Breaking News

ಕೊಟ್ಟಿಗೆ ಹಾರದಲ್ಲಿ ಕಸ್ತೂರಿ ಮಹಲ್ ಸಿನಿ ಚಿತ್ತಾರ

Spread the love

ಕರುನಾಡ ಪ್ರಕೃತಿ ಸೌಂದರ್ಯ ಹೆಚ್ಚಿಸಿರುವಲ್ಲಿ ಕೊಟ್ಟಿಗೆ ಹಾರದ್ದು ಮಹತ್ವದ ಪಾತ್ರವಿದೆ. ಮಳೆಗಾಲದಲ್ಲಿ ಇದರ ವೈಭವ ಕೇಳುವುದೇ ಬೇಡ. ಇಂತಹ ಸುಂದರ ಪರಿಸರದಲ್ಲಿ ಕಸ್ತೂರಿ ಮಹಲ್ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

 ಅಕ್ಟೋಬರ್ 5ರಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಮಾತಿನ ಭಾಗದ ಚಿತ್ರೀಕರಣ ‌ಬಿರುಸಿನಿಂದ ಸಾಗಿದೆ.‌ ಶಾನ್ವಿ ಶ್ರೀವಾಸ್ತವ್, ಸ್ಕಂಧ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ನೀನಾಸಂ ಅಶ್ವಥ್ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಹಾರಾರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶಿಸುತ್ತಿದ್ದಾರೆ. ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಇದು ಅವರ ನಿರ್ದೇಶನದ 50ನೇ ಚಿತ್ರ.

ಶ್ರೀಭವಾನಿ‌ ಆರ್ಟ್ಸ್ ಲಾಂಛನದಲ್ಲಿ ರವೀಶ್ RC ನಿರ್ಮಿಸುತ್ತಿರುವ‌ ಈ ಚಿತ್ರಕ್ಕೆ ನವೀನ್ RC ಹಾಗೂ ಅಕ್ಷಯ್ CN ಅವರ ಸಹ ನಿರ್ಮಾಣವಿದೆ. PKH ದಾಸ್ ಛಾಯಾಗ್ರಹಣ ಹಾಗೂ ಸೌಂದರ್ ರಾಜ್ ಅವರ ಸಂಕಲನ ಕಸ್ತೂರಿ ಮಹಲ್ ಚಿತ್ರಕ್ಕಿದೆ. ಬಹುಭಾಷ ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಸ್ಕಂಧ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ನೀನಾಸಂ ಅಶ್ವಥ್, ಅಕ್ಷರ್ ಮುಂತಾದವರಿದ್ದಾರೆ.
  


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ