ಬೆಳಗಾವಿ: ನಗರದಲ್ಲಿ ‘ಸಿಟೀಸ್ 2.0’ ಯೋಜನೆ ಅನುಷ್ಠಾನಕ್ಕಾಗಿ ಮಾರ್ಪಡಿಸಿದ ಘಟಕಗಳು ಹಾಗೂ ₹75 ಕೋಟಿ ವೆಚ್ಚದ ಪ್ರಸ್ತಾವಕ್ಕೆ ಅನುಮೋದನೆ ನೀಡುವ ನಿರ್ಣಯವನ್ನು ಇಲ್ಲಿ ಸೋಮವಾರ ನಡೆದ ಪಾಲಿಕೆ ಪರಿಷತ್ ಸಭೆಯಲ್ಲಿ ಕೈಗೊಳ್ಳಲಾಯಿತು.
ಯೋಜನೆ ಅನುಷ್ಠಾನಕ್ಕೆ ಬರುವ ಯಾವುದೇ ಕಾನೂನು ಅಡೆತಡೆಗಳನ್ನು ಬೆಳಗಾವಿ ಸ್ಮಾರ್ಟ್‌ಸಿಟಿ ಯೋಜನೆ ಮೂಲಕ ಪರಿಹರಿಸಿಕೊಳ್ಳಲು ನಿರ್ಧರಿಸಲಾಯಿತು.
ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ವಾರಂಗಲ್, ‘ಸಿಟೀಸ್ 2.0 ಅನುಷ್ಠಾನದಲ್ಲಿ ಕೆಲವು ಅಂತರಗಳನ್ನು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಗುರುತಿಸಿದೆ. ಹಣಕಾಸು ಮತ್ತು ತಾಂತ್ರಿಕ ಬೆಂಬಲದ ಮೂಲಕ ನಗರದಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ಧಿ ಹೆಚ್ಚಿಸಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ. ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಯೊಂದಿಗೆ ಸಭೆ ನಡೆಸಿದ ನಂತರ ಹೊಸ ಘಟಕಗಳನ್ನು ಅಂತಿಮಗೊಳಿಸಲಾಗಿದೆ’ ಎಂದು ತಿಳಿಸಿದರು.
ಆಡಳಿತ ಪಕ್ಷದ ಸದಸ್ಯ ರವಿ ಧೋತ್ರೆ, ‘ಜನರಿಗೆ ಪ್ರಯೋಜನವಾಗುವಂತೆ ಸಿಟೀಸ್ 2.0 ಯೋಜನೆ ಕಾರ್ಯಗತಗೊಳಿಸಬೇಕು. ಆದರೆ, ಸ್ಮಾರ್ಟ್‌ಸಿಟಿ ಯೋಜನೆಯು ಪಾಲಿಕೆಯನ್ನು ಲಘುವಾಗಿ ಪರಿಗಣಿಸಿ, ಕಾಮಗಾರಿ ಅನುಷ್ಠಾನಕ್ಕೆ ನಿರ್ಣಯ ಅಂಗೀಕರಿಸಲು ಸಾಧ್ಯವಿಲ್ಲ. ಒಂದುವೇಳೆ ಹಾಗಾಗಿ ಯಾವುದೇ ಕಾನೂನು ಅಡೆತಡೆ ಬಂದರೆ ಅದೇ ನೇರ ಹೊಣೆ ಹೊರಬೇಕಾಗುತ್ತದೆ ಹೊರತು, ಪಾಲಿಕೆ ಅಲ್ಲ’ ಎಂದರು.
ಆಯುಕ್ತ ಕಾರ್ತಿಕ್ ಎಂ., ‘ಈ ಯೋಜನೆ ಅನುಷ್ಠಾನಗೊಳಿಸಲು ಸ್ಮಾರ್ಟ್‌ಸಿಟಿ ಯೋಜನೆಯವರು ಪಾಲುದಾರರೊಂದಿಗೆ ಸಭೆ ನಡೆಸಿಲ್ಲ. ಅದು ಸಭೆ ನಡೆಸಿ, ಪಾಲುದಾರರ ಆಕ್ಷೇಪಣೆಗಳನ್ನು ಸಹ ಕೇಳಬೇಕಿತ್ತು’ ಎಂದು ಉಪಮೇಯರ್ ವಾಣಿ ಜೋಶಿ ಹೇಳಿದರು.
ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮಾತನಾಡಿದರು. ಮೇಯರ್ ಮಂಗೇಶ ಪವಾರ ಅವರು, ಸಿಟೀಸ್ 2.0 ಅಡಿ 8 ಪ್ರಮುಖ ಯೋಜನೆಗಳಿಗೆ ಅನುಮೋದನೆ ಕೊಟ್ಟರು.
ಸಭೆ ಆರಂಭವಾಗುತ್ತಿದ್ದಂತೆ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ, ‘ತರಾತುರಿಯಲ್ಲಿ ಈ ಸಭೆ ಕರೆಯಲಾಗಿದೆ. ಮೇಯರ್ ಕುರ್ಚಿಯಲ್ಲಿ ಕುಳಿತ ನಂತರ ನಮಗೆ ಸಭೆಯ ನಡಾವಳಿ ಕೊಡಲಾಗುತ್ತಿದೆ’ ಎಂದು ಆಕ್ಷೇಪ ಎತ್ತಿದರು
ಆಗ ರಮೇಶ ಕೊಂಗಾಲಿ, ‘ಸಿಟೀಸ್ 2.0 ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ತ್ವರಿತ ನಿರ್ನೈ ಕೈಗೊಳ್ಳಲು ಅಲ್ಪಾವಧಿಯಲ್ಲೇ ಸಭೆ ಕರೆದಿದ್ದರಿಂದ ತುಸು ವ್ಯತ್ಯಾಸವಾಗಿದೆ. ಇದಕ್ಕೆ ಬೇರೆ ಕಲ್ಪಿಸಬೇಕಿಲ್ಲ’ ಎಂದು ಸಮಜಾಯಿಷಿ ಕೊಟ್ಟರು.
ಕಾರ್ತಿಕ್ ಎಂ. ಪಾಲಿಕೆ ಆಯುಕ್ತಈ ಯೋಜನೆ ಅನುಷ್ಠಾನಗೊಳಿಸುವ ಪ್ರಕ್ರಿಯೆಯಲ್ಲಿ ಪಾಲಿಕೆ ಅಧಿಕಾರಿಗಳೂ ಇದ್ದಾರೆ. ಪಾಲಿಕೆ ವ್ಯಾಪ್ತಿಯ ಭೂಮಿಯನ್ನು ಸ್ಮಾರ್ಟ್‌ಸಿಟಿ ಯೋಜನೆಗೆ ನೀಡಲಾಗಿದೆ. ಹನುಮಂತ ಕೊಂಗಾಲಿ ಪಾಲಿಕೆ ಆಡಳಿತ ಪಕ್ಷದ ನಾಯಕಹಿಂದಿನ ಸಭೆಯಲ್ಲಿ ನಾವು ಯೋಜನೆ ಅಂಗೀಕರಿಸಿದ್ದೇವೆ. ಸಲಹಾ ಕಂಪನಿ ಅವಲೋಕನದಂತೆ ಮಾರ್ಪಡಿಸಿದ ಹೊಸ ಘಟಕಗಳಿಗೆ ನಾವು ಅನುಮೋದನೆ ನೀಡಬೇಕಾಗಿದೆ.
Laxmi News 24×7