ಬೆಂಗಳೂರು: ಮಹಾಮಾರಿ ಕೊರೊನಾದಿಂದ ಈಗ ತಾನೇ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದ್ದೇವೆ. ಆದ್ರೆ ಈಗ ಮತ್ತೇ ಆ ದಿನಗಳು ಮರುಕಳಿಸುತ್ತಾ ಎಂಬ ಆತಂಕ ಉಂಟಾಗಿದೆ. ಮತ್ತೆ ವಾಪಸ್ ಬರುತ್ತಿದೆಯಾ ಹೋಂ ಕ್ವಾರಂಟೈನ್ ನಿಯಮಗಳು? ಎಂಬ ಪ್ರಶ್ನೆ ಎದ್ದಿದೆ.
ಕರುನಾಡಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಹಾಗೂ ರಾಜಧಾನಿಯಲ್ಲಿಯೇ 3,362 ಮಂದಿ ಜೀವ ಕಳೆದುಕೊಂಡಿದ್ದಾರೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 3,498 ಮಂದಿಗೆ ವೈರಸ್ ಅಟ್ಯಾಕ್ ಆಗಿದೆ.
ಇನ್ನು 2,85,055 ಸೋಂಕಿತರು ಸಿಲಿಕಾನ್ ಸಿಟಿಯಲ್ಲಿದ್ದಾರೆ. ಕೊರೊನಾ ಬಂದು ಏಳೆಂಟು ತಿಂಗಳಾದ್ರೂ ರಾಜ್ಯ ಹೆಮ್ಮಾರಿಯನ್ನು ಹಿಮ್ಮೆಟ್ಟಿಸುವಲ್ಲಿ ವಿಫಲವಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.
ರಾಜ್ಯದಲ್ಲಿ ಯಾಕೆ ಕಂಟ್ರೋಲ್ಗೆ ಬರ್ತಿಲ್ಲ ಕ್ರೂರಿ ಕೊರೊನಾ?
ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ ಆಗದಿರಲು ಕಾರಣವೇನು?ಯಾಕೆ ಕಿಲ್ಲರ್ ಕೊರೊನಾ ಕಂಟ್ರೋಲ್ ಗೆ ಬರ್ತಿಲ್ಲ ಗೊತ್ತಾ?ಅದಕ್ಕೇ ಸರ್ಕಾರದ ನಿರ್ಲಕ್ಷ್ಯ, ಹಾಗೂ ಸಾರ್ವಜನಿಕರ ನಿರ್ಲಕ್ಷ್ಯವೇ ಕಾರಣ. ರಾಜ್ಯದಲ್ಲಿ ಕೊರೊನಾ ಸಂಪರ್ಕಿತರ ಓಡಾಟ ಹೆಚ್ಚಾಗುತ್ತಿದೆ. ಇದೊಂದೇ ಕಾರಣದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಸರಿಯಾಗಿ ಹೋಂ ಕ್ವಾರಂಟೈನ್ ಪಾಲಗೆಯಾಗ್ತಿಲ್ಲ. ಬೇಕಾಬಿಟ್ಟಿಯಾಗಿ ಜನ ಓಡಾಡ್ತಿದ್ದಾರೆ. ಕ್ವಾರಂಟೈನ್ ಉಲ್ಲಂಘನೆಯಿಂದ ಸೋಂಕು ಹೆಚ್ಚಾಗಿ ಹರಡುತ್ತಿದೆ. ಹೀಗಾಗಿ ನಿಯಮ ಉಲ್ಲಂಘಿಸಿದ್ರೆ ಮತ್ತೆ ಸಾಂಸ್ಥಿಕ ಕ್ವಾರಂಟೈನ್ಗೆ ಸ್ಥಳಾಂತರ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಕೊರೊನಾ ಕಟ್ಟಿಹಾಕಲು ರಿವರ್ಸ್ ಐಸೋಲೇಶನ್:
ಸರ್ಕಾರಕ್ಕೆ ತಜ್ಞರು ರಿವರ್ಸ್ ಐಸೋಲೇಶನ್ ಸಲಹೆ ನೀಡಿದ್ದಾರೆ.ರಿವರ್ಸ್ ಕ್ವಾರಂಟೈನ್ನಿಂದ ಸಾವಿನ ಪ್ರಮಾಣ ತಗ್ಗಿಸಬಹುದು.ಚಿಕ್ಕ ಮಕ್ಕಳು,ವಯೋವೃದ್ಧರು, ಗರ್ಭಿಣಿಯರು, ಗಂಭೀರ ಖಾಯಿಲೆಯಿಂದ ಬಳಲುವರನ್ನು ರಿವರ್ಸ್ ಕ್ವಾರಂಟೈನ್ ಮಾಡಬೇಕು.83ಲಕ್ಷಕ್ಕೂ ಅಧಿಕ ಜನರನ್ನ ಗೃಹ ಬಂಧಿ ಮಾಡುವ ಅನಿವಾರ್ಯತೆ
ರಾಜ್ಯದಲ್ಲಿದೆ ಎಂದು ತಜ್ಞರು ಸರ್ಕಾರಕ್ಕೆ ರಿವರ್ಸ್ ಕ್ವಾರಂಟೈನ್ ಬೆಸ್ಟ್ ಅನ್ನೊ ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ 4ಲಕ್ಷ ಜನರಿಂದ ಹೋಂ ಕ್ವಾರಂಟೈನ್ ಉಲ್ಲಂಘನೆ:
ಇನ್ನು ಈ ರೀತಿ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ FIR ದಾಖಲಾಗುತ್ತೆ. ಸೋಂಕು ಹೆಚ್ಚಾಗಲು ನಿಯಮ ಉಲ್ಲಂಘನೆ ಕೂಡ ಪ್ರಮುಖ ಕಾರಣವಾಗಿದೆ. ಹಾಗೂ ಈವರೆಗೆ 4ಲಕ್ಷ ಮಂದಿಯಿಂದ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆಯಾಗಿದೆ. ಈ ಪೈಕಿ 2,916 ಮಂದಿ ವಿರುದ್ಧ ಪೊಲೀಸರಿಂದ FIR ದಾಖಲಾಗಿದೆ. ಬಿಗಿಯಾಗಿದ್ದ ಹೋಂ ಕ್ವಾರಂಟೈನ್ ಸಡಿಲಿಕೆಯೇ ಉಲ್ಲಂಘನೆಗೆ ಕಾರಣವಾಗಿದೆ. ಸದ್ಯ ವಿದೇಶದಿಂದ ಬಂದವರಿಗೆ ಮಾತ್ರವೇ 7 ದಿನ ಹೋಂ ಕ್ವಾರಂಟೈನ್ ವಿಧಿಸುವ ನಿಯಮ ಜಾರಿಯಲ್ಲಿದೆ. ನಿಯಮ ಉಲ್ಲಂಘಿಸಿದ್ರೆ ವಿಪತ್ತು ನಿರ್ವಹಣೆ ಕಾಯ್ದೆ ಪ್ರಕಾರ ಶಿಕ್ಷೆ ನೀಡಲಾಗುತ್ತೆ. ಈವರೆಗೂ 4ಲಕ್ಷದ 19 ಸಾವಿರದ 804 ಮಂದಿಯಿಂದ ನಿಯಮ ಉಲ್ಲಂಘನೆಯಾಗಿದೆ. ಈ ಪೈಕಿ 5 ಸಾವಿರ ಮಂದಿಯನ್ನ ಸಾಂಸ್ಥಿಕ ಕ್ವಾರಂಟೈನ್ ಗೆ ಸ್ಥಳಾಂತರ ಮಾಡಲಾಗಿದೆ. ಪದೇ ಪದೆ ನಿಯಮ ಉಲ್ಲಂಘಿಸಿದ 2,916 ಮಂದಿ ವಿರುದ್ಧ FIR ದಾಖಲಾಗಿದೆ.