ಬೆಂಗಳೂರು,ಫೆ.6 – ಅಂತೂ ಇಂತೂ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ನಡೆದಿದ್ದು, ಮೂಲ ಹಾಗೂ ವಲಸಿಗರ ಸಂಘರ್ಷದ ನಡುವೆಯೂ ಉಪಚುನಾವಣೆಯಲ್ಲಿ ಗೆದ್ದಿದ್ದ 10 ಮಂದಿ ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲ ವಿ.ಆರ್.ವಾಲಾ ಅವರು ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಳೆದ ಡಿಸೆಂಬರ್‍ನಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದಿದ್ದ 10 ಶಾಸಕರು ಇಂದು …
Read More »ಹೆಬ್ಬಾಳದ ಕೆಂಪಾಪುರದಲ್ಲಿ ನಾಲ್ಕು ಅಂತಸ್ತಿನ ಪಿಜಿ ಕಟ್ಟಡದಲ್ಲಿ ಬಿರುಕು :ಬೆಂಗಳೂರು
ಬೆಂಗಳೂರು, ಫೆ.5- ನಗರದಲ್ಲಿ ಕಟ್ಟಡಗಳು ವಾಲುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದ್ದು, ಇಂದು ಮತ್ತೊಂದು ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡು ಆತಂಕದಿಂದ ಜನರು ಮನೆ ಖಾಲಿ ಮಾಡಿದ್ದಾರೆ. ಹೆಬ್ಬಾಳದ ಕೆಂಪಾಪುರದಲ್ಲಿ ನಾಲ್ಕು ಅಂತಸ್ತಿನ ಪಿಜಿ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಟ್ಟಡ ವಾಲಿಕೊಂಡಿದೆ. ಬೆಳಗ್ಗೆ 8.30ರ ಸುಮಾರಿಗೆ ವಿಷಯ ಗೊತ್ತಾಗುತ್ತಿದ್ದಂತೆ ಹೆದರಿದ ಜನರು ಕಟ್ಟಡದಿಂದ ಹೊರಬಂದಿದ್ದಾರೆ. ಮನೆಯವರು ಅಗ್ನಿಶಾಮಕ ದಳ ಮತ್ತು ಬಿಬಿಎಂಪಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ …
Read More »ಮೀಸಸ್ ಇಂಡಿಯಾ ಕರ್ನಾಟಕ ಅಡಿಷನ್ ಮಹಿಳೆಯರು ಡ್ಯಾನ್ಸ್ ಹಾಗೂ ಕ್ಯಾಟ ವಾಕ್ ಮಾಡುವುದರ ಮೂಲಕ ಯಾವುದೇ ಮಾಡೆಲ್ ಗೂ ಕಡಿಮೆ ಇಲ್ಲ ಎಂಬ ಹಾಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು..
ಹುಬ್ಬಳ್ಳಿಯಲ್ಲಿ ವಿವಾಹಿತ ಮಹಿಳೆಯರ ಮೀಸೆಸ್ ಇಂಡಿಯಾ ಅಡಿಷನ್ ಹುಬ್ಬಳ್ಳಿಯಲ್ಲಿ ವಿವಾಹಿತ ಮಹಿಳೆಯರಿಗಾಗಿ ಮೀಸಸ್ ಇಂಡಿಯಾ ಕರ್ನಾಟಕ ಅಡಿಷನ್ ಏರ್ಪಡಿಸಲಾಗಿತ್ತು ಇನ್ನು ಈ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ನೂರಾರು ವಿವಾಹಿತ ಮಹಿಳೆಯರು ಅಡಿಷನ್ ನಲ್ಲಿ ಭಾಗಿಯಾಗಿದ್ದರು… ಲಕ್ಷಿಮಾಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗಿಯಾಗಿದ್ದು ಇದರಲ್ಲಿ ಮಹಿಳೆಯರು ಡ್ಯಾನ್ಸ್ ಹಾಗೂ ಕ್ಯಾಟ ವಾಕ್ ಮಾಡುವುದರ ಮೂಲಕ ತಾವು ಕೂಡಾ ಯಾವುದೇ ಮಾಡೆಲ್ ಗೂ ಕಡಿಮೆ ಇಲ್ಲ ಎಂಬ ಹಾಗೆ …
Read More »ರಾತ್ರಿ ಸರಿಯಾಗಿ ನಿದ್ದೇ ಇಲ್ಲ ಹಗಲು ಸಣ್ಣ ಮಕ್ಕಳು ಹೊರಗಡೆ ಬರೋ ಹಾಗಿಲ್ಲ ಪ್ರತಿ ದಿನದ ನರಕ ಯಾತನೆ :……
ಕಲ್ಲು ಗಣಿಕಾರಿಕೆಯಿಂದ ಪ್ರತಿನಿತ್ಯ ಕೈಯಲ್ಲಿ ಜೀವ ಹಿಡಿದುಕೊಂಡು ಬದುಕುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರುಹಳ್ಳಿಯ ವಾತಾವರಣ ಎಂದರೆ ಶಬ್ದ ಮಾಲಿನ್ಯ,ವಾಯು ಮಾಲಿನ್ಯ,ಜೊತೆಗೆ ಟ್ರಾಫಿಕ್ ಕಿರಿಕಿರಿ, ಇದು ಯಾವುದೇ ಇಲ್ಲದೆ ಆರಾಮ ಆಗಿ ಇರುವಂತ ಪ್ರದೇಶಕ್ಕೆ ಹಳ್ಳಿ ಅಂತಾರೆ,,ಆದ್ರೆ ಇಲ್ಲೊಂದು ಹಳ್ಳಿಯಲ್ಲಿ ಮಾತ್ರ ರಾತ್ರಿ ಸರಿಯಾಗಿ ನಿದ್ದೇ ಇಲ್ಲ ಹಗಲು ಸಣ್ಣ ಮಕ್ಕಳು ಹೊರಗಡೆ ಬರೋ ಹಾಗಿಲ್ಲ ಇನ್ನು ರಸ್ತೆಯ ಮೇಲೆ ನಡೆದಾಡಲು ಕೂಡಾ ಆಗದ ಪರಿಸ್ಥಿತಿ,ಇನ್ನು ಶಾಲಾ ಶಿಕ್ಷಕರು ನೆಮ್ಮದಿಯಾಗಿ ಪಾಠ ಮಾಡಂಗಿಲ್ಲ …
Read More »ಭಾರತೀಯ ಕಲೆ ಸಂಸ್ಕೃತಿ ಅಳಿಸಿ ಹೋಗಬಾರದು,:ಶಶಿಕಲಾ ಜೊಲ್ಲೆ
ಜೋಯಿಡಾ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿದ್ದ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಉದ್ಘಾಟಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಭಾರತೀಯ ಕಲೆ ಸಂಸ್ಕೃತಿ ಅಳಿಸಿ ಹೋಗಬಾರದು, ಅದು ಮುಂದಿನ ಪೀಳಿಗೆಗೆ …
Read More »ದೇಶಾದ್ಯಂತ ಕಿಚ್ಚು ಹಚ್ಚಿದ್ದ ಎನ್‌ಆರ್‌ಸಿ ಬಗ್ಗೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದ್ದು, ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಗೊಳಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ
ಬೆಂಗಳೂರು, ಫೆ.4-ದೇಶಾದ್ಯಂತ ಕಿಚ್ಚು ಹಚ್ಚಿದ್ದ ಎನ್‌ಆರ್‌ಸಿ ಬಗ್ಗೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದ್ದು, ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಗೊಳಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದೆ. ಲೋಕಸಭೆಯಲ್ಲಿ ಸಂಸದರು ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು, ನ್ಯಾಷನಲ್ ರಿಜಿಸ್ಟರ್ ಆಫ್ ಇಂಡಿಯನ್ ಸಿಟಿಜನ್ (ಎನ್‍ಆರ್‍ಐಸಿ)ಯನ್ನು ರಾಷ್ಟ್ರವ್ಯಾಪಿ ಜಾರಿಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ. ಈ ಮೊದಲು ಪೌರತ್ವ ತಿದ್ದುಪಡಿ …
Read More »ಲಕ್ಷ್ಮಣ ಸವದಿಯನ್ನು ಸಂಪುಟಕ್ಕೆ ತೆಗೆದುಕೊಂಡಿದ್ದರ ಹಿಂದೆ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳಿವೆ……..
ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ನಡೆಸಬಾರದು. ಇಷ್ಟವೋ ಕಷ್ಟವೋ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವನ್ನು ಪ್ರತಿಯೊಬ್ಬರೂ ಪಾಲನೆ ಮಾಡಲೇಬೇಕು. ಲಕ್ಷ್ಮಣ ಸವದಿಯನ್ನು ಸಂಪುಟಕ್ಕೆ ತೆಗೆದುಕೊಂಡಿದ್ದರ ಹಿಂದೆ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳಿವೆ ಬೆಂಗಳೂರು, ಫೆ.4- ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ನಡೆಸಬಾರದು. ವರಿಷ್ಠರು ತೆಗೆದುಕೊಂಡ ತೀರ್ಮಾನವನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ಯಾರೊಬ್ಬರೂ ಪ್ರತ್ಯೇಕ ಸಭೆ ನಡೆಸಬಾರದೆಂದು ಬಿಜೆಪಿ ದೆಹಲಿ ವರಿಷ್ಠರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿಗಳು ನಿನ್ನೆ ಶಾಸಕರ …
Read More »ಚೀನಾ-ಬೆಂಗಳೂರು ನಡುವೆ ವಿಮಾನ ಸಂಚಾರ ಬಂದ್..!
ಬೆಂಗಳೂರು, ಫೆ.4-ಕೊರೋನಾ ವೈರಸ್ ಭೀತಿಯಿಂದಾಗಿ ಚೀನಾ-ಬೆಂಗಳೂರು ನಡುವೆ ಸಂಚರಿಸುವ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಉಳಿದಂತೆ ಹಾಂಕಾಂಗ್, ಥೈಲ್ಯಾಂಡ್, ಸಿಂಗಪೂರ್ ನಡುವಿನ ಸಂಚಾರ ಮುಂದುವರೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುತೇಕ ಕೊರೋನಾ ವೈರಸ್ ಪೀಡಿತ ದೇಶಗಳಿಗೆ ಪ್ರಯಾಣ ಬೆಳೆಸುವುದನ್ನು ಕಡಿಮೆ ಮಾಡಲಾಗಿದೆ. ಕಳೆದ ವಾರದವರೆಗೂ ಚೀನಾದಿಂದ ವಿಮಾನಗಳು ಭಾರತಕ್ಕೆ ಆಗಮಿಸುತ್ತಿದ್ದವು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚೀನಾದಿಂದ ನೇರವಾಗಿ ವಿಮಾನಗಳು ಸಂಚರಿಸುತ್ತಿದ್ದವು. ಆದರೆ ಕೊರೋನಾ ವೈರಸ್‍ನ ಹರಡುವಿಕೆ ಹೆಚ್ಚಾಗಿದ್ದರಿಂದಾಗಿ ಸಂಚಾರ ಸ್ಥಗಿತಗೊಳಿಸಲಾಗಿದೆ.ಚೀನಾದಿಂದ …
Read More »ವಿಧಾನಸಭೆಯಿಂದ ವಿಧಾನ ಪರಿಷತ್‍ನ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ನಾಳೆ ಬಿಜೆಪಿ ಅಭ್ಯರ್ಥಿಯಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಸಲಿದ್ದಾರೆ.
ಬೆಂಗಳೂರು, ಫೆ.4- ವಿಧಾನಸಭೆಯಿಂದ ವಿಧಾನ ಪರಿಷತ್‍ನ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ನಾಳೆ ಬಿಜೆಪಿ ಅಭ್ಯರ್ಥಿಯಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಗುರುವಾರ ಕಡೆ ದಿನವಾಗಿದ್ದು, ಬಿಜೆಪಿಯಿಂದ ಸವದಿ ನಾಳೆ ಪಕ್ಷದ ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಸೋಮವಾರ ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. 17ರಂದು ಅಗತ್ಯವಿದ್ದರೆ ಚುನಾವಣೆ ನಡೆಯಲಿದೆ. ಈಗಿರುವ ವಿಧಾನಸಭೆಯ ಬಲಾಬಲದಲ್ಲಿ ಆಡಳಿತಾರೂಢ ಬಿಜೆಪಿಗೆ ಒಂದು …
Read More »ಆಟಕ್ಕುಂಟು-ಲೆಕ್ಕಕ್ಕಿಲ್ಲ ಇದೇನು ವಿಪರ್ಯಾಸವೇ? ಕಟು ಸತ್ಯವೇ? ಈಗ ಸ್ಪಷ್ಟ ಹೇಳುವುದಿಷ್ಟೇ. ಕಾಲಾಯ ತಸ್ಮೈಯ್ ನಮಃ. :ಆನಂದ್ ಮಾಮನಿ
ಬೆಂಗಳೂರು, ಫೆ.4- ಆಟಕ್ಕುಂಟು-ಲೆಕ್ಕಕ್ಕಿಲ್ಲ ಇದೇನು ವಿಪರ್ಯಾಸವೇ? ಕಟು ಸತ್ಯವೇ? ಈಗ ಸ್ಪಷ್ಟ ಹೇಳುವುದಿಷ್ಟೇ. ಕಾಲಾಯ ತಸ್ಮೈಯ್ ನಮಃ. ಬೆಳಗಾವಿ ಜಿಲ್ಲೆ ಸವದತ್ತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಮಾಮನಿ ಮಾಡಿರುವ ಟ್ವೀಟ್ ಇದು. ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿ ಕೆಲವರಿಗೆ ಮಣೆ ಹಾಕುತ್ತಿರುವುದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ.mla# ಇದೇ ಸಂದರ್ಭದಲ್ಲಿ ಆನಂದ್ ಮಾಮನಿ ಮಾಡಿರುವ ಈ ಟ್ವೀಟ್ ಸಾಕಷ್ಟು ಗೂಡಾರ್ಥವನ್ನು ನೀಡಿದೆ. ಸಾಮಾನ್ಯವಾಗಿ ಎಂದೂ ಬಹಿರಂಗವಾಗಿ ಮಾತನಾಡದೆ ಪಕ್ಷದ ಚೌಕಟ್ಟಿನಲ್ಲೇ ಇರುವ ಆನಂದ್ …
Read More »