Breaking News

ವಿದ್ಯಾರ್ಥಿಗಳಿಗೆ ಬಿಗ್ ಶಾಕ್..! ದಂತ-ವೈದ್ಯಕೀಯ ಕೋರ್ಸ್‍ಗಳ ಶುಲ್ಕ ಹೆಚ್ಚಳ ……

Spread the love

ಬೆಂಗಳೂರು : ರಾಜ್ಯ ಸರ್ಕಾರವು ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ನೀಡಿದ್ದು, ಸ್ನಾತಕೋತ್ತರ ಮತ್ತು ದಂತವೈದ್ಯಕೀಯ ಕೋರ್ಸ್ ಗಳ ಶುಲ್ಕ ಹೆಚ್ಚಳ ಮಾಡಿದೆ.

ದಿಢೀರನೇ ಸರ್ಕಾರ ಪಿಜಿ ಮೆಡಿಕಲ್ ಮತ್ತು ಡೆಂಟಲ್ ಸೀಟುಗಳ ಶುಲ್ಕವನ್ನು ಹೆಚ್ಚಳ ಮಾಡಿದೆ.ಪ್ರತಿ ವರ್ಷ 10-15% ಶುಲ್ಕ ಹೆಚ್ಚಳ ಆಗುತ್ತಿತ್ತು. ಆದರೆ ಈ ಬಾರಿ ಸರ್ಕಾರ ಮತ್ತಷ್ಟು ಶುಲ್ಕ ಹೆಚ್ಚಳ ಮಾಡಿದೆ. ಇನ್ನೆರಡು ದಿನಗಳಲ್ಲಿ ಸಿಟಿಇ ಕೌನ್ಸಿಲಿಂಗ್ ಇದೆ. ಈಗ ದಿಢೀರ್ ಅಂತ ಸರ್ಕಾರ ಹೊಸ ಶುಲ್ಕದ ಪಟ್ಟಿ ಬಿಡುಗಡೆ ಮಾಡಿದೆ

ಖಾಸಗಿ ಕಾಲೇಜು, ಖಾಸಗಿ ವಿವಿಗಳು, ಡೀಮ್ಡ್ ವಿವಿಗಳ ಸೀಟುಗಳ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಖಾಸಗಿ ಕೋಟಾದ ಸೀಟುಗಳಿಗೆ ಶೇ. 30ರಷ್ಟು ಶುಲ್ಕ ಅಧಿಕವಾಗಿದೆ. ಇನ್ನೂ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಸೇರುವ ವಿದ್ಯಾರ್ಥಿಗಳಿಗೆ ಶೇ. 20ರಷ್ಟು ಶುಲ್ಕವನ್ನು ಸರ್ಕಾರ ಹೆಚ್ಚಿಸಿದೆ.

ಖಾಸಗಿ ಕಾಲೇಜುಗಳ ಶುಲ್ಕ , ಸರ್ಕಾರಿ ಕಾಲೇಜುಗಳ ಶುಲ್ಕ ಹಚ್ಚಳ ಇಲ್ಲ, ಸರ್ಕಾರಿ ಕಾಲೇಜುಗಳ ಸೀಟು ಶುಲ್ಕ ಹೆಚ್ಚಳ ಇಲ್ಲ. ಆದರೆ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಮತ್ತು ಮ್ಯಾನೇಜ್‌ಮೆಂಟ್ ಕೋಟಾದ ಶುಲ್ಕವನ್ನು ಮಾತ್ರ ಸರ್ಕಾರ ಹೆಚ್ಚಳ ಮಾಡಿದೆ.

# ಶುಲ್ಕದ ವಿವರ :
2020- 21ನೇ ಸಾಲಿನ ಶುಲ್ಕ ವಿವರ
ಮೆಡಿಕಲ್ – ಖಾಸಗಿ ಕೋಟಾ
ಕ್ಲಿನಿಕಲ್ – 11,34,705 ರೂ.
ಪ್ಯಾರಾ ಕ್ಲಿನಿಕಲ್ – 2,83,677 ರೂ.
ಪ್ರಿ-ಕ್ಲಿನಿಕಲ್ – 1,42,698 ರೂ.

# ಖಾಸಗಿ ಕಾಲೇಜಿನಲ್ಲಿ ಸರ್ಕಾರಿ ಕೋಟಾ
ಮೆಡಿಕಲ್ – ಖಾಸಗಿ ಕಾಲೇಜ್‌ನಲ್ಲಿ ಸರ್ಕಾರಿ ಕೋಟಾ
ಕ್ಲಿನಿಕಲ್ – 6,98,280 ರೂ.
ಪ್ಯಾರಾ ಕ್ಲಿನಿಕಲ್ – 1,74,570 ರೂ.
ಪ್ರಿ-ಕ್ಲಿನಿಕಲ್ – 87,286 ರೂ.

# ಡೆಂಟಲ್‌ ಕೋರ್ಸ್‌ಗಳಿಗೆಷ್ಟು ಶುಲ್ಕ
ಡೆಂಟಲ್ ಕೋರ್ಸ್
ಖಾಸಗಿ ಕಾಲೇಜು ಕೋಟಾ – 6,05,176 ರೂ.
ಖಾಸಗಿ ಕಾಲೇಜಲ್ಲಿ ಸರ್ಕಾರಿ ಕೋಟಾ – 3,57,076 ರೂ.


Spread the love

About Laxminews 24x7

Check Also

ಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್

Spread the loveಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್ ಬೆಂಗಳೂರು, ನವೆಂಬರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ