ರಾಜ್ಯ ಸರಕಾರ ಮಂತ್ರಿಗಿರಿ ಹಂಚಿಕೆ ವಿಚಾರದಲ್ಲಿ ಭೌಗೋಳಿಕವಾಗಿ ಅಸಮತೋಲನ ಮಾಡಿದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿ ಹಾಗೂ ಬೆಂಗಳೂರಿಗೆ ಹೆಚ್ಚು ಮಂತ್ರಿ ಸ್ಥಾನಗಳನ್ನು ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, ಸಚಿವ ಸಂಪುಟ ರಚನೆ ಅದು ಮುಖ್ಯಮಂತ್ರಿಗಳ ಪರಮಾಧಿಕಾರ. ಇದು ಅವರ ವಿವೇಚನೆಗೆ ಬಿಟ್ಟಿದ್ದು. ಅದನ್ನು ಪ್ರಶ್ನೆಮಾಡುವ ನೈತಿಕ ಹಕ್ಕು ನನಗಿಲ್ಲ. ಆದರೆ ಭೌಗೋಳಿಕವಾಗಿ ಸಚವ ಸ್ಥಾನ ಹಂಚಿಕೆ ಕುರಿತಂತೆ ಅಸಮತೋಲನವಾಗಿದೆ. ಬೆಳಗಾವ ಹಾಗೂ ಬೆಂಗಲೂರಿಗೆ ಹೆಚ್ಚು ಅವಕಾಶಗಳನ್ನು ನೀಡಲಾಗಿದೆ. ಇನ್ನು ರಾಜ್ಯದಲ್ಲಿ 13 ಜಿಲ್ಲೆಗಳಲ್ಲಿ ಸಚಿವ ಸ್ಥಾನಗಳನ್ನು ನೀಡಿಲ್ಲ. ಹಾಗಾಗಿ ಈ ಕೂಡಲೇ ಈ ಅಸಮತೋಲನವನ್ನು ಹೋಗಲಾಡಿಸಬೇಕೆಂಬುದು ನಮ್ಮೆಲ್ಲ ಶಾಸಕರ ಆಗ್ರಹವಿದೆ. ಈ ಕುರಿತಂತೆ ನಾವು ರಾಜ್ಯದ ಹಿರಿಯ ನಾಯಕರು, ರಾಜ್ಯಾಧ್ಯಕ್ಷರಗೆ ಮನವಿ ಮಾಡಿದ್ದೇವೆ ಎಂದರು.ಇನ್ನು ಕೆಲವೇ ದಿಗಳಲ್ಲಿ ರಾಜ್ಯದ ಬಜೆಟ್‍ನ್ನು ಮಾಡಲಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗಲು ದೆಹಲಿಗೆ ಹೋಗಿ ನಮ್ಮ ರಾಜ್ಯದ ಸಂಸದರ ಸಭೆ ನಡೆಸುತ್ತಾರೆ. ಇನ್ನು ಕರ್ನಾಟಕದಲ್ಲಿ ಆಗಬೇಕಾದ ಅಭಿವೃದ್ಧಿಗಳನ್ನು ಕುರಿತಂತೆ ಅದಕ್ಕೆ ಸಂಬಂಧಿಸಿದ ಸಚಿವರುಗಳನ್ನು ಭೇಟಿ ಮಾಡುತ್ತಾರೆ. ಇನ್ನು ಸಚಿವ ಸಂಪುಟ ವಿಸ್ತರಣೆ ಕುರಿತಂತೆ ರಾಷ್ಟ್ರ, ರಾಜ್ಯ, ಹಾಗೂ ಮುಖ್ಯಮಂತ್ರಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ನನಗೆ ತಿಳಿದಿಲ್ಲ. ಅದು ಮುಖ್ಯಮಂತ್ರಿಗಳ ಪರಮಾದಿಕಾರಕ್ಕೆ ಬಿಟ್ಟಿದ್ದು. ಅದನ್ನು ಪ್ರಶ್ನಿಸುವ ಹಕ್ಕು ನನಗಿಲ್ಲ ಎಂದರು.
Check Also
ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ
Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …