Breaking News

“ನಾಡ ದೊರೆ ವೀರ ಮದಕರಿ ನಾಯಕ 238 ನೇ ಪುಣ್ಯಸ್ಮರಣೆಯ “ಕಾರ್ಯಕ್ರಮ

Spread the love

ಬೆಳಗಾವಿ: ಕರ್ನಾಟಕ ಪರಿಶಿಷ್ಠ ಪಂಗಡ ನೌಕರರ ಒಕ್ಕೂಟ (ರಿ,) ದಿಂದ ಸರ್ಕಾರದ ಆದೇಶದಂತೆ ಅಂತರ ಕಾಯ್ದುಕೊಂಡು “ನಾಡ ದೊರೆ ವೀರ ಮದಕರಿ ನಾಯಕ 238 ನೇ ಪುಣ್ಯಸ್ಮರಣೆಯ “ಕಾರ್ಯಕ್ರಮವನ್ನು ಇಂದು ಕಚೇರಿಯಲ್ಲಿ ನೆರವೇರಿಸಲಾಯಿತು .

ಕರ್ನಾಟಕ ಪರಿಶಿಷ್ಠ ಪಂಗಡ ನೌಕರರ ಒಕ್ಕೂಟದ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್,ಎಸ್,ಮೂಕನವರ ಮಾತನಾಡಿ, “ಕರ್ನಾಟಕದ ಇತಿಹಾಸವನ್ನು ಪುಟವನ್ನು ತಿರುವಿ ಹಾಕಿದಾಗ ಚಿತ್ರದುರ್ಗದ ಪಾಳೇಗಾರರಲ್ಲಿ ಮೇಲುಪಂಕ್ತಿಯಲ್ಲಿ ನಿಲ್ಲುವವರು ಯಾರೆಂದರೆ ನಾಡ ದೊರೆ ವೀರ ಮದಕರಿ ನಾಯಕ. ಉತ್ತಮ ಆಡಳಿತಗಾರನಾಗಿದ್ದು, ಮೇಲಿಂದ ಮೇಲೆ ರಾಜ್ಯದ ಮೇಲೆ ವೈರಿಗಳಿಂದ ಆಕ್ರಮಣವಾಗುವದನ್ನು ತಡೆದು,ಪ್ರಜೆಗಳಿಗೆ ರಕ್ಷಣೆ ನೀಡಿ ಸಾಮ್ರಾಜ್ಯವನ್ನು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಆಡಳಿತಾತ್ಮಕವಾಗಿ ಪ್ರಬಲಗೊಳಿಸಿ ಉತ್ತಮ ಆಳ್ವಿಕೆ ಎಂದು ಹೇಳಿದರು .

ಈ ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಠ ಪಂಗಡ ನೌಕರರ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಸಿದರಾಯಿ ಪಿ ಶೀಗಿಹಳ್ಳಿ, ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ್ ಶೀಗಿಹಳ್ಳಿ, , ಸಂತೋಷ್ ಲಂಕೆನ್ನವರ್,ಸಂಪತ ನಡೋಣಿ, ರಫಾಯಿ ಇತರರು ಇದ್ದರು.


Spread the love

About Laxminews 24x7

Check Also

ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ

Spread the love ಹುಕ್ಕೇರಿ : ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ ಹುಕ್ಕೇರಿ ನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ