Breaking News

ಖಾಸಗಿ ಆಸ್ಪತ್ರೆಯಂತೆ ವಿಕ್ಟೋರಿಯದಲ್ಲೂ ಹೆರಿಗೆ ಸಾಧ್ಯವೇ? – ಸೋಂಕಿತ ಗರ್ಭಿಣಿಯ ಪತಿ ಪ್ರಶ್ನೆ

Spread the love

ಬೆಂಗಳೂರು: “ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಿ. ಇಂದು ಮಧ್ಯಾಹ್ನದ ನಂತರ ಡೆಲಿವರಿ ಅದರೆ ಒಕೆ. ಟೈಂ ಚೆನ್ನಾಗಿದೆ” ಹೀಗೆಂದು ಕೊರೊನಾ ಸೋಂಕು ಪೀಡಿತ ಗರ್ಭಿಣಿಯ ಪತಿ ವೈದ್ಯರ ಬಳಿ ಬೇಡಿಕೆ ಇಟ್ಟಿದ್ದಾರೆ.

ಗರ್ಭಿಣಿಯನ್ನು(ರೋಗಿ ಸಂಖ್ಯೆ 652) ವಿಕ್ಟೋರಿಯಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಈ ನಡುವೆ ಈ ಮೊದಲು ಪರೀಕ್ಷಿಸಿದ ಖಾಸಗಿ ಆಸ್ಪತ್ರೆಯವರು ಡೆಲಿವರಿಗೆ ಮೇ 9 ರಂದು ದಿನಾಂಕ ನೀಡಿದ್ದಾರೆ. ಆದರೆ ಈಗ ಸೋಂಕು ಬಂದಿರುವುದರಿಂದ ಕೋವಿಡ್ ಆಸ್ಪತ್ರೆಯಲ್ಲೇ ಡೆಲಿವರಿ ಮಾಡಿಸಲು ವೈದ್ಯರು ಮುಂದಾಗಿದ್ದಾರೆ.

 

ಈ ಸಂಬಂಧ ಡಾಕ್ಟರ್ ಗರ್ಭಿಣಿಯ ಪತಿಯ ಜೊತೆ ಮಾತನಾಡಿದ್ದಾರೆ. ಈ ವೇಳೆ ಖಾಸಗಿ ಆಸ್ಪತ್ರೆಯಂತೆ ಇಲ್ಲೂ ಹೇರಿಗೆ ಸಾಧ್ಯವೇ? ಪತ್ನಿಯ ಆರೋಗ್ಯ ಮುಖ್ಯ. ಗುಣಮಟ್ಟದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಎಂದು ಮನವಿ ಮಾಡಿದ್ದಾರೆ. ಖಾಸಗಿ ಆಸ್ಪತ್ರೆಯವರು ಈ ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎಂದು ವೈದ್ಯರು ಮನವರಿಕೆ ಮಾಡಿದ್ದಾರೆ. ಹಾಗಿದ್ದರೆ ಇಂದು ಮಧ್ಯಾಹ್ನದ ನಂತರ ಟೈಂ ಚೆನ್ನಾಗಿದೆ. ಇಂದು ಡೆಲಿವರಿ ಮಾಡಿಸಿ ಎಂದು ಮತ್ತೊಂದು ಬೇಡಿಕೆ ಇಟ್ಟಿದ್ದಾರೆ. ಆದರೆ ವೈದ್ಯರು ಈ ಬೇಡಿಕೆಯನ್ನು ಒಪ್ಪದೇ ಈಗಾಗಲೇ ಖಾಸಗಿ ಆಸ್ಪತ್ರೆಯವರು ಮೇ 9 ಡೆಲಿವರಿ ದಿನಾಂಕ ನೀಡಿದ್ದಾರೆ. ನೋವು ಕಾಣಿಸಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಕೋವಿಡ್ ಆಸ್ಪತ್ರೆಯವರು ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಗರ್ಭಿಣಿಗಾಗಿ ವಿಶೇಷ ವೈದ್ಯರ ತಂಡವನ್ನು ಈಗಾಗಲೇ ಸಿದ್ಧಮಾಡಿದ್ದಾರೆ. ಹೆರಿಗೆ ನೋವು ಶುರುವಾಗುತ್ತಿದ್ದಂತೆ ಹೆರಿಗೆಗೆ ಬೇಕಾದ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ.

ಬಿಟಿಎಂ ಲೇಔಟ್‍ನ ಗರ್ಭಿಣಿ ಜಯನಗರದ ಪ್ರಸಿದ್ಧ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ವೈದ್ಯರು ಮೇ 9ರಂದು ಹೆರಿಗೆ ಆಗಬಹುದು ಎಂದು ತಿಳಿಸಿದ್ದರು. ಗರ್ಭಿಣಿ ತಪಾಸಣೆ ವೇಳೆ ವೈದ್ಯರು ವೈಯಕ್ತಿಕ ಸುರಕ್ಷಿತ ಸಾಧನವನ್ನು ಬಳಸಿದ್ದರು. ಈ ಗರ್ಭಿಣಿಗೆ ವಿದೇಶ ಸಂಪರ್ಕ ಅಥವಾ ಸೋಂಕಿತರ ಜೊತೆಗೆ ಯಾವುದೇ ಸಂರ್ಪಕ ಇರಲಿಲ್ಲ. ಆದರೂ ಕೊರೊನಾ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಎದ್ದಿದೆ. ಗರ್ಭಿಣಿ ಜೊತೆ ನೇರ ಸಂಪರ್ಕ ಹೊಂದಿದ್ದ 6 ಮಂದಿ ಮತ್ತು ಪರೋಕ್ಷ ಸಂಪರ್ಕ ಹೊಂದಿದ್ದ 12 ಮಂದಿಯನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ.

ಸೋಂಕು ಪೀಡಿತರು ಕೋವಿಡ್-19ಗೆಂದು ನಿಗದಿ ಪಡಿಸಿದ ಆಸ್ಪತ್ರೆ ಬಿಟ್ಟು ಬೇರೆ ಎಲ್ಲೂ ಚಿಕಿತ್ಸೆ ಪಡೆಯುವಂತಿಲ್ಲ. ಗರ್ಭಿಣಿಯಾದರೂ ಸರಿ, ಹಿರಿಯರಾದರೂ ಸರಿ ಎಲ್ಲರೂ ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕೆಂಬ ಸ್ಪಷ್ಟವಾದ ಆದೇಶವನ್ನು ಸರ್ಕಾರ ಹೊರಡಿಸಿದೆ.


Spread the love

About Laxminews 24x7

Check Also

ಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್!

Spread the loveಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್! ಬೆಂಗಳೂರು: ವಯೋವೃದ್ಧ ಕಾರು ಚಾಲಕರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ