Breaking News
Home / Laxminews 24x7 (page 3780)

Laxminews 24x7

ವಿಶ್ವದ್ಯಂತ ಕೊರೊನಾ ವೈರಸ್ ಭೀತಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಹಂತ ಹಂತವಾಗಿ ಬಂದ್ ಮಾಡುವ ಬಗ್ಗೆ ಚಿಂತನೆ ನಡೆದಿದೆ.

ಬೆಂಗಳೂರು: ವಿಶ್ವದ್ಯಂತ ಕೊರೊನಾ ವೈರಸ್ ಭೀತಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಹಂತ ಹಂತವಾಗಿ ಬಂದ್ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಮೊದಲ ಹಂತವಾಗಿ ಇಂದು ಸುಮಾರು 32 ರೈಲುಗಳ ಸಂಚಾರವನ್ನು ನಿಲ್ಲಿಸಲಾಗಿದ್ದು, ನಾಳೆಯಿಂದ ಕೊರೊನಾ ವೈರಸ್ ಹಬ್ಬುತ್ತಿರುವ ಪ್ರಮಾಣವನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ. ರೈಲುಗಳ ಸೇವೆಯಲ್ಲಿ ವ್ಯತ್ಯಯದ ವಿಚಾರ ತಿಳಿದ ಸಾರ್ವಜನಿಕರು ಕೂಡ ಗುರುವಾರದಿಂದಲೇ ತಮ್ಮ ತಮ್ಮ ಊರುಗಳಿಗೆ …

Read More »

ಅತ್ಯಾಚಾರಿಗಳ ಕೊರಳಿಗೆ ಸಾವಿನ ಕುಣಿಕೆ ಬೀಳುತ್ತಿದ್ದಂತೆ ದೇಶಾದ್ಯಂತ ಸಂಭ್ರಮ..!!

ನವದೆಹಲಿ:ಏಳು ವರ್ಷಗಳ ಸತತ ಹೋರಾಟದ ಬಳಿಕ ನಿರ್ಭಯಾ ಮೇಲಿನ ಪೈಶಾಚಿಕ ಅತ್ಯಾಚಾರ ಮತ್ತು ಬೀಕರ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ನಾಲ್ವರು ನರ ರಾಕ್ಷಸರಿಗೆ ಇಂದು ಮುಂಜಾನೆ ದೆಹಲಿಯ ತಿಹಾರ್ ಜೈಲಿನಲ್ಲಿ ಮರಣದಂಡನೆ ವಿಧಿಸಿರುವುದಕ್ಕೆ ದೇಶಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದೆ.ಪರಮಪಾಪಿಗಳಾದ ಮುಕೇಶ್ ಸಿಂಗ್, ಪವನ್ ಕುಮಾರ್, ವಿನಯ್ ಶರ್ಮ ಮತ್ತು ಅಕ್ಷಯ್ ಕುಮಾರ್‍ಗೆ ಇಂದು ಬೆಳಗ್ಗೆ ಸರಿಯಾಗಿ 5.30ರಲ್ಲಿ ನೇಣಿಗೇರಿಸಲಾಯಿತು. ಕಾನೂನು ಪ್ರಕಾರವಾಗಿಯೇ ಕೀಚಕರ ಸಂಹಾರವಾಗುತ್ತಿದ್ದಂತೆಯೇ ಇಂದು ಬೆಳಗ್ಗೆಯಿಂದಲೇ ದೇಶದ ವಿವಿಧ ನಗರಗಳಲ್ಲಿ …

Read More »

ಸತತವಾಗಿ ೮ನೇ ಬಾರಿಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಪ್ರಭಾಕರ ಕೋರೆ ಆಯ್ಕೆ

ಡಾ.ಪ್ರಭಾಕರ ಕೋರೆ ಸತತವಾಗಿ ೮ನೇ ಬಾರಿಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗುವುದರ ಮೂಲಕ ಸಂಸ್ಥೆಯ ಇತಿಹಾಸದಲ್ಲಿಯೇ ನೂತನ ದಾಖಲೆ ಬರೆದಿದ್ದಾರೆ. ಕೆಎಲ್‌ಇ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಗುರುವಾರ ಜರುಗಿದ ನೂತನ ಆಡಳಿತ ಮಂಡಳಿಯ ಪ್ರಥಮ ಸಭೆಯಲ್ಲಿ ಸದಸ್ಯರು ಡಾ.ಪ್ರಭಾಕರ ಕೋರೆಯವರನ್ನು ಕಾರ್ಯಾಧ್ಯಕ್ಷರನ್ನಾಗಿ ಪುನರ್‌ಆಯ್ಕೆ ಮಾಡುವ ಮೂಲಕ ಅಭಿನಂದಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರು ಹಾಗೂ ವಿಧಾನ ಪರಿಷತ್‌ನ ಸರ್ಕಾರದ ಮುಖ್ಯಸಚೇತಕರಾದ ಮಹಾಂತೇಶ ಕವಟಗಿಮಠ ಅವರು ಮಾತನಾಡಿ ’ಡಾ.ಕೋರೆಯವರು ಕೆಎಲ್‌ಇ ಸಂಸ್ಥೆಯ ಸಾರಥ್ಯವನ್ನು …

Read More »

ನಿರ್ಭಯಾ ಅತ್ಯಾಚಾರ ಮಾಡಿದ ಪಾಪಿಗಳನ್ನು ನೇಣು ಹಾಕಿದ ವಧಾದಾರ(ಹ್ಯಾಂಗ್‍ಮನ್)ನಿಗೆ ಚಿತ್ರನಟ ಜಗ್ಗೇಶ್ ಒಂದು ಲಕ್ಷ ರೂ. ದೇಣಿಗೆ

ಬೆಂಗಳೂರು,ಮಾ.20- ನಿರ್ಭಯಾ ಅತ್ಯಾಚಾರ ಮಾಡಿದ ಪಾಪಿಗಳನ್ನು ನೇಣು ಹಾಕಿದ ವಧಾದಾರ(ಹ್ಯಾಂಗ್‍ಮನ್)ನಿಗೆ ಚಿತ್ರನಟ ಜಗ್ಗೇಶ್ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ನಿರ್ಭಯ ಅತ್ಯಾಚಾರಿಗಳಾದ ಮುಕೇಶ್‍ಸಿಂಗ್, ಪವನ್ ಗುಪ್ತಾ, ವಿನಯ್‍ಕುಮಾರ್ ಶರ್ಮಾ, ಅಕ್ಷಯ್ ಕುಮಾರ್‍ನನ್ನು ಗಲ್ಲಿಗೇರಿಸಿದ ಹ್ಯಾಂಗ್‍ಮನ್‍ಗೆ ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇಂದು ದೇಣಿಗೆ ನೀಡಿರುವ ಬಗ್ಗೆ ಟ್ವಿಟರ್‍ನಲ್ಲಿ ಜಗ್ಗೇಶ್ ಪ್ರಕಟಿಸಿದ್ದಾರೆ. ನಿರ್ಭಯಾ ಹಂತಕರ ಹ್ಯಾಂಗ್‍ಮನ್‍ಗೆ ನನ್ನ ದೇಣಿಗೆ ದೇವನೊಬ್ಬನಿರುವ, ಅವ ಎಲ್ಲ ನೋಡುತ್ತಿರುವ ಸತ್ಯದ …

Read More »

ನಿರ್ಭಯಾ ಅಪರಾಧಿಗಳು ಏನಾಗಿದ್ದರು? ಇಲ್ಲಿದೆ ಪೂರ್ಣ ವಿವರ!

ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನೂ ಗಲ್ಲಿಗೇರಿಸಲಾಗಿದ್ದು, ಭಾರತದಲ್ಲಿ ಅತ್ಯಾಚಾರ ಅಪರಾಧಿಗಳಿಗೆ ಅತ್ಯುನ್ನತ ಶಿಕ್ಷೆ ಪೂರ್ಣಗೊಂಡಿದೆ ಸುಮಾರು 8 ವರ್ಷಗಳ ಹಿಂದೆ 23 ವರ್ಷದ ಅರೆ ವೈದ್ಯಕೀಯ ಪದವಿ ವಿದ್ಯಾರ್ಥಿನಿ ‘ನಿರ್ಭಯಾ’ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳಿಗೆ ಬೆಳಿಗ್ಗೆ 5.30ಕ್ಕೆ ಗಲ್ಲಿಗೇರಿಸಲಾಗಿದೆ. ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳ ವಯಸ್ಸು ಹಾಗೂ ಅವರು ಮಾಡುತ್ತಿದ್ದ ವೃತ್ತಿ ಸೇರಿದಂತೆ ವೈಯಕ್ತಿಕ ವಿವರಗಳು ಇಲ್ಲಿವೆ. ಮುಖೇಶ್ ಸಿಂಗ್‌: ವಯಸ್ಸು: 30 …

Read More »

ದೇಶದಲ್ಲಿ 5ನೇ ಕೊರೊನಾ ಸಾವು- 2 ದಿನದಲ್ಲಿ 2 ಬಲಿ

ಜೈಪುರ: ಭಾರತದಲ್ಲಿ ಕೊರೊನಾಗೆ ಐದನೇ ಸಾವು ಆಗಿದ್ದು, ದೇಶದ ಜನತೆ ಆತಂಕದಲ್ಲಿದ್ದಾರೆ. ರಾಜಸ್ಥಾನದ ಜೈಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಇಟಲಿ ಪ್ರವಾಸಿಗ ಸಾವನ್ನಪ್ಪಿದ್ದಾನೆ. ಪ್ರವಾಸಿಗನ ಪತ್ನಿಗೂ ಕೊರೊನಾ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಇಟಲಿ ಪ್ರವಾಸಿಗ ಸೇರಿದಂತೆ ಭಾರತದಲ್ಲಿ ಒಟ್ಟು ಐವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕಲಬುರಗಿ, ದೆಹಲಿ, ಮಹಾರಾಷ್ಟ್ರ ಮತ್ತು ಪಂಜಾಬ್ ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಗುರುವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಾರ್ಚ್ …

Read More »

ಅಂಬೋಲಿ ಬಳಿ ಕಾರಿಗೆ ಬೆಂಕಿ ಹೊತ್ತಿಕೊಂಡು ಮಹಿಳೆ ಸಾವಿಗೀಡಾದ ಪ್ರಕರಣ ಈಗ ವಿಚಿತ್ರ ತಿರುವು ಪಡೆದುಕೊಂಡಿದೆ.

ಅಂಬೋಲಿ ಬಳಿ ಕಾರಿಗೆ ಬೆಂಕಿ ಹೊತ್ತಿಕೊಂಡು ಮಹಿಳೆ ಸಾವಿಗೀಡಾದ ಪ್ರಕರಣ ಈಗ ವಿಚಿತ್ರ ತಿರುವು ಪಡೆದುಕೊಂಡಿದೆ. ಬೆಂಕಿಯಿಂದ ಗಂಭೀರ ಗಾಯಗೊಂಡು ಗೋವಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಕಾರು ಚಾಲನೆ ಮಾಡುತ್ತಿದ್ದ ದುಂಡಪ್ಪ ಪದ್ಮಣ್ಣವರ್ ಮೃತ ಮಹಿಳೆಯ ಪತಿಯಲ್ಲ. ಆತ ಆಕೆಯೊಂದಿಗೆ ರೆಸಾರ್ಟ್ ಗೆ ತೆರಳಿದ್ದ ಎನ್ನುವ ಮಾಹಿತಿ ಬಂದಿದೆ. ಸುಟ್ಟು ಭಸ್ಮವಾದ ಮಹಿಳೆ ರಿಜ್ವಾನಾ (41) ಎನ್ನುವವಳಾಗಿದ್ದು, ಆಕೆ ಬೆಳಗಾವಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಳು ಎನ್ನಲಾಗಿದೆ. ಮಹಿಳೆಯ ಸಂಬಧಿಕರು ಇದೀಗ ಪ್ರಕರಣದ …

Read More »

ಶೋಕಿಗಾಗಿ ಕಳ್ಳತನ- ಚಿನ್ನಾಭರಣ ಮಾರಿ ಗೋವಾ ಟ್ರಿಪ್ ಮಾಡುತ್ತಿದ್ದವರು ಅಂದರ್

ಮೈಸೂರು: ಶೋಕಿಗಾಗಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಸದಸ್ಯರನ್ನು ಮೈಸೂರು ಉದಯಗಿರಿ ಠಾಣೆಯ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮೂವರು ಖತರ್ನಾಕ್ ಮನೆಗಳ್ಳರು ಸೇರಿದಂತೆ 6 ಜನರ ಬಂಧಿಸಿದ್ದು, ಸೈಯದ್ ಅಲೀಂ (30) ಉಮ್ಮರ್ ಪಾಷಾ (30) ವಸೀಂ ಪಾಷಾ (27) ಬಂಧಿತ ಮನೆಗಳ್ಳರು. ಕಳುವು ಮಾಲುಗಳನ್ನು ಮಾರಾಟ ಮಾಡಲು ಸಹಕರಿಸಿದ ಮಂಜುನಾಥ್, ಆಧಿಲ್ ಪಾಷಾ ಹಾಗೂ ಅರ್ಧ ಬೆಲೆಗೆ ಚಿನ್ನಾಭರಣ ಖರೀದಿಸುತ್ತಿದ್ದ ದೇವೇಂದ್ರ ಸಿಂಗ್ ನನ್ನು ಬಂಧಿಸಲಾಗಿದೆ. ಒಟ್ಟು 7 ಮನೆ …

Read More »

ಕೊರೊನಾ ಎಫೆಕ್ಟ್ – ರಾಜಾಮೌಳಿ ಆರ್‌ಆರ್‌ಆರ್ ಸಿನಿಮಾದಿಂದ ಆಲಿಯಾ ಔಟ್

ಮುಂಬೈ: ಕೊರೊನಾ ದೇಶದ ಎಲ್ಲಾ ಕ್ಷೇತ್ರಗಳ ಮೇಲೆ ತನ್ನ ಪ್ರಭಾವವನ್ನು ಬೀರಿದೆ, ಹಾಗೆಯೇ ಭಾರತ ಚಿತ್ರರಂಗವನ್ನು ಸಂಕಷ್ಟಕ್ಕೆ ದೂಡಿದೆ. ಕೊರೊನಾದಿಂದ ನಿರ್ದೇಶಕ ರಾಜಾಮೌಳಿಯ ಆರ್‌ಆರ್‌ಆರ್ ಚಿತ್ರದಿಂದ ಬಾಲಿವುಡ್ ಬೆಡಗಿ ಆಲಿಯಾ ಭಟ್ ಹೊರಬಂದಿದ್ದಾರೆ ಎನ್ನಲಾಗಿದೆ. ಹೌದು ಸ್ಟಾರ್ ನಿರ್ದೇಶಕ ರಾಜಾಮೌಳಿ ನಿರ್ದೇಶದ ಆರ್‌ಆರ್‌ಆರ್ ಚಿತ್ರ ಬಹುಕೋಟಿ ವೆಚ್ಚದಲ್ಲಿ ತಯಾರಗುತ್ತಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅವರು ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೊರೊನಾ …

Read More »

ಸಿದ್ದಾಪುರ ತಾಲೂಕಿನಲ್ಲಿ ಹೆಚ್ಚುತ್ತಿರುವ ಮಂಗನಕಾಯಿಲೆ (ಕೆ.ಎಫ್.ಡಿ)ಯಿಂದ ಜನರು ಭಯಪಟ್ಟು ಊರು ಬಿಡುತ್ತಿದ್ದಾರೆ:ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಕ್ಷೇತ್ರ

ಕಾರವಾರ: ಕೊರೊನಾ ವೈರಸ್‍ಗೆ ರಾಜ್ಯದ ಜನ ಭಯಗೊಂಡಿದ್ದರೆ ಇತ್ತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಕ್ಷೇತ್ರ ಸಿದ್ದಾಪುರ ತಾಲೂಕಿನಲ್ಲಿ ಹೆಚ್ಚುತ್ತಿರುವ ಮಂಗನಕಾಯಿಲೆ (ಕೆ.ಎಫ್.ಡಿ)ಯಿಂದ ಜನರು ಭಯಪಟ್ಟು ಊರು ಬಿಡುತ್ತಿದ್ದಾರೆ. ಹೌದು. ಉತ್ತರ ಕನ್ನಡ ಜಿಲ್ಲೆಯ ಜನರೀಗ ಕೆ.ಎಫ್.ಡಿ ವೈರಸ್‍ಗೆ ಭಯಪಟ್ಟು ಊರು ತೊರೆಯುತಿದ್ದಾರೆ. ವಿಧಾನಸಭಾ ಸ್ಪೀಕರ್ ಕಾಗೇರಿಯವರ ಸ್ವಕ್ಷೇತ್ರ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಾಳಗೋಡು, ಮಳಗುಳಿ, ಹನುಮನಜಡ್ಡಿ, ಹೊನ್ನೆಗಟಗಿ, ತ್ಯಾಗಲಿಗಳಲ್ಲಿ 200ಕ್ಕೂ ಹೆಚ್ಚು ಮಂಗಗಳು ಈ ವರ್ಷ ಸಾವನ್ನಪ್ಪಿದ್ದು ಇವುಗಳಲ್ಲಿ …

Read More »