ಬೆಂಗಳೂರು: ಇಂದಿನಿಂದ ನಾಡಿನಾದ್ಯಂತ ನವರಾತ್ರಿ ಹಬ್ಬದ ಸಂಭ್ರಮ ಶುರುವಾಗಿದೆ. ನವರಾತ್ರಿಯ ಮೊದಲ ದಿನದ ಹಿನ್ನೆಲೆಯಲ್ಲಿ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿದೆ.
ಇಂದು ತಾಯಿ ಬನಶಂಕರಿಗೆ ಅರಿಶಿನ ಕೊಂಬಿನ ಅಲಂಕಾರ ಮಾಡಲಾಗಿದ್ದು ಭಕ್ತರ ಮನ ಸೆಳೆದಿದ್ದಾಳೆ. ದೇವಿಯ ದರ್ಶನ ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ರು. ದೇವಿಗೆ ತುಪ್ಪ ಹಾಗೂ ನಿಂಬೆಹಣ್ಣಿನ ದೀಪ ಬೆಳಗುವ ಮೂಲಕ ಭಕ್ತರು ದೇವಿಗೆ ನಮಿಸಿದ್ರು. ದೇವಸ್ಥಾನದಲ್ಲಿ ನವರಾತ್ರಿಯ ರಂಗು ಮೇಳೈಸಿದೆ.
ಕೊರೊನಾ ಹಿನ್ನೆಲೆಯಲ್ಲಿ ಎಲ್ಲಾ ರೀತಿ ಮನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ದೇವಿಯ ದರ್ಶನಕ್ಕೆ ಬರುವವರು ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿದೆ.


Laxmi News 24×7