ಬೆಂಗಳೂರು: ಚಿಕನ್ ಗುನ್ಯಾ ಸೋಂಕು ಅಂತ ಖಾಸಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆ ಕೊರೊನಾ ಪಾಸಿಟಿವ್ ಬಂದಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ.
49 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಜೊತೆಗೆ ಆಸ್ಪತ್ರೆಯಿಂದ ಇತರೆ ರೋಗಿಗಳನ್ನ ಸ್ಥಳಾಂತರಗೊಳಿಸಲಾಗಿದೆ.
ಸೋಂಕಿತ ಮಹಿಳೆಯು ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಯಶವಂತಪುರದ ಸುಬೇದಾರ್ ಪಾಳ್ಯದಲ್ಲಿರುವ ಮಗನ ಮನೆಗೆ ಮಾರ್ಚ್ 12ರಂದು ಬಂದಿದ್ದರು. ಅವರಿಗೆ ಏಪ್ರಿಲ್ 30ರಂದು ಜ್ಚರ ಕಾಣಿಸಿಕೊಂಡಿತ್ತು. ಹೀಗಾಗಿ ಚಿಕನ್ ಗುನ್ಯಾ ಅಂತ ಭಾವಿಸಿ ಯಶವಂತಪುರದ ಖಾಸಗಿ ಆಸ್ಪತ್ರೆಗೆ ಮೇ 1ರಂದು ದಾಖಲಾಗಿದ್ದರು. ಆದರೆ ಅವರಿಗೆ ಕೊರೊನಾ ಲಕ್ಷಣಗಳಿರುವ ಶಂಕೆ ವ್ಯಕ್ತಪಡಿಸಿದ ವೈದ್ಯರು ಚಿಕನ್ ಗುನ್ಯಾ ಟೆಸ್ಟ್ ಜೊತೆಗೆ ಕೋವಿಡ್-19 ಪರೀಕ್ಷೆ ಕೂಡ ಮಾಡಿಸಿದ್ದರು. ಈ ವೇಳೆ ಪಾಸಿಟಿವ್ ಬಂದಿದೆ. ತಕ್ಷಣವೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ವ್ಯಕ್ತಿ ಶಿಫ್ಟ್ ಮಾಡಲಾಗಿದೆ.
ಕಳೆದ 3 ದಿನಗಳಿಂದ ಆಸ್ಪತ್ತೆಯಲ್ಲಿ ಮಹಿಳೆ ಅಡ್ಮಿಟ್ ಆಗಿದ್ದರು. ಹೀಗಾಗಿ ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಜೊತೆಗೆ ಉಳಿದ ರೋಗಿಗಳನ್ನು ಹಾಗೂ ಸಿಬ್ಬಂದಿಯನ್ನು ಹೋಟೆಲ್ ಕ್ವಾರಂಟೈನ್‍ಗೆ ಶಿಫ್ಟ್ ಮಾಡಲಾಗಿದೆ.
ಮಹಿಳೆಯ ಸಂಪರ್ಕದಲ್ಲಿದ್ದ ಮಗ, ಸೊಸೆ, ಖಾಸಗಿ ಆಸ್ಪತ್ರೆಯ 12 ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಖಾಸಗಿ ಆಸ್ಪತ್ರೆ ಮತ್ತು ತ್ರಿವೇಣಿ ರೋಡ್, ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪ ರೋಡ್ ಸೀಲ್‍ಡೌನ್ ಮಾಡಿ ಬಾಂಬೆ ಡಾಯಿಂಗ್ ರೋಡ್ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.