ಬೆಂಗಳೂರು: ನಗರದ ಇಂದಿರಾ ನಗರ ಬೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ (ಇಇ) ರಾಜೇಶ್ ಕೆ.ವಿ. ಅವರು ವಾಣಿಜ್ಯ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಲು ₹3 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ!
ವಿದ್ಯುತ್ ಗುತ್ತಿಗೆದಾರರಾದ ದಿಲೀಪ್ ಎಸ್.ಎನ್. ಅವರು 24 ಕಿಲೋವಾಟ್ ಸಾಮರ್ಥ್ಯದ ನೂತನ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದರು! ಈ ಕೆಲಸ ಮಾಡಿಕೊಡಲು ರಾಜೇಶ್ ಅವರು ಮೊದಲಿಗೆ ₹7 ಲಕ್ಷಕ್ಕೆ ಬೇಡಿಕೆಯಿಟ್ಟು, ಅಂತಿಮವಾಗಿ ₹3 ಲಕ್ಷ ಪಡೆಯಲು ಸಮ್ಮತಿಸಿದ್ದರು! ಈ ಬಗ್ಗೆ ದಿಲೀಪ್ ಅವರು ನೀಡಿದ ಖಚಿತ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು!
ಸೋಮವಾರ ಲಂಚದ ಹಣವನ್ನು ಸ್ವೀಕರಿಸುವಾಗಲೇ ದಾಳಿ ನಡೆಸಿದ ಇನ್‌ಸ್ಪೆಕ್ಟರ್‌ಗಳಾದ ಎಸ್.ಬಿ.ಪಾಟೀಲ ಮತ್ತು ತಂಡ, ಆರೋಪಿಯನ್ನು ಬಂಧಿಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ! ದಾಳಿ ನಡೆಸಿದ ತಂಡ: ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜ್ ಮಾರ್ಗದರ್ಶನದ ತಂಡ.
Laxmi News 24×7