ಬೆಳಗಾವಿ: ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಸಾಂಬ್ರಾದಲ್ಲಿರುವ ಏರ್ ಫೋರ್ಸ್ ನ ಟ್ರೇನಿಂಗ್ ಸ್ಕೂಲ್ ನಲ್ಲಿ ನಡೆದಿದೆ.
ಹರಿಯಾಣ ಮೂಲದ ಅಮೀರ್ ಖಾನ್(24) ಆತ್ಮಹತ್ಯೆ ಮಾಡಿಕೊಂಡ ಯೋಧ.
ಇನ್ಸಾಸ್ ರೈಫಲ್‌ನಿಂದ ಗುರುವಾರ ಬೆಳಿಗ್ಗೆ ತಾನೇ ಶೂಟ್ ಮಾಡಿಕೊಂಡಿದ್ದಾರೆ. ತಕ್ಷಣ ಅಲ್ಲಿನ ಹಿರಿಯ ಅಧಿಕಾರಿಗಳು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದ್ರೆ ಚಿಕಿತ್ಸೆಗೂ ಮುನ್ನ ಯೋಧ ಮೃತಪಟ್ಟಿದ್ದಾರೆ.
ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.