥ್ ಎಂಬುವವರು ಕೊರೊನಾ ಸೋಂಕು ನೆಗೆಟಿವ್ ಬಂದ ನಂತರ ಡಿಸ್ಚಾರ್ಜ್ ಆಗಿದ್ದರು. ಆದರೆ ಅವರಿಗೆ ಆಕ್ಸಿಜನ್ ಅವಶ್ಯಕತೆ ಇತ್ತು. ಉಸಿರಾಟದ ಸಮಸ್ಯೆ ಹಿನ್ನೆಲೆ ಮನೆಯಲ್ಲಿ ಆಕ್ಸಿಜನ್ ನೀಡಲಾಗುತ್ತಿತ್ತು. ಡಿಸ್ಚಾರ್ಜ್ ಆದ 20 ದಿನದ ನಂತರ ರೋಗಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಸೋಕಿನಿಂದಾಗಿ (ಇನ್ಫೆಕ್ಷನ್​) ಗುಳ್ಳೆಗಳು ಕಾಣಿಸಿಕೊಂಡಿದ್ದವು. ವಿಕ್ರಮ್ ಆಸ್ಪತ್ರೆಯಲ್ಲಿ 4 ಭಾರಿ MRI ಸ್ಕ್ಯಾನಿಂಗ್ ಮಾಡಿಸಲಾಗಿತ್ತು.

 

 

    

 

ಎಲ್ಲಾ ರಿಪೋರ್ಟ್​ಗಳು ನಾರ್ಮಲ್ ಬಂದಿತ್ತು. ಬಳಿಕ ನ್ಯೂ ಮೆಡ್ ಡಯಾಗ್ನೊಸ್ಟಿಕ್ ಸೆಂಟರ್​ಗೆ ರವಾನಿಸಲಾಯಿತು.

ಆಕ್ಸಿಜನ್ ಪೈಪ್ ಕನೆಕ್ಟ್ ಮಾಡೋಕೆ ಒದ್ದಾಡಿದ ಸಿಬ್ಬಂದಿ
ನವೆಂಬರ್ 7 ರಂದು ರೋಗಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ರೋಗಿಯ ಸ್ಥಿತಿ ಗಂಭೀರವಾಗಿದ್ದರೂ ಯಾವ ವೈದ್ಯರೂ ಚಿಕಿತ್ಸೆಗೆ ಮುಂದಾಗಿರಲಿಲ್ಲ. ರೋಗಿಯ ಕುಟುಂಬಸ್ಥರು ವೈದ್ಯರನ್ನು ಕೂಗಿ ಕರೆದಾಗ 20 ನಿಮಿಷದ ನಂತರ ಸಿಬ್ಬಂದಿ ಬಂದರು. MRI ಸ್ಕ್ಯಾನಿಂಗ್ ಮಾಡುವ ವೇಳೆ ಆಕ್ಸಿಜನ್ ಪೈಪ್ ಕನೆಕ್ಟ್ ಮಾಡಬೇಕಿತ್ತು. ಆದರೆ ಈ ವೇಳೆ ಅರ್ಧ ಗಂಟೆ ಕಾಲ ಸಿಬ್ಬಂದಿ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ. ಅಲ್ಲಿ ಇಬ್ಬರು ಸಿಬ್ಬಂದಿಯಿದ್ದು ಅವರಿಗೆ ಆಕ್ಸಿಜನ್ ಪೈಪ್ ಹೇಗೆ ಕನೆಕ್ಟ್ ಮಾಡುವುದು, ಏನೂ ಕೂಡ ಗೊತ್ತಿಲ್ಲ. MRI ಸ್ಕ್ಯಾನಿಂಗ್ ವಾರ್ಡ್​ನಲ್ಲಿ 3 ಸಿಲಿಂಡರ್​ಗಳು ಖಾಲಿ ಇದ್ದವು. ಒಂದರಲ್ಲೂ ಆಕ್ಸಿಜನ್ ಇರಲಿಲ್ಲ. ಅಲ್ಲೆ ಇದ್ದ ಕೆಲ ಆಸ್ಪತ್ರೆ ಸಿಬ್ಬಂದಿ ಕೈ ಕಟ್ಟಿಕೊಂಡು ನಿಂತಿದ್ದರು.

ಈ ವೇಳೆ ರೋಗಿ ಕುಟುಂಬಸ್ಥರು ಹಾಗೂ ಆಸ್ಪತ್ರೆ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ರವೀಂದ್ರನಾಥ್ ತಮ್ಮ ಮೂವರು ಮಕ್ಕಳನ್ನು ಅಗಲಿದ್ದಾರೆ. ಅತ್ತ, ರವೀಂದ್ರ ನಾಥ್ ಪತ್ನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಆಸ್ಪತ್ರೆ ಒಳಗೆ ನಡೆದ ಇಡೀ ಘಟನೆಯ ವಿಡಿಯೋ ಟಿವಿ9 ಗೆ ಸಿಕ್ಕಿದೆ. ಕುಟುಂಬಸ್ಥರು SR ನಗರ ಪೊಲೀಸ್ ಸ್ಟೇಷನ್ ಮೊರೆ ಹೋಗಿದ್ದು, ಅಲ್ಲಿಯೂ ಪೊಲೀಸರು ಬೇಜವಾಬ್ದಾರಿತನ ತೋರಿದ್ದಾರಂತೆ. ಈ ಬಗ್ಗೆ ಕುಟುಂಬಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ