Breaking News

ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿಕಲಚೇತನರ ಕಲ್ಯಾಣಕ್ಕೆ ಹೊಸ ಭರವಸೆ!

Spread the love

ಬೆಳಗಾವಿ ಗ್ರಾಮೀಣ ಕ್ಷೇತ್ರದ ಒಟ್ಟು 7 ಗ್ರಾಮ ಪಂಚಾಯತಿಗಳ ‘ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ’ (VRWs) ನೇಮಕಾತಿ ಆದೇಶ ಪತ್ರಗಳನ್ನು ಇಂದು ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಈ ನೇಮಕಾತಿಯು ಗ್ರಾಮೀಣ ಭಾಗದ ವಿಕಲಚೇತನರ ಸಬಲೀಕರಣ ಹಾಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಆಯ್ಕೆಯಾದ ಎಲ್ಲಾ ಕಾರ್ಯಕರ್ತರಿಗೂ ಅಭಿನಂದನೆಗಳು ಹಾಗೂ ನಿಮ್ಮ ಸೇವೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಲಿ ಎಂದು ಹಾರೈಸುತ್ತೇನೆ.

​ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮಾಜಿ ತಾಲೂಕಾ ಪಂಚಾಯತ್ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ಅಡಿವೇಶ್ ಇಟಗಿ ಹಾಗೂ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳಾದ ನಾಮದೇವ್ ಬಿಲ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ನೆಹರೂ ನಗರದ ಬಸವಣ್ಣ, ಮಹಾದೇವ ಮಂದಿರದಲ್ಲಿ ಮಹಾಶಿವರಾತ್ರಿ

Spread the loveಬೆಳಗಾವಿ: ಮಹಾಶಿವರಾತ್ರಿ ಪ್ರಯುಕ್ತ ನೆಹರೂ ನಗರದಲ್ಲಿರುವ ಬಸವಣ್ಣ, ಮಹಾದೇವ ಮಂದಿರದಲ್ಲಿ ಸೋಮವಾರ ಮಹಾರುದ್ರ ಯಾಗ, ಹೋಮ ಹಾಗೂ ಮಹಾಪ್ರಸಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ