Breaking News

KCET Result 2020- ಎಂಜಿನಿಯರಿಂಗ್ ವಿಭಾಗದಲ್ಲಿ ರಕ್ಷಿತ್ ನಂ. 1; ಇಲ್ಲಿದೆ ವಿವಿಧ ವಿಭಾಗಗಳ ಟಾಪ್ ರ್‍ಯಾಂಕರ್ಸ್

Spread the love

ಬೆಂಗಳೂರು: ರಾಜ್ಯದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಎಂಜಿನಿಯರಿಂಗ್, ಫಾರ್ಮಾ, ಕೃಷಿ, ನ್ಯಾಚುರೋಪಥಿ ವಿಭಾಗಗಳಲ್ಲಿ ವಿದ್ಯಾರ್ಥಿಗಳ ರ್‍ಯಾಂಕಿಂಗ್ ಲಿಸ್ಟ್ ಪ್ರಕಟಗೊಂಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ ಫಲಿತಾಂಶದಲ್ಲಿ ಬೆಂಗಳೂರಿನ ಆರ್.ವಿ. ಕಾಲೇಜು ವಿದ್ಯಾರ್ಥಿ ರಕ್ಷಿತ್ ಎಂ ಅವರು ಎಂಜಿನಿಯರಿಂಗ್​ನಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ. ಸಿಇಟಿ ಪರೀಕ್ಷೆ ಬರೆದ 1.75 ಲಕ್ಷ ವಿದ್ಯಾರ್ಥಿಗಳ ಪೈಕಿ 1,55,668 ಮಕ್ಕಳು ಅರ್ಹತೆ ಗಿಟ್ಟಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ. ಅಶ್ವಥ ನಾರಾಯಣ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಫಲಿತಾಂಶದ ಮುಖ್ಯಾಂಶಗಳನ್ನು ತಿಳಿಸಿದರು. ಕೊರೋನಾ ಪರೀಕ್ಷೆ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆ ವಿಳಂಬವಾಗಿ ನಡೆಯಿತಾದರೂ ಕೇವಲ 20 ದಿನದಲ್ಲಿ ಫಲಿತಾಂಶ ನೀಡಲು ಯಶಸ್ವಿಯಾಗಿದ್ದೇವೆ. 

ವರಮಹಾಲಕ್ಷ್ಮೀ ಹಬ್ಬದಂದು ಪರೀಕ್ಷೆ ನಡೆಸಿ ಗಣೇಶ ಹಬ್ಬಕ್ಕೆ ರಿಸಲ್ಟ್ ಕೊಟ್ಟಿದ್ದೇವೆ. ನೀಟ್ ಮತ್ತು ಜೆಇಇ ಫಲಿತಾಂಶದ ನಂತರ ದಾಖಲಾತಿ ಪರಿಶೀಲನೆ ಮತ್ತು ಕೌನ್ಸಲಿಂಗ್ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ಡಿಸಿಎಂ ಹೇಳಿದರು.

ಇದೇ ಮೊದಲ ಬಾರಿಗೆ ಆನ್​ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ನಡೆಯಲಿದೆ ಎಂದು ಹೇಳಿದ ಅವರು ನವೆಂಬರ್ ತಿಂಗಳಿಂದ 2020-21ರ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತದೆ ಎಂದು ಮಾಹಿತಿ ನೀಡಿದರು. Karnataka CET Result 2020: ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ

ಎಂಜಿನಿಯರಿಂಗ್, ಬಿಫಾರ್ಮಾ/ಡಿಫಾರ್ಮಾ, ಬಿಎಸ್​ಸಿ ಅಗ್ರಿಕಲ್ಚರ್ ಮತ್ತು ನ್ಯಾಚುರೋಪಥಿ/ಯೋಗ ವಿಭಾಗಗಳ ಶ್ರೇಯಾಂಕ ಬಿಡುಗಡೆಯಾಗಿದೆ. ಎಂಜಿನಿಯರಿಂಗ್ ವಿಭಾಗದಲ್ಲಿ 1,53,470 ಮಕ್ಕಳು ಅರ್ಹತೆ ಪಡೆದಿದ್ದಾರೆ. ಕೃಷಿ ಕೋರ್ಸ್​ಗೆ 1,27,627, ಪಶುಸಂಗೋಪನೆಗೆ 1,29,666, ಯೋಗ ಮತ್ತು ನ್ಯಾಚುರೋಪಥಿಗೆ 1,29,611, ಡಿಫಾರ್ಮಾ ಮತ್ತು ಬಿಫಾರ್ಮಾಗೆ 1,55,552 ಮಕ್ಕಳು ರ್‍ಯಾಂಕಿಂಗ್ ಪಡೆದಿದ್ದಾರೆ.

ಎಂಜನಿಯರಿಂಗ್​ನಲ್ಲಿ ಬೆಂಗಳೂರಿನ ಆರ್.ವಿ. ಕಾಲೇಜು ವಿದ್ಯಾರ್ಥಿ ರಕ್ಷಿತ್ ಎಂ., ಫಾರ್ಮಾ ವಿಭಾಗದಲ್ಲಿ ಬೆಂಗಳೂರಿನ ನಾರಾಯಣ ಇ ಟೆಕ್ನೋ ಶಾಲೆಯ ಸಾಯಿ ವಿವೇಕ್ ಪಿ., ಬಿಎಸ್​ಸಿ ಅಗ್ರಿಕಲ್ಚರ್​ಗೆ ಮಂಗಳೂರಿನ ಎಕ್ಸ್​ಪರ್ಟ್ ಕಾಲೇಜಿನ ವರುಣ್ ಗೌಡ ಹಾಗೂ ನ್ಯಾಚುರೋಪಥಿಯಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಆರ್ಣವ್ ಅಗ್ರ ರ್‍ಯಾಂಕಿಂಗ್ ಪಡೆದಿದ್ದಾರೆ.

ಅಗ್ರಸ್ಥಾನ ಪಡೆದವರು:

ಇಂಜಿನಿಯರಿಂಗ್1. ರಕ್ಷಿತ್ ಎಂ, ಆರ್ ವಿ ಕಾಲೇಜು, ಬೆಂಗಳೂರು
2. ಶುಭಾನ್ ಆರ್ – ಶ್ರೀ ಚೈತನ್ಯ ಇ ಟೆಕ್ನೋ ಶಾಲೆ, ಬೆಂಗಳೂರು
3. ಎಂ ಶಶಾಂಕ್ ಬಾಲಾಜಿ, ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ

ಬಿ ಫಾರ್ಮಾ, ಡಿ ಫಾರ್ಮಾ
1. ಸಾಯಿ ವಿವೇಕ್ ಪಿ, ನಾರಾಯಣ ಇ ಟೆಕ್ನೋ ಶಾಲೆ, ಬೆಂಗಳೂರು
2. ಸಂದೀಪನ್ ನಸ್ಕರ್, ಹೊರನಾಡ ಕನ್ನಡಿಗ
3. ಪವನ್ ಎಸ್ ಗೌಡ, ನಾರಾಯಣ ಪಿಯು ಕಾಲೇಜು, ಬೆಂಗಳೂರು

ಬಿ ಎಸ್ಸಿ ಅಗ್ರಿ
1. ವರುಣ್ ಗೌಡ ಎ ಬಿ, ಎಕ್ಸ್ ಪರ್ಟ್ ಕಾಲೇಜು, ಮಂಗಳೂರು
2. ಸಂಜನಾ ಕೆ, ಬೇಸ್ ಪಿಯು ಕಾಲೇಜು, ಮೈಸೂರು
3. ಲೋಕೇಶ್ ವಿ ಜೋಗಿ, ಶ್ರೀ ರಾಮಕೃಷ್ಣ ವಿದ್ಯಾಶಾಲಾ ಪಿಯು ಕಾಲೇಜು, ಮೈಸೂರು

ನ್ಯಾಚುರೋಪಥಿ ಅಂಡ್ ಯೋಗ:
1. ಆರ್ಣವ್, ಆಳ್ವಾಸ್ ಪಿಯು ಕಾಲೇಜ್, ಮೂಡಬಿದಿರೆ
2. ಸಂಜನಾ.ಕೆ, BASE ಪಿಯು ಕಾಲೇಜ್, ಮೈಸೂರು
3. ಸಾಯ್ ವಿವೇಕ್, ನಾರಾಯಣ ಇ- ಟೆಕ್ ಸ್ಕೂಲ್, ಬೆಂಗಳೂರು
4. ಕಾರ್ತಿಕ್ ರೆಡ್ಡಿ
5. ವರುಣ್ ಗೌಡ ಎ.ಬಿ.
6. ಪವನ್ ಎಸ್ ಗೌಡ
7. ಪ್ರಜ್ವಲ್ ಕಶ್ಯಪ್
8. ಲೋಕೇಶ್ ಬಿ ಜೋಗಿ
9. ಆರ್ಯನ್ ಮಹಾಲಿಂಗಪ್ಪ ಚನ್ನಾಳ್
10. ಮೊಹಮ್ಮದ್ ಅರ್ಬಾಜ್ ಅಹ್ಮದ್


Spread the love

About Laxminews 24x7

Check Also

ಉಚ್ಛಾಟಿತ ಶಾಸಕ ಯತ್ನಾಳ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ ಮುಸ್ಲಿಂ ಸಮುದಾಯ ಬಿಜೆಪಿ ಉಚ್ಛಾಟಿತ ಯತ್ನಾಳ್ ವಿರುದ್ಧ ಭುಗಿಲೆದ್ದ ಮುಸ್ಲಿಂ ಸಮುದಾಯ

Spread the love ಉಚ್ಛಾಟಿತ ಶಾಸಕ ಯತ್ನಾಳ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ ಮುಸ್ಲಿಂ ಸಮುದಾಯ ಬಿಜೆಪಿ ಉಚ್ಛಾಟಿತ ಯತ್ನಾಳ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ