Breaking News

ದೆಹಲಿಯಿಂದ ಬೆಂಗಳೂರಿಗೆ ಇಂದು ಬಂದ ಮೊದಲ ವಿಮಾನದಲ್ಲಿ ಐದು ವರ್ಷದ ಬಾಲಕ ಏಕಾಂಗಿಯಾಗಿ ಪ್ರಯಾಣ

Spread the love

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಇಂದು ಬಂದ ಮೊದಲ ವಿಮಾನದಲ್ಲಿ ಐದು ವರ್ಷದ ಬಾಲಕ ಏಕಾಂಗಿಯಾಗಿ ಪ್ರಯಾಣ ಮಾಡಿದ್ದಾನೆ.

ಐದು ವರ್ಷದ ವಿವಾಂತ್ ಶರ್ಮಾ ಏಕಾಂಗಿಯಾಗಿ ಪ್ರಯಾಣ ಮಾಡಿದ್ದಾನೆ. ಲಾಕ್‍ಡೌನ್ ನಂತರ ಇಂದು ರಾಷ್ಟ್ರ ರಾಜಧಾನಿಯಿಂದ ಬೆಂಗಳೂರಿಗೆ ಬಂದ ಮೊದಲ ವಿಮಾನದಲ್ಲಿ ಈ ಬಾಲಕ ಬಂದು ಬೆಂಗಳೂರಿನಲ್ಲಿರುವ ತನ್ನ ಪೋಷಕರನ್ನು ಸೇರಿದ್ದಾನೆ. ಮಗನ ಬರುವಿಕೆಗಾಗಿ ವಿಮಾನ ನಿಲ್ದಾಣದಲ್ಲೇ ಕಾದುಕುಳಿತಿದ್ದ ಆತನ ತಾಯಿ ಮಂಜೀತ್ ಶರ್ಮಾ ಮಗನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ವಿವಾಂತ್ ಶರ್ಮಾನ ಅಜ್ಜಿ ಮನೆ ದೆಹಲಿಯಲ್ಲಿ ಇದ್ದು, ಲಾಕ್‍ಡೌನ್ ಆಗುವುದಕ್ಕೂ ಮುನ್ನವೇ ವಿವಾಂತ್ ದೆಹಲಿಗೆ ಹೋಗಿದ್ದ. ನಂತರ ಕೊರೊನಾ ಲಾಕ್‍ಡೌನ್ ಆಗಿ ಸುಮಾರು ಮೂರು ತಿಂಗಳು ಅಲ್ಲಿಯೇ ಉಳಿದಿದ್ದ.

ಇಂದು ಮೊದಲ ಬಾರಿಗೆ ದೆಹಲಿಯಿಂದ ಪ್ರಯಾಣಕರನ್ನು ಹೊತ್ತು ವಿಮಾನ ಬೆಂಗಳೂರಿಗೆ ಬಂದಿದ್ದು, ಇದರಲ್ಲಿ ವಿವಾಂತ್ ಕೂಡ ಇತರ ಪ್ರಯಾಣಿಕರ ಜೊತೆ ಒಬ್ಬನೇ ಬಂದಿದ್ದಾನೆ.


Spread the love

About Laxminews 24x7

Check Also

‘I Am god’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ….ಯುವ ಪ್ರತಿಭೆ ರವಿ ಗೌಡ ಹೊಸ ಸಿನಿಮಾಗೆ ಸಾಥ್.

Spread the loveಬೆಂಗಳೂರು:ರಾಜಕೀಯ ಜಂಜಾಟಗಳ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುವು ಮಾಡಿಕೊಂಡು ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅಂತೆಯೆ ಅವರು ತಮ್ಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ