ಬೆಳಗಾವಿ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಅಮೆರಿಕದ ಬ್ರಿಡ್ಜ್‌ವಾಟರ್ ಸ್ಟೇಟ್ ವಿಶ್ವವಿದ್ಯಾಲಯದೊಂದಿಗೆ ವಿವಿಧ ಶೈಕ್ಷಣಿಕ ಒಡಂಬಡಿಕೆಗಳ ಒಪ್ಪಂದಕ್ಕೆ ಬುಧವಾರ ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಸಹಿ ಹಾಕಲಾಯಿತು.
ಈ ಕುರಿತು ಮಾತುಕತೆಗಳು ನಡೆದ ನಂತರ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಸಿಎಂ ತ್ಯಾಗರಾಜ್ ಮತ್ತು ಅಮೆರಿಕಾದ ಬ್ರಿಡ್ಜ್ ವಾಟರ್ ಸ್ಟೇಟ ವಿವಿ ಅಧ್ಯಕ್ಷ ಫ್ರೆಡ್ರಿಕ್ ಡಬ್ಲ್ಯೂ.ಕ್ಲಾರ್ಕ್ ಅವರು ಸಹಿ ಮಾಡಿ ಒಪ್ಪಂದದ ದಾಖಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಈ ಒಪ್ಪಂದವು ವಿದ್ಯಾರ್ಥಿಗಳು-ಅಧ್ಯಾಪಕರ ವಿನಿಮಯ, ಬೋಧನಾ ವಿನಿಮಯ ಕಾರ್ಯಕ್ರಮ, ಸಹಯೋಗದ ಸಂಶೋಧನೆ, ಜಾಗತಿಕ ಗೋಚರತೆಯನ್ನು ಉದಯೋನ್ಮುಖ ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸುವುದು, ಸುಸ್ಥಿರತೆ ಮತ್ತು ಪರಿಸರ, ನೀತಿ ಮತ್ತು ಸಾಮಾಜಿಕ ಅಭಿವೃದ್ಧಿಯ ಬಗ್ಗೆ ಎರಡೂ ವಿಶ್ವವಿದ್ಯಾಲಯಗಳ ನಡುವಿನ ತಿಳುವಳಿಕೆಯಾಗಿದೆ. ಈ ಒಪ್ಪಂದವು ಶೈಕ್ಷಣಿಕ ಶ್ರೇಷ್ಠತೆ ಮತ್ತು ಜಾಗತಿಕವಾಗಿ ಸಂಶೋಧನೆ ಎರಡನ್ನೂ ಉತ್ತೇಜಿಸುತ್ತದೆ.