Breaking News

ಬಿಜೆಪಿಯಿಂದ ಬೃಹತ ಭೈಕ್ ರ್ಯಾಲಿ: ಪದಗ್ರಹಣ.: 150ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

Spread the love

ಬಾಗಲಕೋಟೆ ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸೋಣ : ನಾರಾಯಣಸಾ ಭಾಂಡಗೆ

ಬಾಗಲಕೋಟೆ: ಬಿಜೆಪಿ ಅವಧಿಯಲ್ಲಿಯೇ ಬಾಗಲಕೋಟೆ ಅಭಿವೃದ್ಧಿ ಖಂಡಿದ್ದು, ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸೋಣ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.


ನವನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ನಡೆದ ಪದಗ್ರಹಣ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಾಗಲಕೋಟೆ ಡಾ,ವೀರಣ್ಣ ಚರಂತಿಮಠ ಅವರ ಶಾಸಕರಾಗಿದ್ದ ಅವದಿಯಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ, ಅವರ ಅವದಿಯಲ್ಲಿ ಬಿಟಿಡಿಎ ದಿಂದ ಮುಳಗಡೆ ಫಲಾನುಭವಿಗೆಳಿಗೆ, ಬಾಡಿಗೆದಾರರಿಗೆ, ವಯಸ್ಕರ ಮಕ್ಕಳಿಗೆ ಸೇರಿ 2270ಕ್ಕೂ ಹೆಚ್ಚು ಹಕ್ಕು ಪತ್ರಗಳ ವಿತರಣೆ ಮಾಡಿದ್ದರು, 118.97 ಕೋಟಿ ರೂಗಳ ಅನುದಾನದಲ್ಲಿ ಬಾಗಲಕೋಟೆ ನಡುಗಡ್ಡೆ ಕಿಲ್ಲಾ ಪ್ರದೇಶದ 1057 ಮನೆಗಳು(11/ಎ ಆಗಿದೆ) ಭೂಸ್ವಾಧೀನ ಪುನರ್ವಸತಿಗೆ ಚಾಲನೆ ನೀಡಿದ್ದರು, ಬಾಗಲಕೋಟೆ ಜಿಲ್ಲೆಯ ನಂತರದಲ್ಲಿ ಪ್ರಪ್ರಥಮವಾಗಿ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ( ಬುಡಾ) ಸ್ಥಾಪನೆ ಮಾಡಿದ್ದು ಹಾಗೂ ಬಾಗಲಕೋಟೆ ನಗರಸಭೆಯನ್ನು 2ರಿಂದ ಗ್ರೇಡ್ 1ಕ್ಕ ಮೇಲ್ದರ್ಜೇಗೆ ತಂದಿದ್ದು ನಮ್ಮ ವೀರಣ್ಣ ಚರಂತಿಮಠರು, ಬಾಗಲಕೋಟೆ ಮತಕ್ಷೇತ್ರದ ಸರ್ವತ್ತೋಮುಖ ಅಭಿವೇದ್ದಿಗಾಗಿ ಸಾವಿರಾರು ಕೋಟಿ ರೂಗಳ ಅನುದಾನ ತಂದು ಕ್ಷೇತ್ರವನ್ನು ಬೇಳಿಸಿದ್ದಾರೆ, ಅದರ ಶ್ರೇಯಸ್ಸು ಬಿಜೆಪಿ ಪಕ್ಷಕ್ಕೆ ಮತ್ತು ಕಾರ್ಯಕರ್ತರಿಗೆ ಸಲ್ಲುತ್ತದೆ, ಈಗ ನಮ್ಮ ಗುರಿ ಬಿಜೆಪಿ ಗೆಲುವು ಮಾತ್ರ ಎಂದರು.


ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಮಾತನಾಡಿ ನಮ್ಮ ಅಭಿವೃದ್ಧಿ ಕೆಲಸಗಳೆ ನಮಗೆ ಶ್ರೀರಕ್ಷೆ, ಸಮಾಜದಲ್ಲಿ ಮನುಷ್ಯ ಶಾಸ್ವತನಲ್ಲ ಆತ ಮಾಡಿದ ಅಭಿವೃದ್ಧಿ ಕಾರ್ಯಕಗಳು ಶಾಸ್ವತವಾಗಿರುತ್ತವೆ, ಎಲ್ಲರೂ ಈ ಚುನಾವಣೆಯಲ್ಲಿ ಕಾರ್ಯಕರ್ತರ ಶಕ್ತಿಯೊಂದಿಗೆ ಬಿಜೆಪಿಯನ್ನು ಗೆಲ್ಲಿಸೋಣೆಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ ಮಾತನಾಡಿ ಬಾಗಲಕೋಟೆಗೆ ಮೊತ್ತೊಮ್ಮೆ ಅವಕಾಶ ಒದಗಿ ಬಂದಿದ್ದು, ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಸಾರ್ಥಕಗೊಳಿಸೋಣ ಎಂದರು,
ವೇದಿಕೆ ಮೇಲೆ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರಂಗನಗೌಡ ಗೌಡರ, ಪ್ರಭುಸ್ವಾಮಿ ಸರಗಣಾಚಾರಿ, ಬಸವರಾಜ ಯಂಕಂಚಿ, ರಾಜು ನಾಯ್ಕರ, ಸುರೇಶ ಕೋಣ್ಣೂರ, ಬಸವರಾಜ ಹುನಗುಂದ, ಕಾವೇರಿ ರಾಠೋಡ, ಮುತ್ತು ಲಮಾಣಿ, ಗಂಗಾರಾ ಚವ್ಹಾಣ, ಅಶೋಕ ಪೂಜಾರಿ, ಸೋಮಸಿಂಗ ಲಮಾಣಿ ಸೇರಿದಂತೆ ಅನೇಕರು ಇದ್ದರು.


ವೇದಿಕೆ ಮೇಲೆ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರಂಗನಗೌಡ ಗೌಡರ, ಪ್ರಭುಸ್ವಾಮಿ ಸರಗಣಾಚಾರಿ, ಬಸವರಾಜ ಯಂಕಂಚಿ, ರಾಜು ನಾಯ್ಕರ, ಸುರೇಶ ಕೋಣ್ಣೂರ, ಬಸವರಾಜ ಹುನಗುಂದ, ಕಾವೇರಿ ರಾಠೋಡ, ಮುತ್ತು ಲಮಾಣಿ, ಗಂಗಾರಾ ಚವ್ಹಾಣ, ಅಶೋಕ ಪೂಜಾರಿ, ಸೋಮಸಿಂಗ ಲಮಾಣಿ ಸೇರಿದಂತೆ ಅನೇಕರು ಇದ್ದರು.

ಪದಗ್ರಹಣ : ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ನೂತನವಾಗಿ ಆಯ್ಕೆಯಾದ ದೀಲೀಪ್ ರಾಠೋಡ ಅವರಿಗೆ ಬಿಜೆಪಿ ಧ್ವಜ ನೀಡಿ ಪದಗ್ರಹಣ ಮಾಡಲಾಯಿತು, ಇದೇ ಸಂದರ್ಭದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.
ಬೃಹತ್ ಬೈಕ್ ರ್ಯಾಲಿ : ಪದಗ್ರಹಣ ಹಾಗೂ ಪಕ್ಷ ಸೇರ್ಪಡೆ ನಿಮಿತ್ಯ ಬೈಕ್ ರ್ಯಾಲಿಯು ನವನಗರದ ಕೋರ್ಟ ಸರ್ಕಲ್ ನಿಂದ ಪ್ರಾರಂಭವಾಗಿ ವಿದ್ಯಾಗಿರಿ ಮೂಲಕ ಹಳೆ ನಗರ ಬಸವೇಶ್ವರ ವೃತ್ತದ ಮುಖಾಂತರ ರೈಲ್ವೆ ನಿಲ್ದಾಣ ರಸ್ತೆ ಮೂಲಕ ಎಪಿಎಮ್‍ಸಿ, ನವನಗರದ ಬಿಜೆಪಿ ಕಾರ್ಯಾಲದ ಮುಂದೆ ಸಮಾರೋಪಗೊಂಡಿತು.


Spread the love

About Laxminews 24x7

Check Also

ಖೋಖೋ ಆಟದಿಂದ ಭವಿಷ್ಯ ನಿರ್ಮಾಣ: ಡಾ. ಜಗದೀಶ ಚಿತ್ತರಗಿ

Spread the loveಬಾಗಲಕೋಟೆ : ಖೋಖೋ ಕ್ರೀಡೆಯಾಗಿರದೇ ಜೀವನ ಶೈಲಿಯಾಗಿದ್ದು ಇದರಲ್ಲಿ ತೊಡಗಿಸಿಕೊಳ್ಳವುದರಿಂದ ಆರೋಗ್ಯದ ಜೊತೆಗೆ ಭವಿಷ್ಯ ರೂಪಿಸಿಕೊಳ್ಳಲು ಸಹಾಯಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ