Breaking News

Laxminews 24x7

ನೈಋತ್ಯ ರೈಲ್ವೆಗೆ ಸೆಪ್ಟೆಂಬರ್​ನಲ್ಲಿ ಭರ್ಜರಿ ಆದಾಯ: ಸರಕು ಸಾಗಣೆಯಿಂದ ₹427, ಪ್ರಯಾಣಿಕರಿಂದ ₹282 ಕೋಟಿ ಗಳಿಕೆ

ಹುಬ್ಬಳ್ಳಿ: ಸೆ. 2025ರಲ್ಲಿ ನೈಋತ್ಯ ರೈಲ್ವೆಯು ಸರಕು ಸಾಗಣೆ ಮತ್ತು ಆದಾಯದಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿದೆ. ಈ ಬಾರಿ ಸೆಪ್ಟೆಂಬರ್ ತಿಂಗಳಲ್ಲಿ ಅತೀ ಹೆಚ್ಚು ಸರಕು ಸಾಗಣೆಯನ್ನು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಇದು ನಿರಂತರ ಮತ್ತು ಬಲವಾದ ಬೆಳವಣಿಗೆಯ ಸೂಚಕವಾಗಿದೆ. ಈ ಅವಧಿಯಲ್ಲಿ ನೈಋತ್ಯ ರೈಲ್ವೆ ಒಟ್ಟು 4.17 ಮಿಲಿಯನ್ ಟನ್ (MT) ಮೂಲ ಸರಕುಗಳನ್ನು ಲೋಡ್ ಮಾಡಿದ್ದು, ರೈಲ್ವೆ ಮಂಡಳಿಯ 4.15 MT ಗುರಿಯನ್ನು ಮೀರಿಸಿದೆ. …

Read More »

ಬೆಂಗಳೂರಲ್ಲಿ ಮುಂಬೈ ಮಾದರಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ: ಡಿಸಿಎಂ ಸೂಚನೆ

ಬೆಂಗಳೂರು: ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಬಿಎ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಬಿಎ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಮಿತಿಯ ಮೊದಲ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಅವರು ಬೆಂಗಳೂರಿನಲ್ಲಿ 480 ಕೊಳಗೇರಿ ಪ್ರದೇಶಗಳಿದ್ದು ಅವುಗಳ ಅಭಿವೃದ್ಧಿ ಆಗಬೇಕು ಎಂಬ ವಿಷಯ ಪ್ರಸ್ತಾಪಿಸಿದರು. ಆಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಅಧಿಕಾರಿಗಳಿಗೆ …

Read More »

ಅಡಿಕೆ ಸಾಗಿಸುತ್ತಿದ್ದ VRL ಲಾರಿ ತೋಟಕ್ಕೆ ಉರುಳಿ ಸಂಪೂರ್ಣ ಜಖಂ!

ಶಿರಸಿ:ಶಿರಸಿಯಿಂದ ಹುಬ್ಬಳ್ಳಿಗೆ ಅಡಿಕೆ ಸಾಗಿಸುತ್ತಿದ್ದ VRL ಸಂಸ್ಥೆಗೆ ಸೇರಿದ ಲಾರಿಯೊಂದು ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಅಡಿಕೆ ತೋಟಕ್ಕೆ ಮಗುಚಿ ಬಿದ್ದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಈ ಅಪಘಾತದಿಂದ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಸೇರಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದಿನಾಂಕ 09.10.2025 ರಂದು ರಾತ್ರಿ ಸುಮಾರು 9:30 ಗಂಟೆ ಸುಮಾರಿಗೆ ಲಾರಿಯಲ್ಲಿ 400 ಚೀಲಗಳಷ್ಟು ಅಡಿಕೆಯನ್ನು ತುಂಬಿಕೊಂಡು ಶಿರಸಿಯಿಂದ ಹುಬ್ಬಳ್ಳಿ ಕಡೆಗೆ ಸಾಗಿಸಲಾಗುತ್ತಿತ್ತು. ಶಿರಸಿ-ಹುಬ್ಬಳ್ಳಿ …

Read More »

ಬೆಂಗಳೂರಿನಲ್ಲಿ ರಾತ್ರಿಯಿಡೀ ಮಳೆಯ ಅಬ್ಬರ

ಬೆಂಗಳೂರು: ನಗರದಲ್ಲಿ ತಡರಾತ್ರಿ ನಿರಂತರವಾಗಿ ಸುರಿದ ಮಳೆ ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಆರಂಭವಾದ ಗುಡುಗು ಹಾಗೂ ಮಿಂಚು ಸಹಿತ ಮಳೆ ರಾತ್ರಿಯಿಡೀ ಸುರಿದಿದೆ. ಹಲವೆಡೆ ರಸ್ತೆಗಳು ಜಲಾವೃತಗೊಂಡ ಪರಿಣಾಮ ವಾಹನ ಸವಾರರು ಹೈರಾಣಾಗಿದ್ದಾರೆ‌. ಮಾನ್ಯತಾ ಟೆಕ್ ಪಾರ್ಕ್, ಎಲೆಕ್ಟ್ರಾನಿಕ್ ಸಿಟಿ, ಮಹಾದೇವಪುರದ ಬಳಿ ರಸ್ತೆಗಳಲ್ಲಿ ನೀರು ನಿಂತು ಸಂಚರಿಸುವುದೇ ದುಸ್ತರವಾಗಿದೆ. ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ‌ ಲೇಔಟ್‌ನಲ್ಲಿ ಒಳಚರಂಡಿಯಿಂದ ನೀರು ಉಕ್ಕಿ ಹರಿದ ಪರಿಣಾಮ ರಸ್ತೆ, …

Read More »

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಡವರ ಕೈಗೆಟುಕದ ಬಂಗಾರ: ತುಟ್ಟಿಯಾದ ಚಿನ್ನ – ಬೆಳ್ಳಿ!

ಮಂಗಳೂರು (ದಕ್ಷಿಣ ಕನ್ನಡ): ಭಾರತದಲ್ಲಿ ಹಬ್ಬಗಳ ಋತು ಚಿನ್ನ ಮತ್ತು ಬೆಳ್ಳಿಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯನ್ನು ಸೃಷ್ಟಿಸುವ ಸಮಯವಾಗಿದೆ. 2025ರ ಸೆಪ್ಟೆಂಬರ್ – ಅಕ್ಟೋಬರ್​​ನಲ್ಲಿ ನವರಾತ್ರಿ, ದಸರಾ ಮತ್ತು ದೀಪಾವಳಿಯಂತಹ ಹಬ್ಬಗಳು ಬರುತ್ತಿದ್ದಂತೆ, ಚಿನ್ನದ ದರಗಳು ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿವೆ. ಇದು ಹಣತೆಗಳ ಬೆಳಕವನ್ನು ತುಸು ಮಸುಕಾಗುವಂತೆ ಮಾಡಿದೆ. ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರಟ್ ಚಿನ್ನದ ದರ 10 ಗ್ರಾಂಗೆ ಸುಮಾರು ರೂ. 1,20,600 ಗೆ ತಲುಪಿದ್ದು, ಬೆಳ್ಳಿಯ ದರ …

Read More »

ರಾಣಿ ಶುಗರ್ಸ್​​ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ, ಉಪಾಧ್ಯಕ್ಷ ಶಿವನಗೌಡ ಪಾಟೀಲ ಅಧಿಕಾರ ಸ್ವೀಕಾರ

ಬೆಳಗಾವಿ: ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಪ್ರತಿಷ್ಠಿತ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ವಿಧಾನ ಪರಿಷತ್​​ ಸದಸ್ಯ ಚನ್ನರಾಜ ಹಟ್ಟಿಹೊಳಿ, ಉಪಾಧ್ಯಕ್ಷರಾಗಿ ಶಿವನಗೌಡ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್​ 29ರಂದು ನಡೆದ ಚುನಾವಣೆಯಲ್ಲಿ ರೈತರ ಪುನಶ್ಚೇತನ ಪ್ಯಾನಲ್​​ 5 ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸುವ ಮೂಲಕ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಚುಕ್ಕಾಣಿ ಹಿಡಿದಿದ್ದರು. ಶಾಸಕ ಬಾಬಾಸಾಹೇಬ ಪಾಟೀಲರ ನೇತೃತ್ವದಲ್ಲಿ ನೂತನ …

Read More »

ಎಂಇಎಸ್​​​​ನಿಂದ ನ.1ರಂದು ಕರಾಳ ದಿನಾಚರಣೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಬೆಳಗಾವಿ ಅಥವಾ ಇತರ ಯಾವುದೇ ಕನ್ನಡ ಮಾತನಾಡುವ ಪ್ರದೇಶದಲ್ಲಿ ಕನ್ನಡ ರಾಜ್ಯೋತ್ಸವ (ನವೆಂಬರ್ 01) ದಿನದಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಆಚರಿಸುವ ಕರಾಳ ದಿನ ವನ್ನು ನಿರ್ಬಂಧಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಬೆಳಗಾವಿಯ ಮಲ್ಲಪ್ಪ ಛಾಯಪ್ಪ ಅಕ್ಷರದ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ ಪೂಣಚ್ಚ ಅವರ ವಿಭಾಗೀಯ …

Read More »

ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಹಿರಿಯ ನಟ ಉಮೇಶ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್‌.ಉಮೇಶ್‌ ಅವರು ಮನೆಯ ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, ಮುದ್ದಿನ ಪಾಳ್ಯದ ಶಾಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚಿಕಿತ್ಸೆ ನಡೆಯುತ್ತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಉಮೇಶ್‌ ಅವರಿಗೆ 80 ವರ್ಷ ವಯಸ್ಸಾಗಿದೆ. ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಇವರು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಶೇಷವಾಗಿ ಹಾಸ್ಯಪಾತ್ರಗಳಲ್ಲಿ ಗಮನ ಸೆಳೆದಿದ್ದಾರೆ.ಕನ್ನಡದ ದಿಗ್ಗಜ ನಟರಾದ ಡಾ.ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಪುನೀತ್ …

Read More »

: ಪರಿಹಾರ ಹಣಕ್ಕಾಗಿ ಪಂಚ ಗ್ಯಾರಂಟಿ, ಐಪಿ ಸೆಟ್ ಸಹಾಯಧನ ಕಡಿತ?

ಬೆಂಗಳೂರು: ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ರ ಯೋಜನೆಯಡಿಯ ಭೂಸ್ವಾಧೀನ, ಪುನರ್ವಸತಿಗಾಗಿ ಪರಿಹಾರ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ವಾರ್ಷಿಕ 18,000 ಕೋಟಿ ರೂ.ರಂತೆ ನಾಲ್ಕು ವರ್ಷದ ಬಜೆಟ್​ನಲ್ಲಿ ಅನುದಾನ ಹಂಚಿಕೆ ಮಾಡಿ ಪರಿಹಾರ ನೀಡಲು ತೀರ್ಮಾನಿಸಿದೆ. ಆದರೆ, ಈ ಹಣ ಹೊಂದಿಸಲು ಪಂಚ ಗ್ಯಾರಂಟಿ, ಕೃಷಿ ಐಪಿ ಸೆಟ್ ಸಹಾಯಧನಕ್ಕೆ ಕತ್ತರಿ ಹಾಕುವ ಆಯ್ಕೆ ಸೇರಿದಂತೆ ಮೂರು ಕಠಿಣ ಆಯ್ಕೆಗಳನ್ನು ಹಣಕಾಸು ಇಲಾಖೆ ಸರ್ಕಾರದ ಮುಂದಿಟ್ಟಿದೆ.‌ ಮಹತ್ವಾಕಾಂಕ್ಷೆಯ ಕೃಷ್ಣ …

Read More »

ಸ ಸಂಗ್ರಹಿಸುವ ವಾಹನದಿಂದ ಆದಾಯ: ಟಿಪ್ಪರ್​ಗಳ ಮೂಲಕ ಜಾಹೀರಾತು ಪ್ರಸಾರಕ್ಕೆ ಮುಂದಾದ ಹುಬ್ಬಳ್ಳಿ-ಧಾರವಾಡ ಪಾಲಿಕೆ

ಹುಬ್ಬಳ್ಳಿ (ಧಾರವಾಡ): ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ನಿತ್ಯವೂ ಮನೆ ಮನೆಯಿಂದ ಕಸ ಸಂಗ್ರಹಿಸಲು ಆಟೋ ಟಿಪ್ಪರ್‌ಗಳನ್ನು ನಿಯೋಜನೆ ಮಾಡಲಾಗಿದೆ. ಈ ಟಿಪ್ಪರ್​ಗಳು ನಿತ್ಯ ನಗರದ ಎಲ್ಲ ಮಾರ್ಕೆಟ್ ಹಾಗೂ ಬಡಾವಣೆಯಲ್ಲಿ ಕಸ ಸಂಗ್ರಹ ಮಾಡುತ್ತವೆ‌. ಈ ಟಿಪ್ಪರ್ ಗಳಿಂದ ವಾಣಿಜ್ಯ ಜಾಹೀರಾತು ಪ್ರಸಾರಕ್ಕೆ ಬಳಕೆ ಮಾಡುವ ಮೂಲಕ ಆದಾಯಗಳಿಸಲು ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ. ಅವಳಿ ನಗರದಲ್ಲಿ 300ಕ್ಕೂ ಹೆಚ್ಚಿರುವ ಆಟೋ ಟಿಪ್ಪರ್‌ಗಳಲ್ಲಿ ಈಗಾಗಲೇ ಆಡಿಯೋ ಸಂದೇಶವನ್ನು ಪ್ರಸಾರ …

Read More »