Breaking News

Laxminews 24x7

ಏಕತಾ ನಡಿಗೆ ಅಭಿಯಾನಕ್ಕೆ ಜಗದೀಶ್ ಶೆಟ್ಟರ್ ಚಾಲನೆ

ಏಕತಾ ನಡಿಗೆ ಅಭಿಯಾನಕ್ಕೆ ಜಗದೀಶ್ ಶೆಟ್ಟರ್ ಚಾಲನೆ ಉಕ್ಕಿನ ಮನುಷ್ಯ ಪಟೇಲ್‌ಗೆ ಗೌರವ ಸಮರ್ಪಣೆ ಬೆಳಗಾವಿಗರಿಂದ ಉತ್ತಮ ಪ್ರತಿಕ್ರಿಯೆ ಹಲವರು ಏಕತಾ ನಡಿಗೆಯಲ್ಲಿ ಭಾಗಿ ಬೆಳಗಾವಿ: ಭಾರತದ ಉಕ್ಕಿನ ಮನುಷ್ಯ, ಸರದಾರ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಬೆಳಗಾವಿಯಲ್ಲಿ ಇಂದು ‘ಏಕತಾ ನಡಿಗೆ ಅಭಿಯಾನ’**ವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಕೇಂದ್ರ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಈ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಅಭಿಯಾನಕ್ಕೆ ಮಾಜಿ …

Read More »

ಬೆಳಗಾವಿಯ ಸಾಯಿರಾಜ್ ಟ್ರೋಫಿಗೆ ಶಾಸಕ ಅಭಯ್ ಪಾಟೀಲ್ ಚಾಲನೆ

ಬೆಳಗಾವಿಯ ಸಾಯಿರಾಜ್ ಟ್ರೋಫಿಗೆ ಶಾಸಕ ಅಭಯ್ ಪಾಟೀಲ್ ಚಾಲನೆ ಸಾಯಿರಾಜ್ ಟ್ರೋಫಿಗೆ ಇಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಇಂದು ವಿಧ್ಯುಕ್ತವಾಗಿ ಚಾಲನೆ ನೀಡಿದರು. ಬೆಳಗಾವಿ ನಗರದ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಪ್ರತಿಷ್ಠಿತ ಕ್ರಿಕೆಟ್ ಸಾಯಿರಾಜ್ ಟ್ರೋಫಿಗೆ ಇಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಹಾಪೌರ ಮಂಗೇಶ್ ಪವಾರ್, ಉಪಮಹಾಪೌರ ವಾಣಿ ಜೋಷಿ ಸೇರಿದಂತೆ ಇನ್ನುಳಿದ ಗಣ್ಯರು …

Read More »

ಖಾನಾಪೂರ ತಹಶೀಲ್ದಾರರಾಗಿ ಮಂಜುಳಾ ಕೆ. ನಾಯಕ್ ನೇಮಕ ; ದುಂಡಪ್ಪ ಕೋಮಾರ್ ವರ್ಗಾವಣೆ

ಖಾನಾಪೂರ :- ಖಾನಾಪೂರ ತಾಲೂಕಿನಲ್ಲಿ ಆಡಳಿತಾತ್ಮಕ ಬದಲಾವಣೆ ಸಂಭವಿಸಿದ್ದು, ತಾಲೂಕಿನ ತಹಶೀಲ್ದಾರ್ ದುಂಡಪ್ಪ ಕೋಮಾರ್ ಅವರನ್ನು ವರ್ಗಾಯಿಸಲಾಗಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಮಯ್ಯ ಅವರು ಈ ಸಂಬಂಧ ಆದೇಶಗಳನ್ನು ಹೊರಡಿಸಿದ್ದು, ಅವರ ಸ್ಥಾನಕ್ಕೆ ಶ್ರೀಮತಿ ಮಂಜುಳಾ ಕೆ. ನಾಯಕ್ ಅವರನ್ನು ಖಾನಾಪೂರದ ಹೊಸ ತಹಶೀಲ್ದಾರರಾಗಿ ನೇಮಕ ಮಾಡಲಾಗಿದೆ. ಈ ಕ್ರಮಕ್ಕೆ ಕಾರಣವಾದದ್ದು ಒಂದು ಕೃಷಿ ಸಂಬಂಧಿತ ಪ್ರಕರಣ. ಆ ಸಂಬಂಧಿತ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವು ಸರ್ವೇ ಕಾರ್ಯವನ್ನು ನಡೆಸುವಂತೆ ಸ್ಪಷ್ಟ ಆದೇಶ …

Read More »

ರೈತನಿಗೆ ಭೂ ಪರಿಹಾರ ಕೊಡದೇ ನಿರ್ಲಕ್ಷ್ಯ: ಕಾರ್ಯಪಾಲಕ ಇಂಜಿನಿಯರ್ ಕಚೇರಿ ಜಪ್ತಿ

ಮಂಡ್ಯ: ರೈತನಿಗೆ ಭೂ ಪರಿಹಾರ ಕೊಡದೇ ಸತಾಯಿಸಿದ ವಿಸಿ ನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ. ಮದ್ದೂರು ತಾಲೂಕಿನ ಹೆಬ್ಬೆರಳು ಗ್ರಾಮದ ರೈತ ಜವರೇಗೌಡ ಅವರಿಗೆ ಭೂ ಪರಿಹಾರ ಕೊಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು. ನೀರಾವರಿ ಇಲಾಖೆ ಅಧಿಕಾರಿಯ ನಿರ್ಲಕ್ಷ್ಯ ಧೋರಣೆಗೆ ಜಪ್ತಿ ಆದೇಶ ನೀಡಿ ಕೋರ್ಟ್ ಚಾಟಿ ಬೀಸಿತ್ತು. ಆದೇಶದಂತೆ ಮಂಗಳವಾರ (ನ.18) ಸರ್ಕಾರಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ …

Read More »

ಪುಟ್ಟ ಗಾತ್ರದ ‘ಕಿಯೊ’ ಪಿಸಿ ಬೆಂಗಳೂರು ಟೆಕ್ ಸಮ್ಮಿಟ್ ಆಕರ್ಷಣೆ: ಇದರ ಬೆಲೆ ಕೇವಲ 18,999 ರೂ.!

ಬೆಂಗಳೂರು: ಅಗ್ಗದ, ಪುಟ್ಟ ಗಾತ್ರದ ಕೃತಕ ಬುದ್ಧಿಮತ್ತೆಯ ಪರ್ಸನಲ್ ಕಂಪ್ಯೂಟರ್ ‘ಕಿಯೊ’ವನ್ನು ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಟೆಕ್ ಸಮ್ಮಿಟ್​​ನ ಆಕರ್ಷಣೆಯ ಕೇಂದ್ರಬಿಂದುವಾಗಿ ಹೊರಹೊಮ್ಮುತ್ತಿದೆ. ಬೆಂಗಳೂರು ಟೆಕ್ ಸಮ್ಮಿಟ್​​ನಲ್ಲಿ ಕಿಯೊನಿಕ್ಸ್ ಅಭಿವೃದ್ಧಿಪಡಿಸಿರುವ ಕಿಯೊ ಪಿಸಿಯನ್ನು ಅನಾವರಣಗೊಳಿಸಲಾಯಿತು‌. ಈ ಪುಟ್ಟ ಗಾತ್ರದ ಪಿಸಿ ಬೆಲೆ 18,999 ರೂ. ಇರಲಿದೆ. www.koonestinರಲ್ಲಿ ಕೆಇಒ ಖರೀದಿಯ ಮುಂಗಡ ಆರ್ಡರ್ ಮಾಡಬಹುದಾಗಿದೆ. ‘ಕಿಯೊ’ ಕಂಪ್ಯೂಟರನ್ನು ಸಂಪೂರ್ಣವಾಗಿ ಕರ್ನಾಟಕದಲ್ಲಿ ವಿನ್ಯಾಸಗೊಳಿಸಲಾದ ಮತ್ತು ಅಭಿವೃದ್ಧಿಪಡಿಸಲಾದ ಕಾಂಪ್ಯಾಕ್ಟ್ ಕೈಗೆಟುಕುವ, ಕೃತಕ …

Read More »

ಕೇಂದ್ರ ಕಬ್ಬು ನಿರ್ದೇಶನಾಲಯದ ನಿರ್ದೇಶಕರ ಜೊತೆ ಚರ್ಚೆ ನಡೆಸಿದ ಸಚಿವ ತಿಮ್ಮಾಪುರ

ಬಾಗಲಕೋಟೆ: ರಾಜ್ಯದಲ್ಲಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು, ಅದರಲ್ಲೂ ಜಿಲ್ಲೆಯ ಮುಧೋಳ ತಾಲೂಕಿನ ರೈತರಿಗೆ ಎದುರಾಗುತ್ತಿರುವ ತೀವ್ರ ಸಮಸ್ಯೆಗಳ ಕುರಿತು ಅಬಕಾರಿ ಸಚಿವ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರ್.ಬಿ.ತಿಮ್ಮಾಪುರ ಅವರು ಕೇಂದ್ರ ಕಬ್ಬು ಮತ್ತು ತೈಲ ಬೀಜಗಳ ನಿರ್ದೇಶನಾಲಯದ ನಿರ್ದೇಶಕ ಅರವಿಂದ ಕುಮಾರ್ ರಾವತ್​​ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ದೆಹಲಿಯ ಕೃಷಿ ಭವನದಲ್ಲಿ ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ …

Read More »

ಎಚ್‌.ಡಿ.ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪರಿಗಣಿಸಲು ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದ ಹೈಕೋರ್ಟ್

ಬೆಂಗಳೂರು: ಮನೆ ಕೆಲಸದ ಮಹಿಳೆಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ವಿರುದ್ಧದ ಆರೋಪವನ್ನು ಪರಿಗಣಿಸಲು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿರುವ ಹೈಕೋರ್ಟ್, ಮಹಿಳೆಯ ಘನತೆಗೆ ಚ್ಯುತಿ ಉಂಟು ಮಾಡಿದ ಆರೋಪದಲ್ಲಿ ಸಂಜ್ಞೆ ಪರಿಗಣಿಸಿದ್ದ ಕ್ರಮವನ್ನು ರದ್ದುಪಡಿಸಿ ಆದೇಶಿಸಿದೆ. ಹಾಸನದ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ …

Read More »

ಚಳಿಗಾಲದ ಅಧಿವೇಶನಕ್ಕೆ ಸಕಲ ಸಿದ್ಧತೆ: ಸಭಾಪತಿ ಬಸವರಾಜ ಹೊರಟ್ಟಿ

ಹಾವೇರಿ: ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲ ಅಧಿವೇಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಳಗಾವಿ ಚಳಿಗಾಲದ ಅಧಿವೇಶನ ಎಂದರೆ ಪ್ರತಿಭಟನೆಗೆ ಸೀಮಿತ ಎನ್ನುವ ಮಾತು ಇದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ಆರೋಪದಿಂದ ಅದನ್ನು ದೂರ ಮಾಡಬೇಕು. ಶಿಕ್ಷಣ, ಉದ್ಯೋಗ ಸೇರಿದಂತೆ ಅಭಿವೃದ್ಧಿ ‌ವಿಷಯ ಚರ್ಚೆಯಾಗಬೇಕು ಎಂದು ತಿಳಿಸಿದರು. ಕಬ್ಬು ಬೆಳೆಗಾರರ ಅನೇಕ ಸಮಸ್ಯೆಗಳು …

Read More »

ಇದೇ ಮೊದಲ ಬಾರಿಗೆ ಬೆಳಗಾವಿ ನಗರದಲ್ಲಿ ನ್ಯೂಸ್ 18 ಕನ್ನಡ ಸುದ್ದಿವಾಹಿನಿ ವತಿಯಿಂದ ಕರುನಾಡ ಹಬ್ಬ

ಇದೇ ಮೊದಲ ಬಾರಿಗೆ ಬೆಳಗಾವಿ ನಗರದಲ್ಲಿ ನ್ಯೂಸ್ 18 ಕನ್ನಡ ಸುದ್ದಿವಾಹಿನಿ ವತಿಯಿಂದ ಕರುನಾಡ ಹಬ್ಬ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆಯೋಜನೆ ಮಾಡಿರುವ ಕನ್ನಡ ಹಬ್ಬದಲ್ಲಿ ಮನೋರಂಜನೆಯ ಜೊತೆಗೆ ವೈವಿಧ್ಯಮಯ ತಿಂಡಿ, ತಿನಿಸು ಒಂದೇ ಸೂರಿನಡಿ ಸಿಗಲಿದೆ. ಹೆಸರಾಂತ ಕಲಾವಿದರು ಕರುನಾಡ ಹಬ್ಬದಲ್ಲಿ ನಿಮ್ಮನ್ನು ರಂಜಿಸಲಿದ್ದಾರೆ. ನೀವು ಬನ್ನಿ ನಿಮ್ಮ ಕುಟುಂಬಸ್ಥರು ಸ್ನೇಹಿತರನ್ನು ಕರೆ ತಂದು ಕನ್ನಡ ಹಬ್ಬ ಯಶಸ್ವಿಗೊಳಿಸಿ. ಕರುನಾಡ ಹಬ್ಬದ ಭಾಗವಾಗಿನಾಡಗೀತೆ ಗಾಯನಅಡಿಗೆ …

Read More »

ವ್ಯಕ್ತಿ ಮೇಲೆ ಹಲ್ಲೆ ಆರೋಪ: ಪೊಲೀಸ್ ಇನ್ಸ್​ಪೆಕ್ಟರ್ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ

ಬೆಂಗಳೂರು: ವ್ಯಕಿಯೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಆರೋಪ ಸಂಬಂಧ ಸಂಡೂರು ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಮಹೇಶ್ ಗೌಡ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಬೇಕು ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೈಕೋರ್ಟ್ ನಿರ್ದೇಶಿಸಿದೆ. ತನ್ನ ಮೇಲೆ ಭೀಕರವಾಗಿ ಹಲ್ಲೆ ನಡೆಸಿರುವ ಸಂಡೂರು ಠಾಣೆ ಪೊಲೀಸ್ ಇನ್ಸ್​ಪೆಕ್ಟರ್ ಮಹೇಶ್ ಗೌಡ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ಮಾಡಲು ಸರ್ಕಾರ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಬೇಕು ಎಂದು ಕೋರಿ ಬಳ್ಳಾರಿ ಜಿಲ್ಲೆಯ …

Read More »