Breaking News

ಬೆಳಗಾವಿ ಎಪಿಎಂಸಿ ಪಾಲಿಟಿಕ್ಸ್ ಗೆ ಬ್ರೇಕ್ ಹಾಕಲು ಸಿಎಂ ಪಾಲಿಟಿಕ್ಸ ಸಕ್ರೇಟರಿ ಎಂಟ್ರಿ….!!!

Spread the love

ಎಪಿಎಂಸಿ ಮಾರುಕಟ್ಟೆಗೆ ಶಂಕರಗೌಡ ಪಾಟೀಲ್ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಅವರು ಭೇಟಿ ನೀಡದರು. ವರ್ತಕ ಮತ್ತು ಸಗಟು ವ್ಯಾಪಾರಿಗಳ ಸಮಸ್ಯೆಗಳ ಕುರಿತು ಚರ್ಚಿಸಲು ಎಪಿಎಂಸಿ ಸಭಾಂಗಣದಲ್ಲಿ ಶಂಕರಗೌಡ ಪಾಟೀಲ ಸಭೆ ನಡೆಸಿದರು

ಬೆಳಗಾವಿ- ಇಂದು ಬೆಳಿಗ್ಗೆ
ಎಪಿಎಂಸಿ ಮಾರುಕಟ್ಟೆಗೆ ಶಂಕರಗೌಡ ಪಾಟೀಲ್ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಅವರು ಭೇಟಿ ನೀಡದರು. ವರ್ತಕ ಮತ್ತು ಸಗಟು ವ್ಯಾಪಾರಿಗಳ ಸಮಸ್ಯೆಗಳ ಕುರಿತು ಚರ್ಚಿಸಲು ಎಪಿಎಂಸಿ ಸಭಾಂಗಣದಲ್ಲಿ ಶಂಕರಗೌಡ ಪಾಟೀಲ ಸಭೆ ನಡೆಸಿದರು

ಸಭೆಯಲ್ಲಿ ಭಾಗವಹಿಸಿದ ವರ್ತಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು ಕೆಲವರು ಖಾಸಗಿ ಮಾರುಕಟ್ಟೆಗೆ ಅನುಮತಿ ನೀಡುವಂತೆ ಒತ್ತಾಯಿಸಿದರು ಇನ್ನು ಕೆಲವರು ಎಪಿಎಂಸಿ ಆವರಣದಲ್ಲಿ ಹೆಚ್ಚಿನ ಅಂಗಡಿಗಳನ್ನು ನಿರ್ಮಿಸಿ ದಲಾಲರಿಗೆ ಅನಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ಪರ ವಿರೋಧ ಅಭಿಪ್ರಾಯಗಳು ಮೂಡಿದಾಗ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು ಎಲ್ಲರ ಸಮಸ್ಯೆ ಆಲಿಸಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಎಲ್ಲರನ್ನು ಸಮಾಧಾನ ಪಡಿಸಿದರು.

ಎಪಿಎಂಸಿ ವರ್ತಕರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ ಅತೀ ಶಿಘ್ರದಲ್ಲೇ ವರ್ತಕರ ಸಮಸ್ಯೆ ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಶಂಕರಗೌಡ ಪಾಟೀಲ ಭರವಸೆ ನೀಡಿದರು.

ರಾಜ್ಯದ ಬಹುತೇಕ ನಗರಗಳಲ್ಲಿ ಖಾಸಗಿ ತರಕಾರಿ ಮಾರುಕಟ್ಟೆಗಳಿವೆ ,ಬೆಳಗಾವಿಯಲ್ಲೂ ಖಾಸಗಿ ಮಾರುಕಟ್ಟೆಗೆ ಅನುಮತಿ ಕೊಡಬೇಕು ಎಂದು ವರ್ತಕರು ಶಂಕರಗೌಡರಿಗೆ ಮನವಿ ಮಾಡಿಕೊಂಡರು


Spread the love

About Geelani Consultancy sol

Check Also

ಕದಂಬರ ಉಪರಾಜಧಾನಿ ಹಲಸಿಯಲ್ಲಿ ಮಹಾಲಕ್ಷ್ಮೀ ಜಾತ್ರೆ: ಭಕ್ತಿ ಭಾವದ ಹೊನ್ನಾಟದಲ್ಲಿ ಮಿಂದೆದ್ದ ಭಕ್ತಸಾಗರ

Spread the loveಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಹಲಸಿ ಗ್ರಾಮದಲ್ಲಿ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಅತ್ಯಂತ ಅದ್ಧೂರಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ