ಬೆಳಗಾವಿ(ಡಿ.06): ಬೆಳಗಾವಿಯಲ್ಲಿ (Belagavi) ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡಿದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಬಳಿಕ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ (Maharashtra Border Issue) ಮತ್ತೆ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ನಿರ್ಬಂಧ ವಿಚಾರವೂ ಅಷ್ಟೇ ಸದ್ದು ಮಾಡಿತ್ತು.
ಹೌದು ಗಡಿ ವಿಚಾರವಾಗಿ ಮಾತನಾಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಗಡಿ ಸಮಸ್ಯೆ ಎತ್ತಿ, ಕನ್ನಡಿಗರು ಹಾಗೂ ಮರಾಠಿಗರ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಮಹಾರಾಷ್ಟ್ರ ನಾಯಕರು ಮಾಡುತ್ತಿದ್ದಾರೆ. ಈಗ ಸಚಿವರ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ ಹೇರಿದ್ದೇವೆ ಗುಡುಗಿದ್ದಾರೆ. ಅಲ್ಲದೇ ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದ ಕಾರಜೋಳ ಅದಕ್ಕೆ ನಾವು ಯಾವಾಗಲೂ ಕಟಿಬದ್ದರಾಗಿರ್ತೇವೆ. ಗಡಿ ಸಮಸ್ಯೆ ತೆಗೆಯುವ ಪುಂಡರನ್ನು ಸರ್ಕಾರ ಸಹಿಸೋದಿಲ್ಲ, ಅಲ್ಲಿನ ಸಚಿವರು ಯಾವ ಕಾರಣಕ್ಕೂ ಇಲ್ಲಿಗೆ ಬರಲು ಬಿಡುವುದಿಲ್ಲ. ಅವರಿಗೆ ತಿಳಿವಳಿಕೆ ಹೇಳಿ, ಬಂದ್ರೆ ಕಾನೂನು ರೀತಿ ಕಠಿಣ ಕ್ರಮ ತಗೊಳ್ಳುತ್ತೇವೆ ಎಂದು ಪತ್ರದ ಮೂಲಕ ಎಚ್ಚರಿಕೆ ಕೂಡ ಕೊಟ್ಟಿದ್ದೇವೆ ಎಂದಿದ್ದಾರೆ.
ಇದೇ ವೇಳೆ ಎಂಇಎಸ್ ಸಭೆ ಬಗ್ಗೆ ಉಲ್ಲೇಖಿಸಿದ ಕಾರಜೋಳ ಮಹಾ ಸಚಿವರು ಗಡಿಗೆ ಬರದಂತೆ ತಡೆಯಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ಅವ್ರು ಕರ್ನಾಟಕಕ್ಕೆ ಬರುವುದನ್ನು ರದ್ದು ಮಾಡಿದ್ದಾರೆ, ಅವ್ರು ಯಾವುದೇ ಕಾರಣಕ್ಕೂ ಇಲ್ಲಿಗೆ ಬರಬಾರದು. ಬೆಳಗಾವಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಬೆಳಗಾವಿ ಜಿಲ್ಲೆ ಶಾಂತಿಯುತವಾಗಿದೆ. ಯಾವುದೇ ಎಂಇಎಸ್ ಸಭೆಗೂ ಅವಕಾಶ ಇಲ್ಲ, ಗಡಿ ವಿಷಯದಲ್ಲಿ ಪುಂಡಾಡಿಕೆ ಮಾಡಿದವರನ್ನು ಒಳಗೆ ಹಾಕ್ತೀವಿ ಎಂದೂ ಎಚ್ಚರಿಕೆ ನೀಡಿದ್ದಾರೆ.