ಬಾಗಲಕೋಟೆ: ವೀರಶೈವ-ಲಿಂಗಾಯತ ಎರಡು ಒಂದೆಯಾಗಿದ್ದು ತತ್ವ ಶ್ರೀಮಂತಿಕೆ ವೀರಶೈವ ಸಮಾಜದ ಶಕ್ತಿಯಾಗಿದೆ,ಲಿಂಗದ ಪ್ರಾಣವೇ ಜಂಗಮರು ಎಂದು ಸಾರುವ ಮೂಲಕ ಎಲ್ಲರನ್ನು ಏಕತೆಯಿಂದ ನೋಡುವ ಏಕೈಕ ಧರ್ಮವಾಗಿದೆ ಎಂದು ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನಮಠದ ಮನ್ನಿರಂಜನ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಸಮಾರಂಭ ನಿಮಿತ್ಯ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಗುರುವಾರ ನಡೆದ ಕಾರಣಿಕ ಯುಗಪುರುಷ ಲಿಂ.ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರ 159 ನೆಯ ಜಯಂತ್ಯುತ್ಸವ ಹಾಗೂ ಪುರಾಣ ಪ್ರವಚಣದ ಮಂಗಲ ಸಮಾರಂಭದ ದಿವ್ಯ ಸಾನಿದ್ಯವನ್ನು ವಹಿಸಿ ಹಾನಗಲ್ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಮೂಲಕ ಗೌರವ ನಮನಗಳನ್ನು ಸಲ್ಲಿಸಿ ಮಾತನಾಡಿದರು ಅವರು ವೀರಶೈವರು ತತ್ವಬದ್ದರಾಗಬೇಕು, ಶಿಕ್ಷಣ ಪಡೆದುಕೊಳ್ಳಬೇಕು, ಉದ್ಯೋಗಶೀಲರಾಗಬೇಕು ಎಂಬ ಉದ್ದೇಶದಿಂದ ಶ್ರೀಮದ್‍ವೀರಶೈ ಲಿಂಗಾಯತ ಮಹಾಸಭೆ ಹುಟ್ಟಿಕೊಂಡು ಸಮಾಜದ ಪ್ರಗತಿಯ ಕೆಲಸ ಮಾಡುತ್ತ ಬಂದಿದೆ. ವೀರಶೈವ ಧರ್ಮ ಪ್ರಾಚೀನ ಮತ್ತು ಪುರಾತಣವಾಗಿದ್ದು ಅದನ್ನು ಹೊತ್ತು ಬಸವಣ್ಣನವರು ಹೊತ್ತು ನಡೆಸುವ ಕೆಲಸವನ್ನು ಮಾಡಿದ್ದಾರೆ. ಲಿಂಗ ಪೂಜೆಯ ಮೂಲಕ ಲಿಂಗದ ಪ್ರಾಣವೇ ಜಂಗಮ ಎಂದು ಸಾರುವುದರ ಮೂಲಕ ಎಲ್ಲರನ್ನು ಒಗ್ಗೂಡಿಸಿ ಸಮಾಜದ ಬೆಳವಣಿಗೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ವೀರಶೈವ ಮತ್ತು ಲಿಂಗಾಯತರ ನಡುವೆ ಗೊಂದಲಗಳನ್ನು ಎಬ್ಬಿಸುತ್ತಿದ್ದು ಅವೆರಡು ಒಂದೇ ತತ್ವದಡಿ ನಡೆದುಬಂದಿದ್ದು, ವೀರಶೈವ ಮತ್ತು ಲಿಂಗಾಯತ ಎರಡು ಒಂದೇ ಎಂದರು.
ಬಾದಾಮಿ ವಿಶ್ರಾಂತ ಪ್ರಾಚಾರ್ಯ ಜಿ.ಬಿ.ಶೀಲವಂತ ಅವರು ಸಮಾಜ ಪ್ರೇಮಿ ಹಾನಗಲ್ ಕುಮಾರ ಮಹಾಸ್ವಾಮಿಗಳು ಹಚ್ಚಿದ ಎರಡು ನಂದಾದೀಪಗಳು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆ ಹಾಗೂ ಶ್ರೀ ಶಿವಯೋಗಮಂದಿರ ಸಂಸ್ಥೆ ಕುರಿತು ವಿಶೇಷ ಉಪನ್ಯಾಸ ನೀಡಿ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮತ್ತು ಶಿವಯೋಗ ಮಂದಿರಗಳು ಹಾನಗಲ್ಲ ಕುಮಾರ ಸ್ವಾಮಿಗಳು ಹಚ್ಚಿದ ಎರಡು ನಂದಾದೀಪಗಳಾಗಿವೆ. ವೀರಶೈವ ಸಮಾಜದ ಸಂಘಟನೆ, ಏಕತೆ ಸಾಮರಸ್ಯಕ್ಕೆ ಕಾರಣಿಭೂತರಾಗಿ ಮಾನವೀಯತೆ ಮತ್ತು ಮಾನವತಾವದಕ್ಕೆ ಹಾನಗಲ್ಲ ಶಿವಯೋಗಿಗಳು ಮಾದರಿಯಾಗಿದ್ದರು.
ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಸಮಾಜಿಕ ಕಾರ್ಯಕರ್ತರು ಬಸವಪ್ರಭು ಸರನಾಡಗೌಡ ಮಾತನಾಡಿ ಟೀಕಿನಮಠ ಪರಂಪರೆ ಹಾಗೂ ಸಮಾಜದ ಪ್ರಗತಿಗಾಗಿ ದುಡಿದ ಮಠ ಮಾನ್ಯಗಳ ಬಗ್ಗೆ ವಿವರಿಸಿದರು. ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮಿಗಳು ಪ್ರವಚನ ಮಂಗಲ ನುಡಿಯನ್ನಾಡಿದರು,
ಚರಂತಿಮಠದ ಪ್ರಭುಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅನವಾಲ ಶೃದ್ಧಾನಂದ ಆಶ್ರಮದ ಡಾ.ಕೈಲಾಸಪತಿ ಸ್ವಾಮಿಗಳು, ಗುಳೆದಗುಡ್ಡದ ಒಪ್ಪತ್ತೇಶ್ವರ ಸ್ವಾಮಿಗಳು, ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ಸ್ವಾಮಿಗಳು, ಕಿತ್ತೂರು ಸಂಸ್ಥಾನ ರಾಜಗುರು ಮಡಿವಾಳ ರಾಜಯೋಗಿಂದ್ರಸ್ವಾಮಿಗಳು, ಕೆಂಪಯ್ಯಸ್ವಾಮಿಮಠದ ಡಾ,ಮಲ್ಲಿಕಾರ್ಜುನ ಸ್ವಾಮಿಗಳು, ಹುಕ್ಕೇರಿಯ ಶಿವಬಸವಸ್ವಾಮಿಗಳು, ಹಾರನಹಳ್ಳಿ ಚೇತನ ದೇವರು ಸಾನಿದ್ಯವಹಿಸಿದ್ದರು.
ಕಾರ್ಯಕ್ರಮದಲ್ಲಿ ಚರಪಟ್ಟಾಧಿಕಾರ ಸಮಿತಿಯ ಕಾರ್ಯಾದ್ಯಕ್ಷರಾದ ಡಾ.ವೀರಣ್ಣ ಚರಂತಿಮಠ, ಜಿ,ಎನ.ಪಾಟೀಲ,ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಅಶೋಕ ಸಜ್ಜನ ಬೇವೂರ, ಮಹಾಂತೇಶ ಶೆಟ್ಟರ, ಮಲ್ಲಿಕಾರ್ಜುನ ಸಾಸನೂರ, ಚಂದ್ರಶೇಖರ ಶೆಟ್ಟರ, ಎ.ಎಸ್.ಪಾವಟೆ, ಬಸವರಾಜ ಭಗವತಿ, ಬಸವರಾಜ ಮುಕುಪಿ. ಕುಮಾರಸ್ವಾಮಿ ಹಿರೇಮಠ ಚಿತ್ತರಗಿ ಸೇರಿದಂತೆ ಅನೇಕರು ಸಾರ್ವಜನಿಕರು ಬಾಗವಹಿಸಿದ್ದರು.
Laxmi News 24×7