ಬೆಂಗಳೂರು,: ಕರ್ನಾಟಕ ಅಗ್ನಿಶಾಮಕ ತುರ್ತು ಸೇವೆಗಳ ಸಹಯೋಗದಲ್ಲಿ ವೈಟ್‍ಫೀಲ್ಡ್‍ನಲ್ಲಿರುವ ಅಲೋಫ್ಟ್ ಹೋಟೆಲ್‍ನಲ್ಲಿ ಅಗ್ನಿಶಾಮಕ ತರಬೇತಿ ಮತ್ತು ಪಾರುಗಾಣಿಕಾ ತರಬೇತಿ ನಡೆಸಲಾಯಿತು.
ಜಿಲ್ಲಾ ಅಗ್ನಿಶಾಮಕ ಅಕಾರಿ ಸಿದ್ದಣ್ಣ, ರೇವಪುಟ್ಟಿ, ಅಗ್ನಿಶಾಮಕ ಸಿಬ್ಬಂದಿ ಕಾಶಿನಾಥ್ ಅಲಗೆವಿ, ಬಾಬು ಸಮನೆ ಅವರ ನೇತೃತ್ವದಲ್ಲಿ ಸಿಬ್ಬಂದಿಗೆ ತರಬೇತಿ ನೀಡಲಾಯಿತು.
ತರಬೇತಿಯಲ್ಲಿ ಜನರನ್ನು ಎತ್ತರದ ಕ್ಕಡದಿಂದ ರಕ್ಷಿಸುವುದು ಹೇಗೆ, ಎಲ್‍ಪಿಜಿ ಗ್ಯಾಸ್ ಸಿಲಿಂಡರ್‍ಗಳ ಸುರಕ್ಷಿತ ಬಳಕೆ, ಅಗ್ನಿಶಾಮಕ ಸಾಧನಗಳ ಬಲಕೆ, ಅಗ್ನಿಶಾಮಕ ರೀಲ್‍ಗಳ ಬಳಕೆ, ರಕ್ಷಣಾ ಕಾರ್ಯಾಚರಣೆ ತರಬೇತಿ ನೀಡಲಾಯಿಉತ. ಲೈವ್ ಅಗ್ನಿಶಾಮಕ ತರಬೇತಿ ಸಹ ನಡೆಸಲಾಯಿತು.
ತರಬೇತಿ ಶಿಬಿರವನ್ನು ಭದ್ರತಾ ವ್ಯವಸ್ಥಾಪಕ ಅಬ್ದುಲ್ ಜಬ್ಬರ್ ರಹೀಂ ಗುಲ್ಮಾರ್ ಅಹ್ಮದ್ ಆಯೋಜಿಸಿದ್ದರು.
ಜನರಲ್ ಮ್ಯಾನೇಜರ್‍ಡೀಲೆಷ್ ಬೋಲನ್, ಎಂಜಿನಿಯರಿಂಗ್ ನಿರ್ದೇಶ ವಿನ್ಸೆಂಟ್, ಆಹಾರ ಮತ್ತು ಪಾನೀಯಗಳ ಸಹಾಯಕ ನಿರ್ದೇಶಕ ರವಿ, ಸಹಾಯಕ ಹಣಕಾಸು ನಿಯಂತ್ರಕ ಮಹೇಶ್, ರಿಫ್ರೆಸ್ ಮ್ಯಾನೇಜ್ ಶ್ರೀಧರ್, ಮುಂಭಾಗದ ಕಚೇರಿ ವ್ಯವಸ್ಥಾಪಕ ತಾಹೀರಾ, ಮಾರಾಟ ವ್ಯವಸ್ಥಾಪಕ ಮಹಂದ್ರೇನ್, ಮಹೇಶ್ ಬಾಬು, ಸೇರಿದಂತೆ ದಿವ್ಯಾಂಶ ಮತ್ತು ಬಂಚ್ ಆಫ್ ಸ್ಮಾಫ್ಸ್, ಬಿಸಾಡೊ ಸೆಕ್ಯುರಿಟಿ ಸರ್ವೀಸಸ್‍ನ ಸೆಕ್ಯುರಿಟಿ ಗಾರ್ಡ್‍ಗಳ ತಂಡವೂ ತರಬೇತಿಯಲ್ಲಿ ಭಾಗವಹಿಸಿತ್ತು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??