Breaking News

ಎಲ್ಲದಕ್ಕೂ ಸಿದ್ಧರಾಗಿ, ಖಾಸಗಿ ಕಾರಿನಲ್ಲಿ ಸಿಎಂ ಮನೆಗೆ ಬಂದ ರಾಮುಲು

Spread the love

ಬೆಂಗಳೂರು: ಸಚಿವ ಬಿ. ಶ್ರೀರಾಮುಲು ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಸಿಎಂ ಬಿಎಸ್​ವೈ ಮತ್ತು ರಾಮುಲು ಮಹತ್ವದ ಭೇಟಿಗೆ ಕೌಂಟ್​ಡೌನ್ ಶುರುವಾಗಿದೆ. ಚಿಕ್ಕಜಾಲ ಬಳಿಯ ಫಾರ್ಮ್​ಹೌಸ್​ನಿಂದ ನೇರವಾಗಿ ಸಿಎಂ ನಿವಾಸಕ್ಕೆ ರಾಮುಲು ಹೊರಟುಬಂದಿದ್ದಾರೆ. ಇನ್ನೂ ಗರಂ ಆಗಿರೋ ಶ್ರೀರಾಮುಲು ಅವರನ್ನ ಮಾತುಕತೆ ನಡೆಸಿ ಮನವೊಲಿಕೆ ಮಾಡ್ತಾರಾ ಸಿಎಂ ಎಂದು ಕಾದು ನೋಡಬೇಕಿದೆ.

 ಇನ್ನು ಸಿಎಂ ಭೇಟಿ ವೇಳೆ 2 ಖಾತೆ ಬೇಕು ಅಂತಾ ರಾಮುಲು ಪಟ್ಟು ಹಿಡೀತಾರಾ?

ಅಥವಾ ಸಿಎಂ ಬಿಎಸ್​ವೈ ಒಂದೇ ಖಾತೆ ಕೊಟ್ಟು ಮುಂದೆ ಒಳ್ಳೇದಾಗುತ್ತೆ ಅಂತಾರಾ? ಏನು ಚರ್ಚೆಗಳಾಗಬಹುದು ಎಂಬುವುದರ ಬಗ್ಗೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಉಂಟಾಗಿದೆ.

 

ಸುಧಾಕರ್ ಜೊತೆ ಸಂಧಾನ?
ಇದೇ ಸಂದರ್ಭದಲ್ಲಿ ಸಚಿವ ಸುಧಾಕರ್ ಕೂಡ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದರೊಂದಿಗೆ ರಾಮುಲು-ಸುಧಾಕರ್​ ಮಧ್ಯೆ ಸಂಧಾನ ನಡೆಸುತ್ತಾರಾ ಸಿಎಂ ಯಡಿಯೂರಪ್ಪ ಎಂಬ ಉತೂಹಲವೂ ಮೂಡಿದೆ.


Spread the love

About Laxminews 24x7

Check Also

ಲಿಂಗಾಯಿತ ಧರ್ಮದಲ್ಲಿರುವ ಜಂಗಮರು ಬೇಡ, ಬುಡ್ಗ ಜಂಗಮರಲ್ಲ: ಹೈಕೋರ್ಟ್​ ಸ್ಪಷ್ಟನೆ

Spread the love ಬೆಂಗಳೂರು: ವೀರಶೈವ ಲಿಂಗಾಯಿತ ಧರ್ಮದಲ್ಲಿರುವ ಜಂಗಮರು ‘ಬೇಡ’ ಅಥವಾ ‘ಬುಡ್ಗ’ ಜಂಗಮರಲ್ಲ. ಲಿಂಗಾಯಿತರಲ್ಲಿನ ಜಂಗಮರು ತಾವು ಬೇಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ