ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಹೆಸರು ಮತ್ತು ಉದ್ದು ಬೆಳೆಗೆ ಬೆಂಬಲ ಬೆಲೆ ಘೋಷಿಸಿ, ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಬೆಂಬಲ ಬೆಲೆ ಆಧಾರದ ಮೇಲೆ 30 ಸಾವಿರ ಟನ್ ಹೆಸರು ಕಾಳು ಹಾಗೂ 10 ಸಾವಿರ ಟನ್ ಉದ್ದಿನ ಕಾಳು ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಪ್ರತಿ ಎಕೆರೆಗೆ 4 ಕ್ವಿಂಟಾಲ್ ಗರಿಷ್ಟ, ಪ್ರತಿ ರೈತರಿಂದ 6 ಕ್ವಿಂಟಾಲ್ ಹೆಸರು ಕಾಳು ಖರೀದಿ ಮಾಡಬೇಕು. ಉದ್ದಿನ ಕಾಳು ಪ್ರತಿ ಎಕೆರೆಗೆ 3 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ 6 ಕ್ವಿಂಟಾಲ್ ಖರೀದಿಸಲು ಸೂಚನೆ ನೀಡಿದೆ.
ರಾಜ್ಯದಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ 90 ದಿನಗಳ ಕಾಲ ರೈತರಿಂದ ಬೆಂಬಲ ಬೆಲೆ ಆಧಾರದ ಮೇಲೆ ಖರೀದಿ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಗದಗ, ಹಾವೇರಿ, ಧಾರವಾಡ, ಬಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ಕೊಪ್ಪಳ, ಬೀದರ್, ಚಿತ್ರದುರ್ಗ, ತುಮಕೂರು, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರತಿ ಕ್ವಿಂಟಾಲ್ ಗೆ 7,275 ರೂ.ಗಳಂತೆ ಹೆಸರು ಕಾಳು ಖರೀದಿಗೆ ಸಹಕಾರ ಇಲಾಖೆ ಆದೇಶ ಹೊರಡಿಸಿದೆ.