ಕಾಯಿಪಲ್ಯ ವ್ಯಾಪಾರಸ್ಥರಿಂದ ಮಾರು ಕಟ್ಟೆಗೆ ಮೂಲ ಸೌಕರ್ಯ ಪೂರೈಸಲು ಜಲಸಂಪನ್ಮೂಲ ಸಚಿವರಿಗೆ ಮನವಿ
ಘಟಪ್ರಭಾ: ಘಟಪ್ರಭಾ ತರಕಾರಿ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ತರಕಾರಿ ವ್ಯಾಪಾರಸ್ಥರು ಮತ್ತು ಜನಪ್ರತಿನಿಧಿಗಳು ಇಂದು ಮನವಿ ಸಲ್ಲಿಸಿದರು.
ಪಟ್ಟಣದ ತರಕಾರಿ ಮಾರುಕಟ್ಟೆ ತುಂಬಾ ಹೆಸರುವಾಸಿಯಾಗಿದ್ದು ದಿನನಿತ್ಯ ಸುತ್ತ ಮುತ್ತಲಿನ ಹಳ್ಳಿಯ ನೂರಾರು ರೈತರು ತಾವು ಬೆಳಸಿದ ತರಕಾರಿಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಬರುತ್ತಾರೆ. ಆದ್ರೆ ಮಾರುಕಟ್ಟೆಯಲ್ಲಿ ಪ್ರತಿವರ್ಷ ಸುರಿಯುವ ಮಳೆಯಿಂದ ಕೊಳಚೆಯಂತೆ ಸ್ಥಿತಿ ನಿರ್ಮಾಣವಾಗುತ್ತಿದೆ. ಸೂಕ್ತ ಮೂಲ ಸೌಕರ್ಯವಿಲ್ಲದೆ ಜನರು ಪರದಾಡುವಂತಾಗಿದೆ.
ಇಲ್ಲಿಯ ತರಕಾರಿ ಹೊರ ರಾಜ್ಯಗಳಿಗೆ ಕೂಡಾ ರವಾನೆಯಾಗುತ್ತದೆ. ತರಕಾರಿ ಮಾರುಕಟ್ಟೆಯ ಆವರಣದಲ್ಲಿ ಮಾರ್ಕೆಟ್ ನಲ್ಲಿ ಕಾಂಕ್ರೀಟ್ ವ್ಯವಸ್ಥೆಯಾಗಬೇಕು ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಶೌಚಾಲಯದ ವ್ಯವಸ್ಥೆಯಾಗಬೇಕು ಪ್ರತಿನಿತ್ಯ ಪಂಚಾಯತ ವತಿಯಿಂದ ಸ್ವಚ್ಚತಾ ವ್ಯವಸ್ಥೆಯಾಗಬೇಕು ಹಾಗೂ ವ್ಯಾಪಾರಸ್ಥರಿಗೆ ತಮ್ಮ ತರಕಾರಿಗಳನ್ನು ಸುರಕ್ಷಿತವಾಗಿರಿಸಲು ಕಾಂಪ್ಲೆಕ್ಸ್ ವ್ಯವಸ್ಥೆ ಮಾಡಿಕೊಡಬೇಕು ರಾತ್ರಿ ಹೊತ್ತಿನಲ್ಲಿ ಮಾರುಕಟ್ಟೆಯ ಪೂರ್ಣ ಬೆಳಕಿನ ವ್ಯವಸ್ಥೆಯಾಗಬೇಕು ಮಾರ್ಕೆಟಿನ ಸುತ್ತ ಮುತ್ತ ಕಾಂಪೌಂಡ್ ಮತ್ತು ಗೇಟಿನ ವ್ಯವಸ್ಥೆ ಯಾಗಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶೇಖರ ಕುಲಗೋಡ. ಸುರೇಶ ಮುಸಲ್ಮಾರಿ.ಬಾಳು ದೇವಮಾನೆ.ಮದಾರ ಬಳೆಗಾರ.ಜಾವಿದ ಸನದಿ.ಶಾಂತು ರಾಜಾಪೂರೆ.ರಾಜು ಮುಲ್ಲಾ. ಮಲ್ಲಿಕ ಬಾಗವಾನ ವ್ಯಾಪಾರಸ್ಥರು ಹಾಜರಿದ್ದರು.