Breaking News

Laxminews 24x7

ಕ್ವಾರಂಟೈನ್‍ನಲ್ಲಿರೋ ಮಗನಿಗಾಗಿ ಓಡೋಡಿ ಬುತ್ತಿತಂದ ತಾಯಿ……..

ಯಾದಗಿರಿ: ತಾಯಿ ಈ ಜಗದ ಕಾಣಿಸುವ ದೇವರು, ತಾನು ಹೆತ್ತ ಕೂಸುಗಳು ಮುದುಕರಾದ್ರು ತಾಯಿಗೆ ಅವರು ಯಾವಾಗಲೂ ಹಸುಗೂಸುಗಳೇ. ಇಂತಹ ತಾಯಿ ಹೃದಯ ಎಲ್ಲಕ್ಕಿಂತಲೂ ಶ್ರೇಷ್ಠ ಅನ್ನೋದು ಮತ್ತೊಮ್ಮೆ ನಿಜವಾಗಿದೆ. ಅಧಿಕಾರಿಗಳ ಮತ್ತು ಕೊರೊನಾ ಭೀತಿಯ ನಡುವೆಯೂ ಕ್ವಾರಂಟೈನ್ ನಲ್ಲಿ ತನ್ನ ಮಗ ಎರಡು ದಿನದಿಂದ ಉಪವಾಸವಿರುವುದನ್ನು ತಿಳಿದ ತಾಯಿಯೊಬ್ಬಳು, ಕ್ವಾರಂಟೈನ್ ಕೇಂದ್ರ ದತ್ತ ಓಡಿಬಂದು ಬುತ್ತಿತಂದು ಹೆತ್ತ ಕರಳಿನ ಮಹತ್ವವನ್ನು ತಿಳಿಸಿದ್ದಾಳೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸೂಗೂರು ಗ್ರಾಮದ …

Read More »

ಮಾರುಕಟ್ಟೆಗೆ ವಿಶೇಷ ಮಾಸ್ಕ್‌ಗಳು ಲಗ್ಗೆ ಇಡುತ್ತಿವೆ. ಇದೀಗ ಬೆಳ್ಳಿ ಬಳಸಿ ಸಿದ್ಧಪಡಿಸಿರುವ ಬೆಳ್ಳಿ ಮಾಸ್ಕ್……..

ಬೆಳಗಾವಿ/ಚಿಕ್ಕೋಡಿ: ಕೊರೊನಾ ಅಟ್ಟಹಾಸದಿಂದ ಮಾಸ್ಕ್ ಧರಿಸುವುದು ಕಡ್ಡಾಯವಾದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ವಿಶೇಷ ಮಾಸ್ಕ್‌ಗಳು ಲಗ್ಗೆ ಇಡುತ್ತಿವೆ. ಇದೀಗ ಬೆಳ್ಳಿ ಬಳಸಿ ಸಿದ್ಧಪಡಿಸಿರುವ ಬೆಳ್ಳಿ ಮಾಸ್ಕ್ ತಯಾರಿಸಲಾಗಿದೆ. ಮಹಾರಾಷ್ಟ್ರದ ಕೊಲ್ಲಾಪೂರ ನಗರದ ಆಭರಣ ವ್ಯಾಪಾರಿ ಸಂದೀಪ್ ಸಾಂಗವಕರ ಬೆಳ್ಳಿ ಮಾಸ್ಕ್ ತಯಾರಿಸಿದ್ದಾರೆ. ವಿಶೇಷವಾಗಿ ಕೊರೊನಾ ಭೀತಿಯಲ್ಲಿ ಮದುವೆ ಆಗುತ್ತಿರುವ ನೂತನ ವಧು-ವರರಿಗಾಗಿ ಈ ಮಾಸ್ಕ್ ತಯಾರಿಸಲಾಗಿದೆ. ಮದುವೆ ಸಮಾರಂಭದಲ್ಲಿ ವಧು-ವರರೂ ಈ ಮಾಸ್ಕ್ ಧರಿಸಿ ರಿಚ್ ಆಗಿ ಮದುವೆ ಮಾಡಿಕೊಳ್ಳುವರಿಗೆ ಈ ಮಾಸ್ಕ್ …

Read More »

ಸಾರ್ವಜನಿಕವಾಗಿ ಉಗುಳಿ ಸಿಕ್ಕಿಹಾಕಿಕೊಂಡ ಕುಖ್ಯಾತ ರೌಡಿ ಸಲೀಂ……….

ಹುಬ್ಬಳ್ಳಿ: ಕಲಬುರಗಿಯಲ್ಲಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸಲೀಂ ಬಳ್ಳಾರಿಯನ್ನು ಹುಬ್ಬಳ್ಳಿ ನೇಕಾರ ನಗರದ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ಕೈಗೆ ಸಿಕ್ಕಾಗಲೂ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಸಲೀಂ ಬಳ್ಳಾರಿಯನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಲಬುರಗಿಯಲ್ಲಿ ಕೊಲೆ ಮಾಡಿರುವ ಸಲೀಂ ಬಳ್ಳಾರಿ ತಲೆಮರೆಸಿಕೊಂಡಿದ್ದು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಲಬುರಗಿ ಪೊಲೀಸರು ಹುಡುಕುವುದನ್ನು ಸ್ಥಗಿತಗೊಳಿಸಿದ್ದರು. ಈತ ಅನೇಕ ಪ್ರಕರಣಗಳಲ್ಲಿ ಬೇಕಾಗಿರುವ ವ್ಯಕ್ತಿಯಾಗಿದ್ದ. ಕಲಬುರಗಿಯಲ್ಲಿ ಸುಪಾರಿ ಪಡೆದು ಕೊಲೆ ಮಾಡಿರುವ …

Read More »

ಕರ್ನಾಟಕಕ್ಕೆ ಕಂಟಕವಾಗುತ್ತಿದ್ದಾರೆ ಹೊರರಾಜ್ಯ ಮತ್ತು ವಿದೇಶಗಳಿಂದ ಬಂದವರು..!

ಬೆಂಗಳೂರು, ಮೇ 16- ರಾಜ್ಯಕ್ಕೆ ಹೊರರಾಜ್ಯ ಮತ್ತು ದೇಶಗಳಿಂದ ಬಂದವರೇ ಕಂಟಕರಾಗಿ ಪರಿಣಮಿಸಿದ್ದಾರೆ. ಇದುವರೆಗಿನ ಪ್ರಕರಣಗಳಲ್ಲಿ ಹೊರಗಡೆಯಿಂದ ಬಂದ ಪ್ರಯಾಣಿಕರಿಗೆ ಹೆಚ್ಚು ಕೊರೊನಾ ಸೋಂಕು ತಗುಲಿರುವುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ. ಗುಜರಾತ್‍ನಿಂದ ರಾಜ್ಯಕ್ಕೆ ಆಗಮಿಸಿದ 55 ಪ್ರಯಾಣಿಕರು, ಮುಂಬೈ ಮತ್ತು ಮಹಾರಾಷ್ಟ್ರದಿಂದ ಬಂದ 53, ರಾಜಸ್ತಾನದ 30, ದುಬೈನ 20, ಚೆನ್ನೈನ 4, ಒರಿಸ್ಸಾದ 2, ತೆಲಂಗಾಣದಿಂದ ಬಂದ 3 ಮಂದಿಗೆ ಹಾಗೂ ಲಂಡನ್‍ನಿಂದ ಬಂದ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದೆ. …

Read More »

ರಾಜ್ಯದಲ್ಲಿ ಇಂದು 23 ಜನರಲ್ಲಿ ಕೊರೊನಾ,ಬೆಳಗಾವಿಯಲ್ಲಿ ಪಾಸಿಟೀವ್ ಕೇಸ್ ಇಲ್ಲ.

ಬೆಂಗಳೂರು: ಲಾಕ್ ಡೌನ್ ಸಡಿಲಿಕೆಗೆ ಒಂದು ದಿನ ಮಾತ್ರ ಬಾಕಿಯಿದ್ದು, ಇದೇ ವೇಳೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಕೂಡ ಹೆಚ್ಚುತ್ತಲೇ ಇದೆ. ಇಂದು ಒಂದೇ ದಿನ ರಾಜ್ಯದಲ್ಲಿ 23 ಜನರಲ್ಲಿ ಕೊವಿಡ್ ಪಾಸಿಟೀವ್ ಪತ್ತೆಯಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಬೆಳಗಿನ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 23 ಜನರಲ್ಲಿ ಕೊರೊನಾ ಸೋಂಕು ಪತ್ತೆ. ಬೆಂಗಳೂರಿನಲ್ಲಿ 14, …

Read More »

ಎಣ್ಣೆಗಾಗಿ 1 ಕಿ.ಮೀ.ಗಟ್ಟಲೇ ಕ್ಯೂ – ಮದ್ಯದಂಗಡಿಗೆ ದಿನಕ್ಕೆ 500 ಟೋಕನ್ ಮಾತ್ರ””’

ಚೆನ್ನೈ: ಸುಪ್ರೀಂಕೋರ್ಟ್ ಮದ್ರಾಸ್ ಹೈಕೋರ್ಟ್ ಆದೇಶವನ್ನು ತಡೆಹಿಡಿದ ಬೆನ್ನಲ್ಲೇ ತಮಿಳುನಾಡು ಸರ್ಕಾರವು ಮದ್ಯದಂಗಡಿಯನ್ನು ಮತ್ತೆ ಓವನ್ ಮಾಡಲು ಆದೇಶ ಹೊರಡಿಸಿದೆ. ಇದರಿಂದಾಗಿ ಫುಲ್ ಖುಷಿಯಾದ ಮದ್ಯ ಪ್ರಿಯರು ಕಿ.ಮೀ.ಗಟ್ಟಲೇ ಕ್ಯೂ ನಿಂತು ಎಣ್ಣೆ ಖರೀದಿಸಿದ್ದಾರೆ. ಕೆಲವಡೆ ಸರದಿಯಲ್ಲಿ ನಿಲ್ಲುವ ಬದಲು ಸಾಲಿನಲ್ಲಿ ಚಪ್ಪಲಿ ಇಟ್ಟು ಗುಂಪುಗೂಡಿ ನಿಂತ ದೃಶ್ಯಗಳು ಕಂಡು ಬಂದವು. ತಮಿಳುನಾಡಿನಲ್ಲಿ ಸರ್ಕಾರಿ ಮದ್ಯದಂಗಡಿಗಳನ್ನು ಮುಚ್ಚುವಂತೆ ನಿರ್ದೇಶಿಸಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು. ಹೀಗಾಗಿ ರಾಜ್ಯ …

Read More »

ನಾಲ್ಕನೇ ಹಂತದ ಲಾಕ್ ಡೌನ್ ಸ್ವಲ್ಪ ಸಡಿಲಿಕೆ ಆಗಬಹುದು :ರಮೇಶ್ ಜಾರಕಿಹೋಳಿ

ಗೋಕಾಕ ನಗರದಲ್ಲಿ ಪತ್ರಿಕಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಮೇಶ್ ಜಾರಕಿಹೋಳಿ ಅವರು ಈಗಾಗಲೇ ಮೂರು ಹಂತದ ಲಾಕ್ ಡೌನ್ ಮುಗಿದಿದೆ ನಾಲ್ಕನೇ ಹಂತದ ಲಾಕ್ ಡೌನ್ ಸ್ವಲ್ಪ ಸಡಿಲಿಕೆ ಆಗಬಹುದು ಈಗಾಗಲೇ ಜನ ಈ ಒಂದು ಮಹಾಮಾರಿ ಕರೋನ್ ವೈರಸ್ ಬಗ್ಗೆ ತಿಳಿದು ಕೊಂಡಿದ್ದಾರೆ , ಆದರೆ ಸಾಮಾಜಿಕ ಅಂತರ್ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರ ಹೇಳುವ ನಿಯಮ ಗಳನ್ನಾ ಪಾಲಿಸಿ , ಕೆಲವೊಂದು ಸಡಿಲಿಕೆ ಗಳನ್ನ ನಾಲ್ಕನೇ ಹಂತದಲ್ಲಿ ಘೋಷಣೆ …

Read More »

ಸೋಮವಾರದಿಂದ ಕೆಲಸಕ್ಕೆ ಹಾಜರಾಗಿ- ಬಿಎಂಟಿಸಿಯಿಂದ ನೌಕರರಿಗೆ ಸೂಚನೆ…

ಬೆಂಗಳೂರು: ಸೋಮವಾರದಿಂದ ಕೆಲಸಕ್ಕೆ ಹಾಜರಾಗುವಂತೆ ಬಿಎಂಟಿಸಿಯಿಂದ ನೌಕರರಿಗೆ ಸೂಚಿಸಿದೆ ಎಂಬ ಮಾಹಿತಿ  ಲಭ್ಯವಾಗಿದೆ. ಸೋಮವಾರದಿಂದ ಬಸ್ ಸಂಚಾರ ಇರುತ್ತದೆ ಎಂದು ತಿಳಿಸಲಾಗಿದ್ದು, ಈ ಮೂಲಕ ಸೋಮವಾರದಿಂದ ಬಿಎಂಟಿಸಿ ಸಂಚಾರ ಆರಂಭವಾಗುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ನೌಕರರಿಗೆ ಮೆಜೆಸ್ಟಿಕ್ ಬಿಎಂಟಿಸಿ ನಿಲ್ದಾಣ, ಶಾಂತಿನಗರ ಸಾರಿಗೆ ಘಟಕ, ಶಾಂತಿ ನಗರ ಬಿಎಂಟಿಸಿ ಆಸ್ಪತ್ರೆ, ಯಶವಂತಪುರ ಬಿಎಂಟಿಸಿ ಘಟಕ, ಕೆಂಗೇರಿ ಟಿಟಿಎಂಸಿ ಹಾಗೂ ಹೆಣ್ಣೂರು ಘಟಕಗಳಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಶುಕ್ರವಾರ ಸುತ್ತೋಲೆ …

Read More »

ಹಣವಿಲ್ಲದೆ ಪರದಾಡ್ತಿದ್ದ ನಟಿಗೆ ಮೇಕಪ್ ಮ್ಯಾನ್ ಸಹಾಯ……..

ಮುಂಬೈ: ಕೊರೊನಾ ಲಾಕ್‍ಡೌನ್‍ನಿಂದ ಇಡೀ ದೇಶವೇ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಅದೇ ರೀತಿ ಕಿರುತೆರೆ ನಟಿಯೊಬ್ಬರು ಆರ್ಥಿಕ ಕಷ್ಟಕ್ಕೆ ಸಿಲುಕಿದ್ದಾಗ ಮೇಕಪ್ ಮ್ಯಾನ್ ಸಹಾಯ ಮಾಡುವುದಾಗಿ ಹೇಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸೀರಿಯಲ್, ರಿಯಾಲಿಟಿ ಶೋಗಳಿಂದ ಖ್ಯಾತಿ ಪಡೆದಿರುವ ಸೋನಾಲ್ ವೆಂಗುರ್ಲೇಕರ್ ಕೊರೊನಾ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಸ್ವಂತ ಸೋನಾಲ್ ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. “ಲಾಕ್‍ಡೌನ್‍ನಿಂದಾಗಿ ಮುಂದಿನ ತಿಂಗಳು ಜೀವನ ನಡೆಸಲು ನನ್ನ ಬಳಿ ಹೆಚ್ಚು …

Read More »

ಮಾಜಿ ಶಾಸಕ ವೈ.ಎಸ್.ವಿ.ದತ್ತರ ಸೇವೆಗೆ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಿದಾ

ಚಿಕ್ಕಮಗಳೂರು: ಫೇಸ್‍ಬುಕ್ ಲೈವ್ ಮೂಲಕ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪಾಠ ಮಾಡುತ್ತಿರೋ ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತರ ಸೇವೆಗೆ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಿದಾ ಆಗಿದ್ದಾರೆ. ದತ್ತ ಅವರಿಗೆ ಪತ್ರ ಬರೆಯುವ ಮೂಲಕ ಅವರ ಸೇವೆಗೆ ಧನ್ಯವಾದ ತಿಳಿಸಿದ್ದಾರೆ. ವೃತ್ತಿ ಹಾಗೂ ಮಕ್ಕಳ ಮೇಲಿರುವ ನಿಮ್ಮ ಪ್ರೀತಿಗೆ ನನ್ನದೊಂದು ಸಲಾಂ ಎಂದು ಪತ್ರದಲ್ಲಿ ಬರೆದಿದ್ದಾರೆ. ದತ್ತ ಮೇಷ್ಟ್ರು ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪ್ರತಿ ದಿನ ಸಂಜೆ 7.30 ರಿಂದ …

Read More »