Breaking News

Laxminews 24x7

ತಿಂಗಳ ಹಿಂದೆ ಕಾಣೆಯಾಗಿದ್ದ ಕಮಾಂಡೋ ವಿಂಗ್ ಸೇನಾಧಿಕಾರಿ ಬೆಳಗಾವಿ ರೈಲು ನಿಲ್ದಾಣದಲ್ಲಿ ಪತ್ತೆ

ಬೆಳಗಾವಿ: ನಾಪತ್ತೆ ಆಗಿದ್ದ ಮರಾಠಾ ಲಘು ಪದಾತಿ ದಳದ ಕಮಾಂಡೋ ಟ್ರೈನಿಂಗ್ ವಿಂಗ್ ನ ಸುಬೇದಾರ್ ಮೇಜರ್ ಸುರ್ಜಿತ್ ಸಿಂಗ್ ಅವರನ್ನು ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಒಂದು ತಿಂಗಳ ಬಳಿಕ‌ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.‌ ಸುಬೇದಾರ್ ಮೇಜರ್ ಸುರ್ಜಿತ್ ಸಿಂಗ್ ಅವರು ನಾಪತ್ತೆಯಾಗಿದ್ದರಿಂದ ಸೇನಾ ವಲಯದಲ್ಲಿ ಆತಂಕಕ್ಕೆ‌ ಕಾರಣವಾಗಿತ್ತು.‌ ಪೊಲೀಸರು ಮತ್ತು ಸೇನೆಯ ಅಧಿಕಾರಿಗಳು ಶ್ರಮವಹಿಸಿ ಸೇನಾ ಅಧಿಕಾರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ವಸ್ಥ ಸ್ಥಿತಿಯಲ್ಲಿ ಸೇನಾಧಿಕಾರಿ ಶುಕ್ರವಾರ ಸಿಕ್ಕಿದ್ದಾರೆ. …

Read More »

ಚಿಕ್ಕೋಡಿ: ವಿದ್ಯುತ್ ಅವಘಡದಿಂದ ವಿದ್ಯಾರ್ಥಿನಿ ಸಾವು: ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆ

ಚಿಕ್ಕೋಡಿ: ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ವಿದ್ಯಾರ್ಥಿ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕೆಂದು ಆಗ್ರಹಿಸಿ ಚಿಕ್ಕೋಡಿ ನಗರದಲ್ಲಿ ರಾಜ್ಯ ರೈತ ಸಂಘ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರಕಾರದ ವಿರುದ್ದ ಆಕ್ರೋಶ ಹೊರ ಹಾಕಿದೆ. ಕಳೆದ ಎರಡು ದಿನಗಳ ಹಿಂದೆ ನಿಪ್ಪಾಣಿ ತಾಲೂಕಿನ ಡೋಣೆವಾಡಿ ಮರಾಠಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ವಿದ್ಯುತ್ ಅವಘಡದಿಂದ ಮೂರನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅನುಷ್ಕಾ ಬೆಂಡೆ ಮೃತಪಟ್ಟಿದ್ದು. ಬಾಲಕಿ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಕೊಡಬೇಕೆಂದು …

Read More »

ಹಿಗ್ಗಿದ ಕೃಷ್ಣೆಯ ಒಡಲು: ಮತ್ತೆ ನೆರೆ ಭೀತಿ

ಬೆಳಗಾವಿ: ಜಿಲ್ಲೆಯ ಗಡಿ ಭಾಗ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಘಟಪ್ರಭಾ ನದಿಗೆ 10 ಸಾವಿರಕ್ಕೂ ಅಧಿಕ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಇದರಿಂದ ಜಿಲ್ಲೆಯ ಪ್ರಮುಖ ಜಲಾಶಯವಾಗಿರುವ ಹಿಡಕಲ್‌ ಜಲಾಶಯಮಟ್ಟದಲ್ಲಿ ಒಂದೇ ದಿನ ಮೂರು ಅಡಿಗಳಷ್ಟು ಏರಿಕೆಯಾಗಿದೆ. ಒಟ್ಟು 2175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2093 ಅಡಿಗಳಷ್ಟು ನೀರು ಸಂಗ್ರಹವಾಗಿದೆ. …

Read More »

ಕರ್ನಾಟಕ ಸರ್ಕಾರದಿಂದ ಅಮರನಾಥ ಯಾತ್ರೆಯಲ್ಲಿ ಸಿಲುಕಿದವರಿಗೆ ಸಹಾಯವಾಣಿ

ಬೆಂಗಳೂರು: ಶುಕ್ರವಾರ ಸಂಜೆ ಅಮರನಾಥ ಗುಹೆಯ ಬಳಿ ಮೇಘ ಸ್ಫೋಟ ಉಂಟಾಗಿದ್ದು, ತೀರ್ಥಯಾತ್ರೆಗೆ ತೆರಳಿದ್ದ ಭಕ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ. ಅಮರನಾಥ ಯಾತ್ರೆಗೆ ತೆರಳಿರುವ ಕರ್ನಾಟಕದ ಯಾತ್ರಾರ್ಥಿಗಳು ಸಿಲುಕಿದ್ದು, ಅವರ ಸಹಾಯಕ್ಕೆ ಸರ್ಕಾರ ಸಹಾಯವಾಣಿ ಆರಂಭಿಸಿದೆ.   ಕರ್ನಾಟಕದ ಯಾವುದೇ ವ್ಯಕ್ತಿಯು ಸಿಕ್ಕಿಬಿದ್ದಲ್ಲಿ ದಯವಿಟ್ಟು ಕೆಳಗಿನ ಸಂಖ್ಯೆಗೆ ಕರೆ ಮಾಡಿ ಸಂಪರ್ಕ ಮಾಡಿ.‌ 080-1070, 22340676, ಇಮೇಲ್: incomedmkar@gmail.com ಮೇಘಸ್ಫೋಟದಿಂದ ಉಂಟಾದ ಭಾರೀ ಪ್ರಮಾಣದ ಪ್ರವಾಹ …

Read More »

ಸಿಗಂದೂರು ಸೇತುವೆ ಕಾಮಗಾರಿ ಸರಾಗ: ದೇಶದ 2ನೇ ಅತಿದೊಡ್ಡ ಸೇತುವೆಯ ಪೈಲ್‌ ಕ್ಯಾಪ್‌ ಅಳವಡಿಕೆ

ಶಿವಮೊಗ್ಗ:ರಾಜ್ಯದ ಪ್ರಮುಖ ಶಕ್ತಿಪೀಠ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಹಾಗೂ ದೇಶದ ಎರಡನೇ ಅತಿ ದೊಡ್ಡ ಕೇಬಲ್‌ ಸೇತುವೆ ನಿರ್ಮಾಣಕ್ಕಿದ್ದ ತೊಡಕುಗಳನ್ನು ಮೀರಿ ಪ್ರಮುಖ ಕಾಮಗಾರಿಯು ಅವಧಿಗೆ ಮುನ್ನವೇ ಮುಗಿದಿದೆ. ಕಾಮಗಾರಿಗೆ ಲಿಂಗನ ಮಕ್ಕಿ ಜಲಾಶಯದ ನೀರು ತೊಡಕಾಗುತ್ತಿದೆ ಎನ್ನಲಾಗಿತ್ತು. ಕಾಮಗಾರಿಗೆ ಲಿಂಗನ ಮಕ್ಕಿ ಜಲಾಶಯದ ನೀರು ತೊಡಕಾಗುತ್ತಿದೆ ಎನ್ನಲಾಗಿತ್ತು. ನೀರೇ ಸಮಸ್ಯೆ ಕಾಮಗಾರಿಗೆ ಪ್ರಮುಖ ಹಂತವಾದ ಪೈಲ್‌ ಕ್ಯಾಪ್‌ ಅಳವಡಿಕೆಯೇ ಸವಾಲಾಗಿತ್ತು. ಎರಡು ವರ್ಷ ಕಳೆದರೂ 5 ಪೈಲ್‌ ಕ್ಯಾಪ್‌ …

Read More »

ಮಹಾರಾಷ್ಟ್ರ ರಾಜ್ಯಪಾಲರ ನಡೆ ಪ್ರಶ್ನಿಸಿ ಅರ್ಜಿ; ಸುಪ್ರೀಂ ಮೆಟ್ಟಿಲೇರಿದ ಉದ್ಧವ್‌ ಠಾಕ್ರೆ

ಮುಂಬಯಿ: ಶಿವಸೇನೆಯಿಂದ ಬಂಡಾ ಯ ವೆದ್ದು ತನ್ನ ಬೆಂಬಲಿತ ಶಾಸಕ ರೊಂದಿಗೆ ಪಕ್ಷದಿಂದ ಹೊರನಡೆದಿದ್ದ ಏಕ ನಾಥ ಶಿಂಧೆಯವರಿಗೆ ಸರಕಾರ ರಚಿಸು ವಂತೆ ಆಹ್ವಾನ ನೀಡಿದ್ದ ಮಹಾರಾಷ್ಟ್ರದ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿಯವರ ನಡೆಯನ್ನು ಪ್ರಶ್ನಿಸಿ, ಶಿವಸೇನೆಯ ನಾಯಕ ಉದ್ಧವ್‌ ಠಾಕ್ರೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.   ಸುಪ್ರೀಂ ಕೋರ್ಟ್‌ನ ರಜಾಕಾಲದ ನ್ಯಾಯ ಪೀಠವು ಉದ್ಧವ್‌ ಅವರ ಅರ್ಜಿಯನ್ನು ಸ್ವೀಕರಿಸಿದ್ದು ಅರ್ಜಿಯ ವಿಚಾರಣೆಯನ್ನು ಜು. 11ಕ್ಕೆ ನಿಗದಿಗೊಳಿಸಿದೆ. ಅರ್ಜಿಯಲ್ಲಿ ಠಾಕ್ರೆಯವರು, ಜು. 3 ಮತ್ತು …

Read More »

ಆಂಧ್ರ ಪ್ರದೇಶ: 400 ಅಡಿ ಕೊಳವೆ ಬಾವಿಯಿಂದ ಬಾಲಕನನ್ನು ರಕ್ಷಿಸಿದ ಧೈರ್ಯಶಾಲಿ ಯುವಕ!

ವಿಜಯವಾಡ: ಆಂಧ್ರ ಪ್ರದೇಶದ ದ್ವಾರಕ ತಿರುಮಲದ ಗುಂಡುಗೊಲುಗುಂಟ ಗ್ರಾಮದಲ್ಲಿ 30 ಅಡಿ ಆಳದ ತೆರೆದ ಕೊಳಬೆ ಬಾವಿಗೆ ಬಿದಿದ್ದ 9 ವರ್ಷದ ಬಾಲಕನೊಬ್ಬನನ್ನು ಧೈರ್ಯಶಾಲಿ ಯುವಕನೊಬ್ಬ ಐದು ಗಂಟೆಗಳ ಸಾಹಸ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.   ಬಾಲಕ ಎಸ್. ಜಸ್ವಂತ್ ತನ್ನ ಮನೆ ಬಳಿ ಆಡುತ್ತಿದ್ದಾಗ ಬುಧವಾರ ರಾತ್ರಿ 7 ಗಂಟೆಯ ನಂತರ ನಾಪತ್ತೆಯಾಗಿದ್ದಾನೆ. ಆತನ ಪೋಷಕರು ಹುಡುಕಾಡಿದರೂ ಆತ ಸಿಕ್ಕಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸಹಾಯಕಕ್ಕಾಗಿ ಕೂಗುತ್ತಿದ್ದ ಬಾಲಕನ ಧ್ವನಿಯನ್ನು …

Read More »

2023ರ ವಿಧಾನಸಭಾ ಚುನಾವಣೆ ನನ್ನ ಕೊನೇ ಚುನಾವಣೆ: ಸಿದ್ದರಾಮಯ್ಯ

ಕೊಳ್ಳೇಗಾಲ: ಮುಂದಿನ ವರ್ಷದ ವಿಧಾನಸಭಾ ಚುನಾವಣೆ ನನಗೆ ಕೊನೆಯ ಚುನಾವಣೆಯಾಗಿದ್ದು, ಬಳಿಕ ರಾಜಕೀಯದಿಂದ ನಿವೃತ್ತಿ ಹೊಂದುವ ಮೂಲಕ ಇತರರಿಗೆ ಅವಕಾಶ ಕಲ್ಪಿಸಿಕೊಡುವುದಾಗಿ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಘೋಷಿಸಿದರು.   ಪಟ್ಟಣದ ಬಸ್ತೀಪುರ ಬಡಾವಣೆಯಲ್ಲಿ ಆಯೋಜಿಸಿದ್ದ ಸಿದ್ದಪ್ಪಾಜಿ ಕಂಡಾಯ ಮತ್ತು ಕೊಂಡೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಆಗಸ್ಟ್‌ 3ರಂದು ನಡೆಯುವ ನನ್ನ 75ನೇ ಜನ್ಮ ದಿನೋತ್ಸವಕ್ಕೆ ಆರೆಸ್ಸೆಸ್‌ನವರು ಸಿದ್ದರಾಮಯ್ಯ ಅವರ ಉತ್ಸವ ಎಂದು ನಾಮಕರಣ …

Read More »

ಇಂದು ಬೆಳ್ಳಂಬೆಳಗ್ಗೆ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ

ವಿಜಯಪುರ : ಇಂದು ಬೆಳ್ಳಂಬೆಳಗ್ಗೆ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.   ವಿಜಯಪುರ ನಗರ, ಗ್ರಾಮೀಣ ಭಾಗದಲ್ಲಿ ಭೂಕಂಪನವಾಗಿದ್ದು, ಇಂದು ಬೆಳಗ್ಗೆ 6.21 ರ ಸುಮಾರಿಗೆ ವಿಜಯಪುರ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಭೂಕಂಪನವಾಗಿದ್ದು, ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.   ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪದೇ ಪದೇ ಭೂಮಿ ಕಂಪಿಸಿದ ಅನುಭವವಾಗುತ್ತಿದ್ದು ಜನತೆ …

Read More »

ಅಭಯ್ ಪಾಟೀಲ್ ಗರಂ ಆಗುತ್ತಿದ್ದಂತೆ ಬಿಸಿಯೂಟ ಸರಬರಾಜು ಮಾಡುವ ಸಮೃದ್ಧಿ ಸೇವಾ ಸಂಸ್ಥೆಗೆ ನೋಟಿಸ್

ಇತ್ತಿಚೆಗೆ ಬೆಳಗಾವಿಯ ಅಳವನಗಲ್ಲಿಯ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಕಳಪೆ ಗುಣಮಟ್ಟದ ಬಿಸಿಯೂಟದ ಬಗ್ಗೆ ದಕ್ಷಿಣ ಶಾಸಕ ಅಭಯ್ ಪಾಟೀಲ್ ಗರಂ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ತಾಲೂಕಾ ಪಂಚಾಯತಿ ಕಾರ್ಯಾಲಯದ ಅಕ್ಷರ ದಾಸೋಹ ವಿಭಾಗದಿಂದ ಬಿಸಿಯೂಟ ಸರಬರಾಜು ಮಾಡುವ ಸಮೃದ್ಧಿ ಸೇವಾ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಹೌದು ಅಳವನಗಲ್ಲಿಯ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಕಳಪೆ ಗುಣಮಟ್ಟದ ಬೇಳೆ ಮತ್ತು ಅಕ್ಕಿಯನ್ನು ಬಳಸಿರುವುದು …

Read More »