Breaking News

ಐಟಿ ಸಿಟಿ ಬೆಂಗಳೂರು.. ಟೆರರಿಸ್ಟ್​ ಸಿಟಿಯಾಗಿ ಬದಲು! ರಾಜಧಾನಿಯಲ್ಲಿ ಉಗ್ರರಿಗೆ ತರಬೇತಿ

Spread the love

ಬೆಂಗಳೂರು: ರಾಜಧಾನಿ ಜನರು ಬೆಚ್ಚಿಬೀಳುವಂತಹ ಅತ್ಯಂತ ಭಯಾನಕ ಸುದ್ದಿಯೊಂದು ಹೊರ ಬಿದ್ದಿದೆ. ನಗರದ ಹೊರವಲಯದಲ್ಲೇ ಐಸಿಸ್ ಉಗ್ರರ ಕ್ಯಾಂಪ್​ಗಳಿವೆಯಂತೆ. ಈ ಕ್ರಿಮಿಗಳು ಕ್ಯಾಂಪ್ ಮಾಡಿ ವಿಧ್ವಂಸಕ ಕೃತ್ಯ ಸಂಚು ರೂಪಿಸುತ್ತಿದ್ರಂತೆ. ಓಲ್ಡ್ ಮದ್ರಾಸ್ ರಸ್ತೆಯ ಸುತ್ತಮುತ್ತ ಉಗ್ರರಿಗೆ ಟ್ರೇನಿಂಗ್ ನೀಡಲಾಗುತ್ತಿದೆಯಂತೆ. ಕುರಾನ್ ಸರ್ಕಲ್ ಗ್ರೂಪ್ ಮಾಡಿ ಯುವಕರನ್ನ ಕರೆಸಿಕೊಳ್ತಿದ್ರು ನಂತರ ಅವರಿಗೆ ಟ್ರೇನಿಂಗ್ ಕೊಟ್ಟು ಉಗ್ರರನ್ನಾಗಿ ಮಾಡ್ತಿದ್ರು ಎಂಬ ಭಯಾನಕ ಸುದ್ದಿ ಬಹಿರಂಗಗೊಂಡಿದೆ.

ಮೇಕಿಂಗ್ ಆಫ್ ಫ್ಯೂಚರ್ ಇಸ್ಲಾಮಿಕ್ ಸ್ಟೇಟ್:
ಇಕ್ಬಾಲ್ ಜಮೀರ್ ಎಂಬಾತನಿಂದ ಕ್ಯಾಂಪ್ ಆಯೋಜನೆಯಾಗುತ್ತಿತ್ತು. ಈತ ಸೌದಿಯಲ್ಲೇ ಕುಳಿತು ಸಂಚು ರೂಪಿಸ್ತಿದ್ದ. ನಂತರ ಕ್ಯಾಂಪ್​ನಲ್ಲಿ ದುಷ್ಕೃತ್ಯಗಳ ಬಗ್ಗೆ ಭಯೋತ್ಪಾದಕರಿಂದ ಮಹಾ ಸಂಚು ರೆಡಿಯಾಗುತ್ತಿತ್ತು. ‘ಮೇಕಿಂಗ್ ಆಫ್ ಫ್ಯೂಚರ್ ಇಸ್ಲಾಮಿಕ್ ಸ್ಟೇಟ್’ ಎಂಬ ಸ್ಲೋಗನ್ ಅಡಿ ಈ ಕೃತ್ಯ ಎಸಗಲಾಗುತ್ತಿತ್ತಂತೆ.

ಐಸಿಸ್ ಕ್ರಿಮಿಗಳ ತವರೂರು ರಾಜಧಾನಿ ಬೆಂಗಳೂರು!
ಐಸಿಸ್ ಭಯೋತ್ಪಾದಕರಿಗೂ ಬೆಂಗಳೂರಿಗೂ ಭಾರಿ ಲಿಂಕ್ ಇದೆ. ಇವರು ಬೆಂಗಳೂರನ್ನು ತಮ್ಮ ತವರೂರು ಮಾಡಿಕೊಂಡಿದ್ದರು. 2017 ರಲ್ಲಿ ಅಮೆರಿಕ-ಸಿರಿಯಾ ಮಧ್ಯೆ ಯುದ್ಧ ಶುರುವಾಗಿತ್ತು. ಈ ವೇಳೆ ಬೆಂಗಳೂರಿನ 7 ಮಂದಿ ISIS ಪರವಾಗಿ ಕೆಲಸ ಮಾಡಿದ್ದರು. ಗುರಪ್ಪನಪಾಳ್ಯ, ಬಿಸ್ಮಿಲ್ಲಾನಗರದ 7 ಮಂದಿ ಭಾಗಿಯಾಗಿದ್ದರು. ಅವರಲ್ಲಿ ಇಬ್ಬರು ಬಲಿಯಾಗಿದ್ದು, ಐವರು ಗಾಯಗೊಂಡು ವಾಪಸ್ ಆಗಿದ್ದರು. ಆದರೆ ಈಗ ಅವರು ನಾಪತ್ತೆಯಾಗಿದ್ದಾರೆ. ಅವರಿಗಾಗಿ NIA ತಲಾಶ್ ನಡೆಸುತ್ತಿದೆ. ಈಗಾಗ್ಲೇ ಯುವಕರ ಕಳಿಸಿದ್ದ ಇಬ್ಬರಿಗೆ ಎನ್‌ಐಎ ಖೆಡ್ಡಾ ತೋಡಿದೆ.

ಅಬ್ದುಲ್ ರೆಹಮಾನ್ ಬೇಟೆ ಬಳಿಕ ಸಂಚಿನ ಸೀಕ್ರೆಟ್ ಬಯಲು!
45 ದಿನಗಳ ಹಿಂದೆ ಡಾಕ್ಟರ್ ಅಬ್ದುಲ್ ರೆಹಮಾನ್​ನನ್ನು ಎನ್​ಐಎ ಟೀಂ ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿತ್ತು. ಅಲ್ಲದೆ ಶಂಕಿತ ಉಗ್ರರ ಹಿನ್ನೆಲೆ ಜಾಲಾಡಿದ ಎನ್​ಐಎ ಅಧಿಕಾರಿಗಳು ಅಬ್ದುಲ್ ಖಾದರ್, ಇರ್ಫಾನ್ ನಾಸೀರ್​ನನ್ನು ಬಂಧಿಸಿ ಗ್ರಿಲ್ ಮಾಡಿದ್ರು. ಈ ಉಗ್ರರು ಸಿರಿಯಾದಲ್ಲಿ ನಡೆದಿದೆ ಎನ್ನಲಾದ ಮುಸ್ಲಿಂರ ವಿರುದ್ಧದ ದೌರ್ಜನ್ಯದ ವಿಡಿಯೋ ಹರಿಬಿಟ್ಟು ಪ್ರಚೋದನೆ ಮಾಡಿ ಯುವಕರನ್ನ ದೇಶದ ಗಡಿ ದಾಟಿಸ್ತಿದ್ರು. ಖಾದರ್, ನಾಸೀರ್ ಪ್ರಚೋದನೆಯಿಂದ ಈಗಾಗ್ಲೇ ಕೆಲ ಯುವಕರು ಐಸಿಸ್​ಗೆ ಸೇರಿ ಉಗ್ರರಿಗೆ ಸಹಾಯಕರಾಗಿದ್ದಾರೆ.

ಐಟಿ ಸಿಟಿಯಾಗಿದ್ದ ಬೆಂಗಳೂರು.. ಟೆರರಿಸ್ಟ್​ ಸಿಟಿಯಾಗಿ ಬದಲು..!
ಶಂಕಿತ ಉಗ್ರರ ಬ್ಯಾಂಕ್ ಅಕೌಂಟ್​ಗಳು ಸಾಕ್ಷಿ ಬಿಚ್ಚಿಟ್ಟಿವೆ. ISIS ಸಂಘಟನೆ ಉಗ್ರರ ಕ್ಯಾಂಪ್​ಗೆ ಫಂಡಿಂಗ್ ಮಾಡ್ತಿದೆಯಂತೆ. ಇತ್ತೀಚೆಗೆ ಹಿಜ್ಬ್ ಉತ್ ತೆಹಿರ್​ ಸಂಘಟನೆಯಿಂದ ಫಂಡಿಂಗ್ ಆಗಿದೆ. ಸೌದಿಯಿಂದ ಹಣ ಬಂದಿರೋದು ಕೂಡ ತನಿಖೆಯಲ್ಲಿ ಪತ್ತೆಯಾಗಿದೆ. ಅಬ್ದುಲ್ ಖಾದರ್ ಫಂಡ್ ಸಂಗ್ರಹಿಸಿರೋ ಬಗ್ಗೆ ದಾಖಲೆ ಸಹ ಸಂಗ್ರಹವಾಗಿದೆ. ಉಗ್ರರು ಮುಸ್ಲಿಂ ರಾಷ್ಟ್ರ ನಿರ್ಮಾಣದ ಬಗ್ಗೆ ಕೆಲ ಯುವಕರಿಗೆ ಇಮೇಲ್ ಕಳಿಸಿರೋದು ತಿಳಿದುಬಂದಿದೆ. ಸದ್ಯ ಎನ್​ಐಎ ಅಧಿಕಾರಿಗಳಿಂದ ತನಿಖೆ ಮುಂದುವರಿದಿದೆ.


Spread the love

About Laxminews 24x7

Check Also

2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?: ಮುಖ್ಯಮಂತ್ರಿ ಸಿದ್ದರಾಮಯ್ಯ*

Spread the love 2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?: ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ(ಶಿಡ್ಲಘಟ್ಟ), …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ