ಬೆಂಗಳೂರು: ನಮಗೆ ಚಪ್ಪಾಳೆ ಬೇಡ ಸೌಲಭ್ಯ ನೀಡಿ ಎಂದು ಕೊರೊನಾ ವಾರಿಯರ್ಸ್‍ಗಳು ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ಸಿದ್ಧವಾಗಿದ್ದಾರೆ.
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಜೂನ್ ನಾಲ್ಕರಂದು ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ಕರೆ ನೀಡಲಾಗಿದೆ. ಈ ಮೂಲಕ ಕೊರೊನಾ ಸಮಯದಲ್ಲೇ ಕರ್ನಾಟಕಕ್ಕೆ ಮಹಾ ಶಾಕ್ ಕಾದಿದೆ.
ಕೊರೊನಾ ಸಮಯದಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಕೆಲವು ಬೇಡಿಕೆಗಳನ್ನು ನೀಡಿ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ವಿಚಾರವಾಗಿ ಮೇ 20ರಂದು ಆರೋಗ್ಯ ಸಚಿವ ಶ್ರೀರಾಮುಲು ಅವರ ನೇತೃತ್ವದಲ್ಲಿ ಸಭೆ ಕೂಡ ನಡೆದಿತ್ತು. ಈ ಬಗ್ಗೆ ಸಮಿತಿ ರಚನೆಯ ಮಾಡಿ ಬೇಡಿಕೆಗಳನ್ನು ಪರಿಶೀಲನೆಯ ಮಾಡುವ ಭರವಸೆ ನೀಡಿಲಾಗಿತ್ತು. ಆದರೆ ಈಗ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮುಷ್ಕರ ಮಾಡಲು ಸಂಘ ತೀರ್ಮಾನಿಸಿದೆ.
ನಮ್ಮ ರಾಜ್ಯದಲ್ಲಿ 23 ಸಾವಿರಕ್ಕೂ ಅಧಿಕ ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಡಾಕ್ಟರ್, ಸ್ಟಾಫ್ ನರ್ಸ್, ಅಂಬುಲೆನ್ಸ್ ಚಾಲಕರು ಸೇರಿ 180 ವಿವಿಧ ಹುದ್ದೆಯಲ್ಲಿ ಈ ನೌಕರರು ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ಒಟ್ಟು 1,500 ಸಿಬ್ಬಂದಿ ಕೆಲಸ ಮಾಡುತ್ತಿದ್ದು, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಕ್ವಾರಂಟೈನ್ ಸೆಂಟರ್ ಮತ್ತು ಫೀಲ್ಡ್‍ನಲ್ಲಿ ಈ ಸಿಬ್ಬಂದಿಯೇ ಪ್ರಮುಖವಾಗಿ ಕೆಲಸ ಮಾಡುತ್ತಿದ್ದಾರೆ.
ನೌಕರರ ಬೇಡಿಕೆಯೇನು?
1. ಕಡಿಮೆ ವೇತನ
2. ಪರಿಷ್ಕೃತ ವೇತನ ಇಲ್ಲ
3. ಭತ್ಯೆಗಳು ಇಲ್ಲ
4. ವೈದ್ಯಕೀಯ ಸೌಲಭ್ಯವಿಲ್ಲ
5. ರಜೆಗಳು ಇಲ್ಲ (ವರ್ಷಕ್ಕೆ 10 ಮಾತ್ರ)
6. ಸೇವಾ ಭದ್ರತೆ ಇಲ್ಲ
7. ವರ್ಗಾವಣೆ ಇಲ್ಲ (15 ವರ್ಷದಿಂದ ಒಂದೇ ಕಡೆ ಕೆಲಸ)
8. ಬ್ಯಾಂಕಿನಲ್ಲಿ ಸಾಲ ನೀಡುವುದಿಲ್ಲ
9. ಪದೋನ್ನತಿ ಇಲ್ಲ
10. ಹೆಚ್‍ಆರ್ ಪಾಲಿಸಿ ಇಲ್ಲ
11. ವಿಮೆ ಇಲ್ಲ
12. ಡೆತ್ ಬೆನಿಫಿಟ್ ಇಲ್ಲ
13. ಸಮಾನ ಕೆಲಸಕ್ಕೆ ಸಮಾನ ವೇತನವಿಲ್ಲ
14. ಮಹಿಳಾ ಸಿಬ್ಬಂದಿಗೆ ಕುಟುಂಬ ಶಸ್ತ್ರಚಿಕಿತ್ಸೆಗೆ ರಜೆ ಇಲ್ಲ.
15. ಕಡಿಮೆ ವೇತನವಿದ್ದರೂ ಸರ್ಕಾರಿ ಕೆಲಸ ಎಂದು ಬಿಪಿಎಲ್ ಕಾರ್ಡ್ ನೀಡುವುದಿಲ್ಲ
16. ಹೊರಗುತ್ತಿಗೆ ಪದ್ದತಿ ಕೈಬಿಡಬೇಕು
ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಜೂನ್ ನಾಲ್ಕರಂದು ನೌಕರರ ಸಂಘ ಪ್ರತಿಭಟನೆ ಮಾಡಲು ತೀರ್ಮಾನಿಸಿದೆ. ಜೊತೆಗೆ ನೌಕರಿರಿಗೆ ಜೂನ್ 4ರಂದು ಕೆಲಸಕ್ಕೆ ಹಾಜರಾಗಬೇಕು ಎಂದು ಸೂಚಿಸಿದೆ. ಕೊರೊನಾ ಹೆಚ್ಚಾಗುತ್ತಿರುವ ಸಮಯದಲ್ಲಿ ಕೊರೊನಾ ವಿರುದ್ಧ ಹೋರಾಡಬೇಕಾದ ವಾರಿಯರ್ಸ್ ಪ್ರತಿಭಟನೆ ಮಾಡುತ್ತಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವು ತಂದಿಟ್ಟಿದೆ.
https://youtu.be/OYEMtBeW6b0