ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲೂಕಿನ ಉದಪುಡಿ ಗ್ರಾಮದಲ್ಲಿ ಶ್ರೀ ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ …
Read More »ಕೇಂದ್ರ ಸರ್ಕಾರದ ಅಂಗಳಕ್ಕೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ
ನವದೆಹಲಿ : ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಇದೀಗ ಕೇಂದ್ರ ಸರ್ಕಾರದ ಅಂಗಳ ತಲುಪಿದ್ದು, ಶೀಘ್ರವೇ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕ, ಮಹಾರಾಷ್ಟ್ರ ಸಿಎಂಗಳ ಜೊತೆಗೆ ಸಭೆ ನಡೆಸಲಿದ್ದಾರೆ. ಗಡಿ ವಿವಾದ ಸಂಬಂಧ ಕರ್ನಾಟಕದ ವಿರುದ್ಧ ಮಹಾರಾಷ್ಟ್ರ ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ದೂರು ನೀಡಿದೆ. ಕರ್ನಾಟಕದಲ್ಲಿ ಮಹಾರಾಷ್ಟ್ರದವರ ಮೇಲೆ ದಾಳಿಗಳು ನಡೆಯುತ್ತಿವೆ. ಕೂಡಲೇ ಅವರ ರಕ್ಷಣೆಗೆ ಕರ್ನಾಟಕದ ಸಿಎಂಗೆ ಸೂಚಿಸಬೇಕು ಎಂದು ಹೇಳಿದೆ. …
Read More »ನಾನು ಹೋಗುವಾಗ ಯಾರಾದ್ರೂ ಕಲ್ಲಲ್ಲಿ ಹೊಡೆಯಬಹುದು’ ಬೆಳಗಾವಿ ವಿವಾದದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ!
ಇತ್ತೀಚೆಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಬುಗಿಲೆದ್ದಿತ್ತು. ಬೆಳಗಾವಿ ಬಗ್ಗೆ ಮಹಾರಾಷ್ಟ್ರ ತಗಾದೆ ತೆಗೆದಿತ್ತು. ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದರು. ಬೆಳಗಾವಿ ಬಗ್ಗೆ ಮತ್ತೆ ತಗಾದೆ ತೆಗೆದಿದ್ದಕ್ಕೆ ಬೆಳಗಾವಿಯಲ್ಲಿ ಪ್ರತಿಭಟನೆಗಳನ್ನು ಮಾಡಿದ್ದರು. ಮಹಾರಾಷ್ಟ್ರದ ವಾಹನಗಳಿಗೆ ಮಸಿ ಬಳಿದು, ವಾಹನದ ಗಾಜುಗಳನ್ನು ಒಡೆದು ಹಾಕಿದ್ದರು. ಹೀಗಾಗಿ ಒಂದೆರಡು ದಿನ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಆಗಾಗ ಸಾಮಾನ್ಯ ಜನರ ನಿದ್ದೆಯನ್ನು ಕೆಡಿಸುತ್ತಿರುವ ಬೆಳಗಾವಿ …
Read More »ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಯಡವಟ್ಟು, ಬಿಕಾಂ ವಿದ್ಯಾರ್ಥಿಗಳಿಗೆ ಆಪತ್ತು
ಧಾರವಾಡ, ಡಿಸೆಂಬರ್, 09: ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸದಾ ಒಂದಿಲ್ಲೊಂದು ಯಡವಟ್ಟು ಆಗುತ್ತಲೇ ಇರುತ್ತದೆ. ಇದೀಗ ಯುಜಿ ಪರೀಕ್ಷೆಯ ಅಂಕಪಟ್ಟಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ದೊಡ್ಡ ಯಡವಟ್ಟು ಮಾಡಿಕೊಂಡಿದೆ. ಬಿಕಾಂ ಕೋರ್ಸ್‌ನ ಅಂತಿಮ ವರ್ಷದ ಪರೀಕ್ಷಾ ಫಲಿತಾಂಶದ ಅಂಕಪಟ್ಟಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಯಡವಟ್ಟು ಮಾಡಿಕೊಂಡಿದ್ದು, ಇದೀಗ ಅದನ್ನು ಸರಿಪಡಿಸಿಕೊಳ್ಳಲು ಮುಂದಾಗಿದೆ. ಕೋರ್ಸ್ ವಿಷಯ ಅಲ್ಲದ ಅಂಕಗಳ ಸೇರ್ಪಡೆ ಬಿಕಾಂ ವಿದ್ಯಾರ್ಥಿಗಳ ಅಂತಿಮ ವರ್ಷದ ಒಟ್ಟಾರೆ ಪರೀಕ್ಷಾ ಫಲಿತಾಂಶಕ್ಕೆ ಕೋರ್ಸ್ …
Read More »ಬೆಳಗಾವಿಯಲ್ಲಿ ದೇಶದ ಮೊದಲ ಸೆನ್ಸಾರ್ ಕಸದ ತೊಟ್ಟಿ! ವಿಶೇಷತೆ ಏನು?
ಬೆಳಗಾವಿ: ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಪರಿಸರ ಹಾಳಾಗುತ್ತಿರುವುದನ್ನು ತಡೆಯಲು ಶಾಸಕ ಅಭಯ ಪಾಟೀಲ್ ಅವರು ದೇಶದಲ್ಲೇ ಮೊದಲ ಸೆನ್ಸಾರ್ ತಂತ್ರಜ್ಞಾನ ಆಧಾರಿತ ಭೂಗತ ಕಸದ ತೊಟ್ಟಿಗಳನ್ನು ಬೆಳಗಾವಿಯ ತಮ್ಮ ಕ್ಷೇತ್ರದಲ್ಲಿ ಅಳವಡಿಸಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಯ ದಕ್ಷಿಣ ಮತ ಕ್ಷೇತ್ರದ ಎಲ್ಲ ವಾರ್ಡ್‌ಗಳಲ್ಲಿ ಅಂಡರ್ ಗ್ರೌಂಡ್ ಡಸ್ಟ್‌ಬಿನ್ (ಭೂಗತ ಕಸದ ತೊಟ್ಟಿ)ಯನ್ನು ಅಳವಡಿಸಿದ್ದಾರೆ. ಒಟ್ಟು 24 ಕಸದ ತೊಟ್ಟಿಗಳಿಗೆ ಆರ್ಡರ್ ಮಾಡಲಾಗಿದ್ದು, 18 ತೊಟ್ಟಿ ಗಳು ಕಾರ್ಯ ನಿರ್ವಹಿಸುತ್ತಿವೆ. ಸಂಪೂರ್ಣ …
Read More »ಮತ್ತೆ ಗೂಡಿಗೆ ಮರಳಿದ ಹಳ್ಳಿ ಹಕ್ಕಿ
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ವೇದಿಕೆ ಸಿದ್ದವಾಗುತ್ತಿರುವ ಬೆನ್ನಲ್ಲೇ ಈಗ ಎಚ್.ವಿಶ್ವನಾಥ್ ಕಾಂಗ್ರೆಸ್ ಪಕ್ಷ ಸೇರಲು ಒಲವು ತೋರಿದ್ದಾರೆ. ಇದಕ್ಕೆ ಪೂರಕವಾಗಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ. ಸದಾಶಿವನಗರದಲ್ಲಿಡಿ.ಕೆ.ಶಿವಕುಮಾರ್ಅವರನ್ನು ಅವರು ಭೇಟಿ ಮಾಡಿದರು.ಇತ್ತೀಚಿಗಷ್ಟೇ ಅವರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿ ಪಕ್ಷದ ಸೇರ್ಪಡೆ ವಿಚಾರವನ್ನು ಪ್ರಸ್ತಾಪಿಸಿದ್ದರು.ಈ ಸಂದರ್ಭದಲ್ಲಿ ಅವರು ರಾಜ್ಯ ನಾಯಕರನ್ನು …
Read More »ಬೆಟ್ಟ ಕುರುಬರಿಗೆ ಎಸ್‌ಟಿ ಸ್ಥಾನ; ಲೋಕಸಭೆಯಲ್ಲಿ ಮಸೂದೆ ಮಂಡನೆ
ಹೊಸದಿಲ್ಲಿ: ಕರ್ನಾಟಕದ ಮೈಸೂರು, ಚಾಮರಾಜನಗರ, ಕೊಡಗು ಸುತ್ತಲಿನ ಪ್ರದೇಶಗಳಲ್ಲಿ ವಾಸವಿರುವ ಬೆಟ್ಟ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ಪರಿಷ್ಕೃತ ಎಸ್‌ಟಿ ಪಟ್ಟಿಯನ್ನು ಲೋಕಸಭೆಯಲ್ಲಿ ಕೇಂದ್ರ ಸರಕಾರ ಶುಕ್ರವಾರ ಮಂಡಿಸಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಸಂವಿಧಾನ (ಪರಿಶಿಷ್ಟ ಪಂಗಡ) ಆದೇಶ, 1950ಕ್ಕೆ ತಿದ್ದುಪಡಿ ತರುವ ಮಸೂದೆ ಯನ್ನು ಮಂಡಿಸಿದ್ದಾರೆ. ಇದರಲ್ಲಿ ಈಗಾಗಲೇ ಎಸ್‌ಟಿ ಪಟ್ಟಿಯಲ್ಲಿರುವ ಕರ್ನಾಟಕದ ಕಾಡು ಕುರುಬರೇ ಬೆಟ್ಟ ಕುರುಬರು ಎಂಬುದನ್ನು ಸೇರಿಸಲಾಗಿದೆ. …
Read More »ಕಾಂತಾರ 2’ಗೆ ಪಂಜುರ್ಲಿಯ ಅನುಮತಿ ಕೇಳಿದ ಚಿತ್ರತಂಡ: ರಿಷಬ್‌ಗೆ ಎಚ್ಚರಿಕೆ ಕೊಟ್ಟ ದೈವ!
ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಮ್ಸ್ ‘ಕಾಂತಾರ’ ಸಿನಿಮಾದ ಯಶಸ್ಸಿನಿಂದ ಥ್ರಿಲ್ ಆಗಿದ್ದಾರೆ. ಕೇವಲ ಸುಮಾರು ಹದಿನೈದು ಕೋಟಿಯಲ್ಲಿ ನಿರ್ಮಿಸಿದ ಸಿನಿಮಾ 400 ಕೋಟಿಗೂ ಹೆಚ್ಚು ಹಣವನ್ನು ಚಿತ್ರಮಂದಿರಗಳಿಂದಲೇ ಕಲೆಕ್ಷನ್ ಮಾಡಿದೆ! ಕರ್ನಾಟಕ ಮಾತ್ರವೇ ಅಲ್ಲದೆ ಹೊರ ರಾಜ್ಯಗಳಲ್ಲಿಯೂ ‘ಕಾಂತಾರ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ನಿರೀಕ್ಷೆಗಿಂತಲೂ ಬಹುದೊಡ್ಡಮಟ್ಟದ ಗೆಲುವನ್ನು ಸಿನಿಮಾ ಕಂಡಿದೆ. ಇದಕ್ಕೆ ಚಿತ್ರತಂಡದ ಶ್ರಮದ ಜೊತೆಗೆ ದೈವದ ಆಶೀರ್ವಾದವೂ ಕಾರಣ ಎನ್ನಲಾಗುತ್ತಿದೆ. ದೈವವನ್ನು ನಂಬುವ …
Read More »ಬಿಜೆಪಿ ಶಾಸಕರಿಬ್ಬರೇ ಮೇಯರ್, ಉಪಮೇಯರ್:
ಜನಕಾಂಗ್ರೆಸ್ ಕಡೆ ಮುಖ ಮಾಡಲಿದ್ದಾರೆ : ಬೆಳಗಾವಿ ಮತ್ತು ಇಡೀ ರಾಜ್ಯಕ್ಕೆ ಬದಲಾವಣೆ ಮಾಡಬೇಕು ಅಂತಾ ನನ್ನ ಅನಿಸಿಕೆ. ಇದರಿಂದ 20 ಸೀಟ್ ಹೆಚ್ಚು ಗೆಲ್ಲಬಹುದು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಅಂತಾ ಜನ ನೋಡ್ತಿದ್ದಾರೆ. ಸಿದ್ದರಾಮಯ್ಯ ಕಾಲದ ಸಾಕಷ್ಟು ಯೋಜನೆ ಸ್ಥಗಿತ ಮಾಡಿದ್ದು ಜನರಿಗೆ ಗೊತ್ತಿದೆ. ಕುಟುಂಬಸ್ಥರಿಗೆ ಟಿಕೆಟ್ ನೀಡುವಂತೆ ಹಲವು ನಾಯಕರ ಅರ್ಜಿ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಕುಟುಂಬ ರಾಜಕಾರಣದಲ್ಲಿ ಗೆಲ್ಲುವ ಕೆಪ್ಯಾಸಿಟಿ ಇದ್ರೇ ಕೊಡಬಹುದು. …
Read More »ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನದಲ್ಲಿ ಭಾಗವಹಿಸಲ್ಲ:H.D.K.
ಮುಂದಿನ ರಾಜ್ಯದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲ್ಲ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಕುಮಾರಸ್ವಾಮಿ ಈಗಾಗಲೇ ಜಾತ್ಯಾತೀತ ಜನತಾದಳ ವತಿಯಿಂದ ಸಾಕಷ್ಟು ಚುನಾವಣೆ ತಯಾರಿ ನಡೆಸಲಾಗುತ್ತಿದೆ. ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪಂಚರತ್ನ ಸಮಾವೇಶವನ್ನು ನಡೆಸಲಾಗುತ್ತಿದ್ದು ಉತ್ತಮ ಪ್ರತಿಕ್ರಿಯೆ ಜನರಿಂದ ಬಂದಿದೆ . ಈಗಾಗಲೇ ಹಳೆ ಮೈಸೂರು ಭಾಗದಲ್ಲಿ ನಡೆಸಲಾಗುತ್ತದೆ. ಕೇಲವೇ ದಿನಗಳಲ್ಲಿ ಹೈದರಾಬಾದ್ …
Read More »
Laxmi News 24×7