Breaking News

Laxminews 24x7

ಬಿಹಾರ ಉದ್ಯಮಿಗೆ 10 ಕೋಟಿ ರೂಪಾಯಿ ವಂಚನೆ ಆರೋಪ: ಆರೋಪಿ ರೋಶನ್ ಸಲ್ಡಾನ್ ಪ್ರಕರಣ ಸಿಐಡಿಗೆ

ಮಂಗಳೂರು: ದೇಶಾದ್ಯಂತ ಸಿರಿವಂತ ಉದ್ಯಮಿಗಳನ್ನು ವಂಚನೆಯ ಜಾಲದಲ್ಲಿ ಸಿಲುಕಿಸಿ ಅವರಿಂದ ಕೋಟ್ಯಂತರ ಹಣ ಲಪಟಾಯಿಸುತ್ತಿದ್ದ ಆರೋಪಿ ರೋಶನ್ ಸಲ್ಡಾನ್ ವಿರುದ್ಧ ಬಿಹಾರ ಉದ್ಯಮಿಯೊಬ್ಬರು ಮಂಗಳೂರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ. ರೋಶನ್ ಸಲ್ಡಾನ್ ತನಗೆ ಭೂಮಿ ಖರೀದಿ ವಿಚಾರದಲ್ಲಿ 10 ಕೋಟಿಗೂ ಅಧಿಕ ಮೋಸ ಮಾಡಿದ್ದಾಗಿ ಆರೋಪಿಸಿ ದೂರು ನೀಡಿದ್ದಾರೆ. 10 ಕೋಟಿಯಷ್ಟು ಮೊತ್ತದ ವಂಚನೆ ಪ್ರಕರಣ ದಾಖಲಾದರೆ ಅದನ್ನು ಸಿಐಡಿಗೆ ಕೊಡಬೇಕೆಂಬ ಕಾನೂನಿನಂತೆ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದು ಮಂಗಳೂರು …

Read More »

ನಿಪ್ಪಾಣಿ ನಗರದ ಶ್ರೀ ದುರ್ಗಾಮಾತಾ ಮಂದಿರದ ಹತ್ತಿರ ಶಾಸಕರ ನಿಧಿಯಿಂದ 10 ಲಕ್ಷ ರೂಪಾಯಿ ಮೊತ್ತದಲ್ಲಿ ಸಮುದಾಯ ಭವನದ ಭೂಮಿ ಪೂಜೆ

ನಿಪ್ಪಾಣಿ ನಗರದ ಶ್ರೀ ದುರ್ಗಾಮಾತಾ ಮಂದಿರದ ಹತ್ತಿರ ಶಾಸಕರ ನಿಧಿಯಿಂದ 10 ಲಕ್ಷ ರೂಪಾಯಿ ಮೊತ್ತದಲ್ಲಿ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಲಾಯಿತು. ಇದಕ್ಕೂ ಮೊದಲು ದೇವಿಯ ದರ್ಶನ ಪಡೆದು,ಆರತಿ ಬೆಳಗಿ,ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು. ಈಗಾಗಲೇ 11 ಲಕ್ಷ ರೂ ಮೊತ್ತದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಸಾರ್ವಜನಿಕ ಅನುಕೂಲಕ್ಕಾಗಿ ಸಮುದಾಯ ಭವನ ಭೂಮಿ ಪೂಜೆ ನೆರವೇರಿಸಿದ್ದು ,ಹಂತ ಹಂತವಾಗಿ ಅನುದಾನ ನೀಡಿ,ಸಮುದಾಯ ಭವನ …

Read More »

ಎಐಸಿಸಿ ಅಧ್ಯಕ್ಷರಿಗೆ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರವರಿಂದ ಹುಟ್ಟುಹಬ್ಬದ ಶುಭಾಶಯ ಸಲ್ಲಿಕೆ ಖಾನಾಪೂರದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್

ಎಐಸಿಸಿ ಅಧ್ಯಕ್ಷರಿಗೆ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರವರಿಂದ ಹುಟ್ಟುಹಬ್ಬದ ಶುಭಾಶಯ ಸಲ್ಲಿಕೆ ಖಾನಾಪೂರದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾಕ್ಟರ್ ಮಲ್ಲಿಕಾರ್ಜುನ ಖರ್ಗೆ ಜೀ ಅವರನ್ನು ಭೇಟಿಯಾಗಿ ಪುಷ್ಪಗುಚ್ಛ ನೀಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು ಈ ಸಂದರ್ಭದಲ್ಲಿ ಕೆಲವು ಸಮಯ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರೊಂದಿಗೆ ಆತ್ಮೀಯವಾಗಿ ಎಐಸಿಸಿ ಅಧ್ಯಕ್ಷರಾದ ಡಾಕ್ಟರ್ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ ಮಾರ್ಗದರ್ಶನ …

Read More »

ಜಮೀನಿನ ದಾರಿ ವಿಚಾರಕ್ಕೆ ಕುಟುಂಬಸ್ಥರ ನಡುವೆ ಮಾರಾಮಾರಿ..

ಬಾಗಲಕೋಟೆ: ಜಮೀನಿನ ದಾರಿ ವಿಚಾರಕ್ಕೆ ಕುಟುಂಬಸ್ಥರ ನಡುವೆ ಮಾರಾಮಾರಿ.. ಹುಟ್ಟುತ್ತ ಅಣ್ಣತಂದಿರು ಬೆಳೆಯುತ್ತ ದಾಯಾದಿಗಳು ಎನ್ನುವ ಮಾತು ಸುಳ್ಳಲ್ಲ. ಒಂದೇ ರಕ್ತ ಹಂಚಿಕೊಂಡು ಹುಟ್ಟಿದ್ರು, ಬೆಳೆಯುತ್ತಿದ್ದಂತೆ ಆಸ್ತಿಗಾಗಿ ಕಲಹ ತಪ್ಪಿದ್ದಲ್ಲ. ಅಂತಹದ್ದೇ ಒಂದು ದೊಡ್ಡ ಕುಟುಂಬದಲ್ಲಿ ಕೇವಲ ಜಮೀನಿನಲ್ಲಿ ಹೋಗುವ ದಾರಿಗಾಗಿ ಮಾರಾಮಾರಿ ನಡೆದಿದೆ. ಅಣ್ಣ ತಂಗಿ, ಮಾವ ಅಳಿಯ ಹೀಗೆ ರಕ್ತ ಸಂಬಂಧಿಗಳೇ ಕೈಯಲ್ಲಿ ಕೊಡಲಿ ಕುಡುಗೋಲು ಹಿಡಿದು ಬಡಿದಾಡಿದ್ದಾರೆ.. ಮೇವು ತೆಗೆದುಕೊಂಡು ಬರುವಾಗ ಶುರುವಾದ ದಾರಿ ಜಗಳ.. …

Read More »

ಮುಗಿಲು ಮುಟ್ಟಿತ್ತು ವಿದ್ಯಾರ್ಥಿಗಳ ಸಡಗರ ಸಂಭ್ರಮ

ಮುಗಿಲು ಮುಟ್ಟಿತ್ತು ವಿದ್ಯಾರ್ಥಿಗಳ ಸಡಗರ ಸಂಭ್ರಮ ಬೆಳಗಾವಿಯ ಸಹ್ಯಾದ್ರಿ ನಗರದಲ್ಲಿರುವ ಆಶ್ರಯ ಕಾಲೋನಿಗೆ ಬಸ್ ಸೌಕರ್ಯ ಮಹಾನಗರದ ಮಧ್ಯದಲ್ಲಿದ್ದರು ಸಾರಿಗೆ ವ್ಯವಸ್ಥೆಯಿಲ್ಲದೆ ನಿತ್ಯ ಕಿಲೋಮೀಟರ್ ವರೆಗೆ ನಡೆದುಕೊಂಡು ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ತಮ್ಮ ಕಾಲೋನಿಗೆ ಹೊಸ ಬಸವೊಂದು ಬಂದ ಖುಷಿಯಲ್ಲಿ ಅವರ ಸಡಗರ ಸಂಭ್ರಮ ಮುಗಿಲು ಮುಟ್ಟಿತ್ತು ಈ ಕುರಿತು ಒಂದು ವರದಿ ಬೆಳಗಾವಿ ಮಹಾನಗರದ ಸಹ್ಯಾದ್ರಿ ನಗರದಲ್ಲಿರುವ ಆಶ್ರಯ ಕಾಲೋನಿಗೆ ಬಸ್ ಸೌಕರ್ಯದಿಂದ ವಂಚಿವಾಗಿದ್ದ ಮಕ್ಕಳು ನಿತ್ಯ …

Read More »

ಟಾಯರ್ ಬ್ಲಾಸ್ಟ್ ದಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ; ಆರು ಜನರಿಗೆ ಗಂಭೀರ ಗಾಯ!

ಟಾಯರ್ ಬ್ಲಾಸ್ಟ್ ದಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ; ಆರು ಜನರಿಗೆ ಗಂಭೀರ ಗಾಯ! ಟಾಯರ್ ಬ್ಲಾಸ್ಟವಾಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಆರು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜರುಗಿದೆ ಮಂಗಳವಾರ ಬೆಳಗಾವಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟ್ಟಿದ್ದ ಮಹಾರಾಷ್ಟ್ರ ಮೂಲದ ಕಾರು ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮದ ಬಳಿ‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಾಯರ್ ಬ್ಲಾಸ್ಟ್ ದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ …

Read More »

ಅಥಣಿ ಪಟ್ಟಣದ ರಾಯಲ್ ಹಾಲ್’ನಲ್ಲಿಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಭೆ

ಅಥಣಿ ಪಟ್ಟಣದ ರಾಯಲ್ ಹಾಲ್’ನಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು,ಅಥಣಿಯ ಜನಪ್ರಿಯ ಶಾಸಕರಾದ ಲಕ್ಷ್ಮಣ ಸವದಿಯವರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಗವಾಡ ಮತಕ್ಷೇತ್ರದ ಶಾಸಕರಾದ ಶ್ರೀ ರಾಜು ಕಾಗೆ ಹಾಗೂ ಉಗಾರ ಬಿಕೆ ಗ್ರಾಮದ ಕರ್ನಾಟಕ ಜೈನ ಅಸೋಸಿಯೇಷನ್ ಉಪಾಧ್ಯಕ್ಷರಾದ ಶ್ರೀ ಶೀತಲ ಪಾಟೀಲ್ ಇಬ್ಬರು ಕಾಗವಾಡ ಮತ ಕ್ಷೇತ್ರಕ್ಕೆ ನಿಲ್ಲಲಿಕ್ಕೆ ಲಕ್ಷಣ್ ಸೌದಿ ಅವರ ಸಮ್ಮುಖದಲ್ಲಿ ಇಚ್ಛೆ …

Read More »

ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್​ನಿಂದ ಸಣ್ಣ ವ್ಯಾಪಾರಸ್ಥರಿಗೆ ಆಘಾತ: ಬೊಮ್ಮಾಯಿ

ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್​ನಿಂದ ಸಣ್ಣ ವ್ಯಾಪಾರಸ್ಥರಿಗೆ ಆಘಾತ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರು: ವ್ಯಾಪಾರಸ್ಥರಿಗೆ ವಾಣಿಜ್ಯ ತೆರಿಗೆ ಇಲಾಖೆಯವರು ನೋಟಿಸ್ ಕೊಟ್ಟಿದ್ದು, ಸಣ್ಣ ವ್ಯಾಪಾರಸ್ಥರಿಗೆ ದೊಡ್ಡ ಆಘಾತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಕೇಂದ್ರದ ಮೇಲೆ ಹಾಕಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಜಿಎಸ್​ಟಿ ಕೌನ್ಸಿಲ್​ನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜಂಟಿ ಜವಾಬ್ದಾರಿ ಇದೆ. ರಾಜ್ಯದ ಮೇಲೆ ಹೆಚ್ಚಿನ ಜವಾಬ್ದಾರಿ …

Read More »

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ ಅವಲಂಬಿಸಬೇಕಾಗುತ್ತದೆ. ವಯಸ್ಸಾದಂತೆ ಅವರಿಗೆ ವೈದ್ಯಕೀಯ ಆರೈಕೆ ಬೇಕಾಗುತ್ತದೆ. ಆನೇಕರು ವೃದ್ಧರು ಆರ್ಥಿಕ ಸಂಕಷ್ಟಕ್ಕೂ ಸಿಲುಕಿರುತ್ತಾರೆ. ಇದೆಲ್ಲವನ್ನೂ ಮನಗಂಡಿರುವ ಸರ್ಕಾರ, 65 ವರ್ಷದ ಅಥವಾ ಮೇಲ್ಪಟ್ಟ ವೃದ್ಧರಿಗಾಗಿ 2007 ರಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿತ್ತು. ಏನಿದು ಸಂಧ್ಯಾ ಸುರಕ್ಷಾ ಯೋಜನೆ? ಬಡತನ ರೇಖೆಗಿಂತ ಕೆಳಗಿರುವ ಅಸಹಾಯಕ ವೃದ್ಧರು, ವಿಧವೆಯರು, ವಿಶೇಷಚೇತನರು, ಅವಿವಾಹಿತ ಮಹಿಳೆಯರಿಗೆ …

Read More »

ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಲು ಆರೋಪಿಯಿಂದ ಲಂಚ ಸ್ವೀಕಾರ ಆರೋಪ: ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಲೋಕಾ ಬಲೆಗೆ

ಬೆಂಗಳೂರು : ಪ್ರಕರಣವೊಂದರಲ್ಲಿ ಬಿ ರಿಪೋರ್ಟ್ ಸಲ್ಲಿಸಲು ಆರೋಪಿಯಿಂದ 1.25 ಲಕ್ಷ ಸ್ವೀಕರಿಸುತ್ತಿದ್ದ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಒಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗೋವಿಂದಪುರ ಠಾಣೆಯ ಪಿಎಸ್ಐ ಸಾವಿತ್ರಿ ಬಾಯಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಮೊಹಮ್ಮದ್ ಯೂನಸ್ ಎಂಬಾತನಿಂದ 1.25 ಲಕ್ಷ ರೂ. ಸ್ವೀಕರಿಸುತ್ತಿದ್ದಾಗಲೇ ಸಾವಿತ್ರಿ ಬಾಯಿ ಅವರನ್ನ ವಶಕ್ಕೆ ಪಡೆಯಲಾಗಿದೆ. ಪ್ರಕರಣವೇನು‌?: ವಿವಾಹವಾಗಿರುವುದನ್ನು ಮುಚ್ಚಿಟ್ಟು ಲೀವ್ ಇನ್ ರಿಲೇಶನ್​ಶಿಪ್​ನಲ್ಲಿದ್ದ ಮೊಹಮ್ಮದ್ ಯೂನಸ್​ನನ್ನು ಪ್ರಶ್ನಿಸಿದಾಗ ತನ್ನ ಮೇಲೆ ಹಲ್ಲೆಗೈದಿರುವುದಾಗಿ …

Read More »