ಬೆಳಗಾವಿ : ದೈವಜ್ಞ ಜ್ಯುವೆಲ್ಲರ್ಸ್ ಅಸೋಸಿಯೇಷನ್‌ನ 9ನೇ ವಾರ್ಷಿಕ ಮಹಾಸಭೆ ಬೆಳಗಾವಿಯ ಶಹಾಪುರದ ದೈವಜ್ಞ ಮಂಗಲ ಕಾರ್ಯಾಲಯದಲ್ಲಿ ನಡೆಯಿತು.
ಸಭೆಯಲ್ಲಿ 150 ಕ್ಕೂ ಹೆಚ್ಚು ಆಜೀವ ಸದಸ್ಯರು ಭಾಗವಹಿಸಿದ್ದರು. ಕಾರ್ಯದರ್ಶಿ ಸೌರಭ್ ರೇವಣಕರ್ ವರದಿಯನ್ನು ಮಂಡಿಸಿದರು. ಖಜಾಂಚಿ ಪ್ರಶಾಂತ್ ರೇವಣಕರ್ ಲೆಕ್ಕಪತ್ರ ಪುಸ್ತಕಗಳು ಮತ್ತು ಬ್ಯಾಲೆನ್ಸ್ ಶೀಟ್ ಅನ್ನು ಮಂಡಿಸಿದರು. ಅಧ್ಯಕ್ಷ ವೈಭವ್ ವೆರ್ಣೇಕರ್ ಸಂಘದ ಸಾಧನೆಗಳು ಮತ್ತು ಬೆಳವಣಿಗೆಗಳ ಕುರಿತು ವಿವರಿಸಿದರು.
ದಯಾನಂದ ನೇತಲ್ಕರ್ ಅವರ ನೇತೃತ್ವದಲ್ಲಿ 2026- 29ರ ಹೊಸ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು. ಒಟ್ಟು 25 ಸದಸ್ಯರ ಹೊಸ ಮಂಡಳಿಯನ್ನು ಸರ್ವಾನುಮತದಿಂದ ರಚಿಸಲಾಯಿತು
ಗಜಾನನ್ (ಮಾಣಿಕ್) ಎನ್ ಅಣವೇಕರ್ ಅಧ್ಯಕ್ಷರಾಗಿ, ವೈಭವ್ ಎಸ್ ವೆರ್ಣೇಕರ್ ಗೌರವ ಕಾರ್ಯದರ್ಶಿಯಾಗಿ, ಪ್ರಶಾಂತ್ ಡಿ ರೇವಣೇಕರ್ ಖಜಾಂಚಿಯಾಗಿ ಆಯ್ಕೆಯಾದರು. ಜೀವನ್ ಡಿ ವೆರ್ಣೇಕರ್ ಉಪಾಧ್ಯಕ್ಷರಾಗಿ, ನಾಗರಾಜ್ ಎಲ್ ವೆರ್ಣೇಕರ್ ಜಂಟಿ ಕಾರ್ಯದರ್ಶಿಯಾಗಿ, ಸಂಜಯ್ ಆರ್ ಅನ್ವೇಕರ್ ಜಂಟಿ ಖಜಾಂಚಿಯಾಗಿ ಆಯ್ಕೆಯಾದರು.
ಹಿರಿಯ ಸಲಹಾ ಸಮಿತಿ ಸದಸ್ಯರಾದ ದಿನಾನಾಥ್ ಪಿ ರೇವಣೇಕರ್, ಪ್ರವೀಣ್ ಆರ್ ರೇವಣೇಕರ್, ಏಕನಾಥ್ ಆರ್ ಪೌಸ್ಕರ್, ಮಹಾಬಲೇಶ್ವರ ಶೇಜೆಕನ್ ಮೊದಲಾದವರು ಉಪಸ್ಥಿತರಿದ್ದು, ಮಾರ್ಗದರ್ಶನ ನೀಡಿದರು.
Laxmi News 24×7