ಬಾಗಲಕೋಟೆ: ಅಭಿವೃದ್ಧಿಗಾಗಿ ಬಾಗಲಕೋಟೆ ಜನ ಈ ಬಾರಿ ಬಿಜೆಪಿಗೆ ಮತ ನೀಡಲು ಸಿದ್ದರಾಗಿದ್ದು ಉಪಚುನಾವಣೆಯ ಸಮರಕ್ಕೆ ಬಿಜೆಪಿ ಸಂಘಟಿತವಾಗಿ ಸಜ್ಜಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಹೇಳಿದರು.
ಅವರು ನಗರದ 22,23, 15 ಮತ್ತು 2 ನೇ ವಾರ್ಡನಲ್ಲಿ ಉಪ ಚುನಾವಣಿ ನಿಮಿತ್ಯ ಬಿಜೆಪಿ ಕಾರ್ಯಕರ್ತರಿಂದ ಮನೆ ಮನೆ ಸಂಪರ್ಕ ಮಾಡಿ ಮತಯಾಚನೆ ಮಾಡಿ ಮಾತನಾಡಿದ ಅವರು ಬಾಗಲಕೋಟೆ ಮತಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಅಭಿವೃದ್ಧಿ ಶೂನ್ಯವಾಗಿದ್ದು, ನಗರದ ಸ್ವಚ್ಚತೆ, ಬಿಟಿಡಿಎಯಲ್ಲಿ ಸಂತ್ರಸ್ಥರಿಗೆ ಸಿಗದ ಪರಿಹಾರ, ನಿಂತೂ ಹೋದ ಜನಸಾಮನ್ಯರ ಕೆಲಸಗಳಿಂದಾಗಿ ಜನತೆ ಬೆಸತ್ತು ಹೋಗಿದ್ದಾರೆ, ಈ ಚುನಾವಣೆಯಲ್ಲಿ ಎಲ್ಲ ಬಾಗಲಕೋಟೆ ಜನ ಬಿಜೆಪಿಗೆ ಮತ ನೀಡಲು ಸಿದ್ದರಾಗಿದ್ದಾರೆ, ಜನಸೇವೆಯೇ ನಮ್ಮ ಗುರಿ, ಪಕ್ಷದ ಸಿದ್ದಾಮತಗಳೇ ದ್ಯೆಯ ಸಂಘಟನೆಯೇ ನಮ್ಮ ಶಕ್ತಿಯಾಗಿದ್ದು ಈ ಉಪಚುನಾವಣೆಗೆ ಸಮರಕ್ಕೆ ಬಿಜೆಪಿ ಸಜ್ಜಾಗಿದೆ, ಖಂಡಿತ ಬಿಜೆಪಿ ಗೆಲ್ಲುತ್ತದೆ ಎಂದರು.
ಮನೆ ಮನೆ ಸಂಪರ್ಕದಲ್ಲಿ ಅಂಬಾಜಿ ಜೋಷಿ, ಯಲ್ಲಪ್ಪ ಭಜಂತ್ರಿ, ರಾಜು ಬಾಡದ, ಗಣೇಶ ಲಗಳಿ, ಸುರೇಶ ಪವಾರ, ಬಿ.ಎಲ್.ಭಜಂತ್ರಿ, ರಮೇಶ ಕಾಂಬಳೆ, ಸುರೇಶ ಲಮಾಣಿ, ಸಂತೋಷ ಪಡಸಲಗಿ, ಅನೀಲ ಚವ್ಹಾಣ, ರವಿ ರಾಠೋಡ, ಸಾಗರ ಚವ್ಹಾಣ, ವಿಠ್ಠಲ್ ಅಂಬಿಗೇರ, ಯಮನೂರಿ ಅಂಬಿಗೇರ, ಕೆ.ಟಿ.ಲಮಾನಿ, ಈರಪ್ಪ ಪೂಜಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Laxmi News 24×7