Breaking News

ಭಾರತದ ವಿರುದ್ಧ ಪಾಕ್​​ ಗೆಲುವು ಸಂಭ್ರಮಾಚರಣೆ; ಶಿಕ್ಷಕಿ ಬಂಧನ

Spread the love

ಇತ್ತೀಚೆಗೆ ದುಬೈ ಇಂಟರ್​​ನ್ಯಾಷನಲ್​​​ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್​​ ಗೆಲುವು ಸಾಧಿಸಿತ್ತು. ಈ ಬೆನ್ನಲ್ಲೇ ಭಾರತ ವಿರುದ್ಧ ಪಾಕ್ ಗೆಲುವನ್ನು ಸಂಭ್ರಮಿಸಿದ್ದ ರಾಜಸ್ಥಾನದ ಉದಯಪುರದ ಖಾಸಗಿ ಶಾಲೆಯೊಂದರ ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅಲ್ಲದೇ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ನಫೀಸಾ ಅಟಾರಿ ಎಂಬಾಕೆ ಅಮಾನತು ಒಳಗಾದ ಖಾಸಗಿ ಶಾಲೆಯ ಶಿಕ್ಷಕಿ. ಈಕೆ ಉದಯಪುರದ ನೀರಜಾ ಮೋದಿ ಎಂಬ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಭಾರತದ ವಿರುದ್ಧದ ಪಾಕ್ ಗೆಲುವನ್ನು ಸಂಭ್ರಮಿಸಿ ವಾಟ್ಸಪ್​ ಸ್ಟೇಟಸ್​​ ಹಾಕಿದ್ದರು.

‘ಜೀತ್ ಗಯಿ ಹಮಾರಾ ಟೀಮ್​​’ ಎಂದು ನಫೀಸಾ ಹಾಕಿದ್ದ ವಾಟ್ಸಾಪ್ ಸಂದೇಶ ಮೊದಲೇ ಭಾರತ ಸೋತ ಹತಾಶೆಯಲ್ಲಿದ್ದ ಕೋಟ್ಯಂತರ ಭಾರತೀಯರನ್ನು ಕೆರಳಿಸಿದೆ. ಕೂಡಲೇ ಜನ ನಫೀಸಾ ಗಮನಕ್ಕೂ ತರದಂತೆಯೇ ವಾಟ್ಸಾಪ್ ಸ್ಟೇಟಸ್ ಸ್ಕ್ರೀನ್​​ ಶಾಟ್​​ ಅನ್ನು ಸೋಷಿಯಲ್​​ ಮೀಡಿಯಾದಲ್ಲಿ ಪೋಸ್ಟ್​ ಮಾಡಿ ವೈರಲ್​​ ಮಾಡಿದ್ದಾರೆ.

 


Spread the love

About Laxminews 24x7

Check Also

ಕ್ಯಾನ್ಸರ್ ಪೀಡಿತನಿಂದ ವಿದ್ಯಾರ್ಥಿನಿ ಕೊಲೆ ಕೇಸ್​: ಪ್ರೀ ಪ್ಲ್ಯಾನ್ಡ್ ಮರ್ಡರ್ ರಹಸ್ಯ ಬಯಲು

Spread the loveಚಿತ್ರದುರ್ಗ, ಆಗಸ್ಟ್​ 21: ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಚೇತನ್​​ನಿಂದಲೇ ವಿದ್ಯಾರ್ಥಿನಿ (student) ವರ್ಷಿತಾ(19) ಕೊಲೆ (kill) ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಡಿವೈಎಸ್​ಪಿ ಪಿ.ದಿನಕರ್, ಗ್ರಾಮಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ