Breaking News

ಬಾಗಲಕೋಟೆ ರಣಕಣದಲ್ಲಿ ‘ಕುರಿಗಾಯಿ’ ಕಲಿ: ಸಿದ್ದರಾಮಯ್ಯಗೆ ‘ಟಗರು’ ಗಿಫ್ಟ್ ನೀಡಿದ ಅಭಿಮಾನಿಗಳು!

Spread the love

ಬಾಗಲಕೋಟೆ ಉಪಚುನಾವಣೆಯ ಪ್ರಚಾರ ಕಣದಲ್ಲಿ ಇಂದು ವಿಶೇಷ ದೃಶ್ಯವೊಂದು ಕಂಡುಬಂದಿದೆ. ಮುಗಳೊಳ್ಳಿ ಗ್ರಾಮದಲ್ಲಿ ಎರಡನೇ ದಿನದ ಪ್ರಚಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಅಚ್ಚರಿಯ ಉಡುಗೊರೆಯೊಂದನ್ನು ನೀಡಿದ್ದಾರೆ.

ಬಾಗಲಕೋಟೆ ಉಪಸಮರದ ಅಖಾಡದಲ್ಲಿ ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಮುಗಳೊಳ್ಳಿ ಗ್ರಾಮದ ವೇದಿಕೆಯಲ್ಲಿ ಅವರಿಗೆ ಗ್ರಾಮಸ್ಥರು ‘ಟಗರು’ ಉಡುಗೊರೆ ನೀಡುವ ಮೂಲಕ ಅಭಿಮಾನ ಮೆರೆದಿದ್ದಾರೆ. ಕಂಬಳಿ ಹೊದಿಸಿ, ಹೂವಿನ ಹಾರ ಹಾಕಿ ಸನ್ಮಾನಿಸಿದ ಬೆನ್ನಲ್ಲೇ ಸಿದ್ದರಾಮಯ್ಯನವರ ಆಪ್ತ ಗುರುತಾಗಿರುವ ಟಗರನ್ನು ಉಡುಗೊರೆಯಾಗಿ ನೀಡಿದ್ದು ಎಲ್ಲರ ಗಮನ ಸೆಳೆಯಿತು. ಎರಡನೇ ದಿನದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಸಿಎಂಗೆ ಸಚಿವ ತಿಮ್ಮಾಪೂರ, ಮಾಜಿ ಸಚಿವ ಎಸ್.ಆರ್. ಪಾಟೀಲ್, ಶಾಸಕರಾದ ಯಶವಂತರಾಯಗೌಡ ಪಾಟೀಲ್ ಹಾಗೂ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಘಟಾನುಘಟಿ ನಾಯಕರು ಸಾಥ್ ನೀಡಿದರು. ಈ ವೇಳೆ ನೆರೆದಿದ್ದ ಜನಸ್ತೋಮ ಜೈಕಾರ ಹಾಕುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪರ ಅಭೂತಪೂರ್ವ ಬೆಂಬಲ ಸೂಚಿಸಿತು.


Spread the love

About Laxminews 24x7

Check Also

ಬಿಜೆಪಿ ಬೆಂಬಲ ಕಂಡು ಕಾಂಗ್ರೆಸ್ ಅತಂತ್ರ: ವಿಜಯೇಂದ್ರ

Spread the loveಬಾಗಲಕೋಟೆ, ಸೋಮವಾರ: ಮುಖ್ಯಮಂತ್ರಿ ಅಲ್ಲದೆ ಯಾರೇ ಬಂದರೂ ಉಪಚುನಾವಣೆಯಲ್ಲಿ ಬಾಗಲಕೋಟೆ ಮತ್ತು ದಾವಣಗೆರೆ ಎರಡೂ ಕ್ಷೇತ್ರದಲ್ಲಿ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ