Breaking News

ಟಿಪ್ಪರ್‌ನಲ್ಲಿ ಶಾಲಾ ಮಕ್ಕಳ ಪ್ರವಾಸ – ವಾಹನ ಚಾಲಕರ ವಿರುದ್ಧ ಎಫ್‌ಐಆರ್

Spread the love

ಮಂಗಳೂರು: ಟಿಪ್ಪರ್‌ನಲ್ಲಿ ಶಾಲಾ ಮಕ್ಕಳ ಪ್ರವಾಸ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಹಾಗೂ ಪಿಕಪ್ ವಾಹನ ಚಾಲಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಗುರುವಾರ (ಫೆ.12) ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ಜೇನು ಕೃಷಿ ಅಧ್ಯಯನ ಪ್ರವಾಸ ನೆಪದಲ್ಲಿ ಶಾಲಾ ಮಕ್ಕಳನ್ನು ತೆರೆದ ಪಿಕಪ್ ಮತ್ತು ಟಿಪ್ಪರ್‌ನಲ್ಲಿ ಅಪಾಯಕಾರಿ ರೀತಿ ಕರೆದೊಯ್ದ ಘಟನಡೆದಿತ್ತು. ಬಳೆಂಜ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕಿರಣ್ ಶಾಲಾ ಮಕ್ಕಳನ್ನು ಜೇನು ಕೃಷಿ ಅಧ್ಯಯನಕ್ಕೆಂದು ಸ್ಥಳೀಯ ನಾಲ್ಕೂರು ಬಳಿಯ ಅನಿಲ್ ಫಾರ್ಮ್ಗೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದರು.

ಸಣ್ಣ ಮಕ್ಕಳನ್ನು ತೆರೆದ ಟಿಪ್ಪರ್‌ನಲ್ಲಿ ಮಣ್ಣು ತುಂಬಿಸಿದ ರೀತಿ ಕರೆದೊಯ್ದಿದ್ದು ಪೋಷಕರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ತೀವ್ರ ಟೀಕೆ ವ್ಯಕ್ತವಾಗ್ತಿದ್ದಂತೆ ಪ್ರಭಾರ ಮುಖ್ಯ ಶಿಕ್ಷಕ ಕಿರಣ್‌ನನ್ನು ಅಮಾನತು ಮಾಡಿದ್ದರು. ಈ ಸಂಬಂಧ ಟಿಪ್ಪರ್ ಹಾಗೂ ಪಿಕಪ್ ವಾಹನ ಚಾಲಕರ ವಿರುದ್ಧ ಬಿಎನ್‌ಎಸ್ 281, 192(ಎ) ಅಡಿ ಬೆಳ್ತಂಗಡಿಯ ವೇಣೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇತ್ತ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಈ ಮಧ್ಯೆ, ತುಮಕೂರಿನ ಗೂಳೂರು ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟಕ್ಕಾಗಿ ಕ್ಯೂ ನಿಂತಿದ್ದ ವೇಳೆ 6 ವರ್ಷದ ಬಾಲಕಿ ಚಿನ್ಮಯಿ ಕೈಬೆರಳು ಕಟ್ ಆಗಿದೆ. ಮಕ್ಕಳು ತಳ್ಳಾಟ-ನೂಕಾಟದ ವೇಳೆ ಮಗು ಶಾಲಾ ಕೊಠಡಿಯ ಬಾಗಿಲ ಬಳಿ ಕೈ ಇಟ್ಟಿದೆ. ಇದರಿಂದ 2 ಬೆರಳು ಕಟ್ ಆಗಿದೆ. ಚಿನ್ಮಯಿ ಗೋಳಾಡುತ್ತಿದ್ದರೂ ಶಿಕ್ಷಕರು ನಿರ್ಲಕ್ಷ್ಯ ವಹಿಸಿದ್ದಾರೆ. ಸುದ್ದಿ ತಿಳಿದು ಅಜ್ಜಿ ಓಡೋಡಿ ಬಂದು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಸಂಬಂಧ ಗೂಳೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನಾಗೇಶ್ (ಎ1), ಸಹಶಿಕ್ಷಕಿಯರಾದ ರೇಣುಕಮ್ಮ (ಎ2), ವೆಂಕಟೇಶ (ಎ3), ತುಮಕೂರು ಬಿಇಓ ಹನುಮಂತಪ್ಪ(ಎ4) ವಿರುದ್ಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ತೇವೆ ಅಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.


Spread the love

About Laxminews 24x7

Check Also

ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಅತಿಶಿ

Spread the love ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಮುಹೂರ್ತ ನಿಗದಿಯಾಗಿದೆ. ಶನಿವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ