Breaking News

ನಟಿ ಸಂಜನಾ ಆಪ್ತ ಶೇಖ್ ಫೈಜಲ್ ಮನೆ ಮೇಲೆ ಸಿಸಿಬಿ ದಾಳಿ

Spread the love

ಬೆಂಗಳೂರು: ಡ್ರಗ್ಸ್ ಮಾರಾಟ ಜಾಲದಲ್ಲಿ ಭಾಗಿಯಾದ ಆರೋಪದಡಿ ಬಂಧಿಸಲಾಗಿರುವ ನಟಿ ಸಂಜನಾ ಗಲ್ರಾನಿ ಆಪ್ತ ಎನ್ನಲಾದ ಶೇಖ್ ಫೈಜಲ್ ಎಂಬಾತನ ಮನೆ ಮೇಲೆ ಸಿಸಿಬಿ ಪೊಲೀಸರು ಬುಧವಾರ ದಾಳಿ ಮಾಡಿದರು.

ಜಯನಗರದಲ್ಲಿರುವ ಮನೆಗೆ ಹೋಗಿದ್ದ ಪೊಲೀಸರು, ಗಂಟೆಗಟ್ಟಲೇ ಪರಿಶೀಲನೆ ನಡೆಸಿದರು. ಫೈಜಲ್ ಮನೆಯಲ್ಲಿ ಇರಲಿಲ್ಲ. ಸಹೋದರ ಹಾಗೂ ಪತ್ನಿ-ಮಕ್ಕಳು ಮಾತ್ರ ಇದ್ದರು.

ಶೋಧ ಮುಗಿಸಿದ ಪೊಲೀಸರು, ಫೈಜಲ್ ಸಹೋದರನನ್ನು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆತಂದಿದ್ದರು. ಫೈಜಲ್ ಬಗ್ಗೆ ಮಾಹಿತಿ ಸಂಗ್ರಹಿಸಿ ವಾಪಸು ಕಳುಹಿಸಿದರು. ಸಂಜೆ ಸಂಬಂಧಿಕರನ್ನೂ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡರು.

‘ಪ್ರಕರಣದಲ್ಲಿ ಬಂಧಿಸಲಾಗಿರುವ ಕೇರಳದ ರೂಪದರ್ಶಿ ನಿಯಾಜ್ ಹಾಗೂ ಸಂಜನಾ ಜೊತೆಯಲ್ಲಿ ಫೈಜಲ್ ಒಡನಾಟವಿಟ್ಟುಕೊಂಡಿದ್ದ.

ಆತ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ವಿಶೇಷ ತಂಡಗಳು ಹುಡುಕಾಟ ನಡೆಸಿವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??


Spread the love

About Laxminews 24x7

Check Also

ಭಾರತದಲ್ಲಿ ಗ್ಯಾಸ್ ಎಮರ್ಜೆನ್ಸಿ; ತೈಲ, ವಿದೇಶಾಂಗ ಸಚಿವರ ಜೊತೆ ಮೋದಿ ಸಭೆ

Spread the loveನವದೆಹಲಿ: ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಹೆಚ್ಚುತ್ತಿರುವ ಸಂಘರ್ಷದಿಂದ ಉಂಟಾದ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ