Breaking News

ಆತ್ಮಹತ್ಯೆ ಮಾಡಿಕೊಂಡ ಮಗಳ ಶವವನ್ನು ಹೊತ್ತು 35 ಕಿಮೀ ಕಾಲ್ನಡಿಗೆಯಲ್ಲೇ ಕ್ರಮಿಸಿ ಆಸ್ಪತ್ರೆ ತಲುಪಿದ ತಂದೆ; ವಿಡಿಯೋ ವೈರಲ್​

Spread the love

ಭೋಪಾಲ್​: ಆತ್ಮಹತ್ಯೆ ಮಾಡಿಕೊಂಡ ಮಗಳ ಮೃತದೇಹವನ್ನು ತಂದೆ ಮಂಚದ ಮೇಲೆ ಮಲಗಿಸಿ, ಕಟ್ಟಿಕೊಂಡು ಸುಮಾರು 35 ಕಿಮೀ ಹೊತ್ತು ನಡೆದ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ನಡೆದಿದೆ. ಮಗಳ ಶವವನ್ನು ಪೋಸ್ಟ್​ಮಾರ್ಟಮ್​​ಗೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ಆದರೆ ಶವವನ್ನು ಸಾಗಿಸಲು ಒಂದು ವಾಹನದ ವ್ಯವಸ್ಥೆ ಮಾಡಲು ಸಾಧ್ಯವಾಗದೆ ಮಗಳ ಶವವನ್ನು ಹೊತ್ತು 35 ಕಿಮೀ ದೂರವನ್ನು ಏಳು ಗಂಟೆಗಳಲ್ಲಿ ಕ್ರಮಿಸಿದ್ದಾರೆ. ಇವರೊಂದಿಗೆ ಹಳ್ಳಿಯ ಕೆಲವರೂ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಇದೀಗ ತುಂಬ ವೈರಲ್ ಆಗಿದೆ.
ಧಿರಪತಿ ಸಿಂಗ್ ಗೊಂಡ್​​ರ ಪುತ್ರಿ 16 ವರ್ಷದ ಯುವತಿ ಮೇ 5ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು.

 

ಪರಿಶೀಲನೆಗಾಗಿ ಗಡೈ ಗ್ರಾಮದಲ್ಲಿರುವ ಇವರ ಮನೆಗೆ ಬಂದ ಪೊಲೀಸರು, ಪೋಸ್ಟ್​ಮಾರ್ಟಮ್​​ಗಾಗಿ ಜಿಲ್ಲಾಸ್ಪತ್ರೆಗೆ ಶವವನ್ನು ತರುವಂತೆ ಹೇಳಿದರು. ಈ ಗ್ರಾಮದಿಂದ ಜಿಲ್ಲಾಕೇಂದ್ರ ಸುಮಾರು 35 ಕಿ.ಮೀ.ದೂರವಿದೆ. ಇದು ತುಂಬ ಬಡಕುಟುಂಬವಾಗಿದ್ದರಿಂದ ಮನೆಯಲ್ಲಿ ಯಾವುದೇ ವಾಹನ ಇರಲಿಲ್ಲ. ಹಾಗೇ ಹಣಕೊಟ್ಟು ಯಾವುದೇ ವಾಹನವನ್ನು ಬಾಡಿಗೆಗೆ ಪಡೆಯುವ ಶಕ್ತಿಯೂ ಆತನಲ್ಲಿ ಇರಲಿಲ್ಲ. ಕಡೆಗೆ ಬೇರೆ ದಾರಿ ಕಾಣದೆ ಕೆಲವು ಗ್ರಾಮಸ್ಥರೊಟ್ಟಿಗೆ ಸೇರಿ ಮಗಳ ಶವವನ್ನು ಹೊತ್ತು ನಡೆದಿದ್ದಾರೆ.

 

ನಾವು ಬೆಳಗ್ಗೆ 9 ಗಂಟೆಗೆ ನಮ್ಮ ಹಳ್ಳಿಯನ್ನು ಬಿಟ್ಟೆವು. ಸಂಜೆ 4ಗಂಟೆ ಹೊತ್ತಿಗೆ ಆಸ್ಪತ್ರೆಗೆ ತಲುಪಿದ್ದೇವೆ. ಒಂದು ಮಂಚದ ಮೇಲೆ ಮಲಗಿಸಿ ನಾವೆಲ್ಲ ಹೊತ್ತುಕೊಂಡು ಬಂದಿದ್ದೇವೆ. ಈಗ ನಮ್ಮ ದೇಹಪರಿಸ್ಥಿತಿ ಹದಗೆಟ್ಟಿದೆ. ಇದು ದೊಡ್ಡ ಸಮಸ್ಯೆಯೇ ಹೌದು.. ಆದರೆ ಪರಿಹಾರ ಸಿಗಲಿಲ್ಲ ಎಂದು ಧಿರಪತಿ ಸಿಂಗ್​ ಗೊಂಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗ ಕೊರೊನಾ ಹೆಚ್ಚಾಗಿರುವ ಕಾರಣ ಲಾಕ್​ಡೌನ್​ ಇರುವುದರಿಂದ ವಾಹನಗಳ ಸಂಚಾರಕ್ಕೆ ಸ್ಥಳೀಯ ಆಡಳಿತಗಳು ಅನುಮತಿಯನ್ನೂ ನೀಡುತ್ತಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪೊಲೀಸ್​ ಅಧಿಕಾರಿ ಅರುಣ್​ ಸಿಂಗ್​ ಅವರು, ಮೃತದೇಹಗಳನ್ನು ಪೋಸ್ಟ್​ಮಾರ್ಟಮ್​ ಸ್ಥಳಕ್ಕೆ ಸಾಗಿಸುವುದು ನಮ್ಮ ಇಲಾಖೆಯ ಜವಾಬ್ದಾರಿಯಲ್ಲ. ಅದಕ್ಕೆಲ್ಲ ಬಜೆಟ್​ ನೀಡಿರುವುದಿಲ್ಲ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ದರ್ಶನ್‌ಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯ ನಿರಾಕರಣೆ ಆರೋಪ: ಕಾರಾಗೃಹಕ್ಕೆ ಭೇಟಿ ನೀಡುವಂತೆ ಕಾರ್ಯದರ್ಶಿಗೆ ಕೋರ್ಟ್ ಸೂಚನೆ

Spread the love ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಅವರು ಜೈಲಿನಲ್ಲಿ ತಮಗೆ ಕನಿಷ್ಠ ಸೌಲಭ್ಯ ನೀಡುತ್ತಿಲ್ಲವೆಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ